ಶಿಕ್ಷಣದಿಂದ ಉತ್ತಮ ಜೀವನ- ಮಹಾಂತೇಶ ಪಾಟೀಲ್ ಅತ್ತನೂರು

ಸಿರವಾರ,ಮಾ.೬- ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣದಿಂದ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಜಿ.ಪಂ.ಮಾಜಿ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ ಪಾಟೀಲ್ ಹೇಳಿದರು.
ತಾಲೂಕಿನ ಅತ್ತನೂರು ಗ್ರಾಮದ ಶಾರದಾ ಪ್ರೌಢಶಾಲೆಯ ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ತಮ್ಮ ೫೮ನೇ ಜನ್ಮದಿನ ಆಚರಣೆ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಬಡತನದಿಂದ ಶಿಕ್ಷಣವನ್ನು ಬಿಡದೇ, ಛಲದಿಂದ ವಿದ್ಯೆಯನ್ನು ಕಲಿತು ಸಾಧನೆಮಾಡಿ ತೋರಿಸಬೇಕು.
ಅನೇಕ ಸಾಧಕರು ಕಷ್ಟ ಪಟ್ಟು ಕಲಿತು ಸಾಧನೆ ಮಾಡಿದವರ ಜೀವನ ಚರಿತ್ರೆ ಓದಿ, ಕಲಿಸಿದ ಗುರುಗಳಿಗೆ, ಶಾಲೆಗೆ, ಗ್ರಾಮಕ್ಕೆ, ತಂದೆ ತಾಯಿಗೆ ಕೀರ್ತಿಯನ್ನು ತರುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಬೂದಯ್ಯಸ್ವಾಮಿ, ಉದಯಕುಮಾರ, ಎಂ.ಚಂದ್ರಶೇಖರ, ವೀರಭದ್ರಯ್ಯಸ್ವಾಮಿ, ಸೂಗೂರಯ್ಯಸ್ವಾಮಿ, ಶಾಂತಪ್ಪ, ನವೀನ್ ಪಾಟೀಲ್, ಶಾಲೆಯ ಮು.ಗು.ಹಾಲಪ್ಪ, ಕಾರ್ಯದರ್ಶಿ ನಾಗರಾಜ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.