ಶಿಕ್ಷಣದಿಂದ ಆರ್ಥಿಕ ಸಬಲತೆ


ಮುಂಡಗೋಡ,ಜ.17: ಒಂದು ಸಮೂದಾಯ ಆರ್ಥಿಕವಾಗಿ ಮುಂದೆ ಬರಬೇಕಾರದೆ, ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂದು ಧಾರವಾಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ನೋಡಲ್ ಅಧಿಕಾರಿ ಮಂಜುನಾಥ ಸಾಳುಂಕೆ ಹೇಳಿದರು.
ತಾಲೂಕಿನ ಕಲಕೇರಿ ಗ್ರಾಮದಲ್ಲಿ ಆಯೋಜಿಸಲಾದ ತಾಲೂಕಾ ಮರಾಠಾ ನೌಕರರ ಪರಿಷತ್Àನ 4ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು ನಮ್ಮ ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಆ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ, ಮತ್ತು ಸಂಸ್ಕಾರ ನೀಡಿದರೆ ಮುಂದೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಮುಂದೆ ಬರುತ್ತಾರೆ. ಸಮೂದಾಯಕ್ಕೆ ನೌಕರರ ಪರಿಷತ್, ಅಲ್ಲದೇ ಸಮೂದಾಯದ ಸಂಘಟನೆಗಳು ಗಟ್ಟಿಯಾಗಿದ್ದರೆ. ಸರ್ಕಾರದ ಮಟ್ಟದಲ್ಲಿ ಸವಲತ್ತುಗಳನ್ನು ಪಡೆಯಲು ಅನೂಕುಲವಾಗುತ್ತದೆ. ನಾವು ಶಿಕ್ಷಣವಂತರಾದರೆ ಮಾತ್ರ ಮುಂದುವರೆದ ಸಮೂದಾಯದವರಂತೆ ಮೇಲ್ಮಟ್ಟಕೆ ಬರಲು ಹೋಗಲು ಸಾದ್ಯವಾಗುತ್ತದೆ ಎಂದರು.
ಈ ವೇಳೆ ಮರಾಠಾ ನೌಕರರ 2023 ನೇ ಸಾಲಿನ ದಿನದರ್ಶಿಕೆಯನ್ನು ಕಲಕೇರಿ ಗ್ರಾಮದ ಹಿರಿಯರಾದ ಕುಬೇರಪ್ಪ ಬೆಂಡಿಗೇರಿ ಬಿಡುಗಡೆಗೊಳಿಸಿದರು.
ಜಾನಪದ ರಾಜ್ಯ ಪ್ರಶಸ್ತಿ ಪಡೆದ ತಾಲೂಕಿನ ಕಲಾವಿದರಾದ ಸಹದೇವಪ್ಪ ನಡಗೇರಿ ಅವರನ್ನು ಹಾಗೂ ಮರಾಠಾ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕಲಕೇರಿ ಗ್ರಾಮದ ಬಡ ಪ್ರತಿಭಾ ವಿದ್ಯಾರ್ಥಿನಿಗೆ ಶಾಲು ಹೊದಿಸಿ ಸನ್ಮಾನಿಸಿ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಮರಾಠಾ ನೌಕರರ ಪರಿಷತ್ ಅಧ್ಯಕ್ಷ ಶಿಕ್ಷಕರಾದ ಪರಶುರಾಮ ತಡಸದ ವಹಿಸಿದ್ದರು. ಪರಿಷತ್‍ನ ಗೌರವಾಧ್ಯಕ್ಷ ಸುಭಾಷ ಡೋರಿ ಶಿಕ್ಷಕರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮುನ್ನ ಗ್ರಾಮದ ಆರಂಭದಿಂದ ಶಿವಾಜಿ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ಹಾಗೂ ಮಹಿಳೆಯರು ಕುಂಭ ಹೊತ್ತು ಮಾರಿಕಾಂಬಾ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮರಾಠಾ ಸಮಾಜದ ತಾಲೂಕಾಧ್ಯಕ್ಷ ಡಿ.ಎಫ್.ಮಡ್ಲಿ, ಮರಾಠಾ ಸಮಾಜದ ಮುಂಡಗೋಡ ಪಟ್ಟಣದ ಅಧ್ಯಕ್ಷರಾದ ಶ್ರೀಧರ ಡೋರಿ, ತಾಲೂಕ ಯುವ ಪರಿಷತ್ ಅಧ್ಯಕ್ಷ ನಾಗರಾಜ ಸಂಕನಾಳ,ಛತ್ರಪತಿ ಶಿವಾಜಿ ಬ್ಯಾಂಕ ಅಧ್ಯಕ್ಷ ಎಮ್.ಪಿ.ಕುಸೂರ, ಸಮಾಜದ ಮುಖಂಡರಾದ ವಾಯ್.ಪಿ.ಪಾಟೀಲ್, ಪಿ.ಜಿ.ಪಾಟೀಲ, ಜ್ಞಾನದೇವ ಗುಡಿಯಾಳ, ಪರಶುರಾಮ ತಹಶೀಲ್ದಾರ, ಲಕ್ಷ್ಮಣ ಬೆಂಡಿಗೇರಿ, ವೈ.ಪಿ.ಭುಜಂಗಿ, ಗೋಪಾಲ ಪಾಟೀಲ, ಶಿವರಾಜ ಸುಬ್ಬಾಯರ ಕರಿಯಣ್ಣ ಪಾಟೀಲ್, ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜ್ಞಾನ ಪ್ರಜ್ಞಾ ಅಂದ ಶಾಲೆಯ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು.