ಶಿಕ್ಷಣದಿಂದ ಅಮೂಲಾಗ್ರ ಬದಲಾವಣೆ ಸಾಧ್ಯ 

ಸಂಜೆವಾಣಿ ವಾರ್ತೆ

ಜಗಳೂರು.ಮಾ.೪::- ಮಾದಿಗ ಸಮಾಜ ಉನ್ನತ ಶಿಕ್ಷಣ ದಿಂದ ವಿಮುಖಗೊಳ್ಳುತ್ತಿದ್ದು.ಶಿಕ್ಷಣದಿಂದ ಸಮಾಜದಲ್ಲಿ ಅಮೂ ಲಾಗ್ರ ಬದಲಾವಣೆ ಸಾಧ್ಯ ಎಂದು ಹಿರಿಯೂರು ಆದಿಜಾಂಭವ ಮಹಾಸಂಸ್ಥಾನ ಕೋಡಿಹಳ್ಳಿ ಪೀಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಸೂರಡ್ಡಿಹಳ್ಳಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮಶಾಖೆ ನಾಮಫಲಕ ಉದ್ಘಾಟನೆ ಕಾರ್ಯ ಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ದಲಿತ ಸಂಘಟನೆಗಳು ಸಾಮರಸ್ಯ ತೆ,ಸಮನ್ವಯತೆ ಕಾಪಾಡಬೇಕು.ಸಹೋದರ ಸಮಾಜ ದವರೊಡನೆ ವೈಮನಸ್ಸು ಉಂಟಾದರೆ. ಸಂಘರ್ಷ ನಡೆ ಸದೆ ಮುಖಂಡರುಗಳು ಮಧ್ಯಸ್ಥಿಕೆವಹಿಸಿ ಶಾಂತಿ ಸಭೆ ನಡೆಸಬೇಕು.ಉತ್ತಮ ಸಂಸ್ಕೃತಿ ಹೊಂದಿದ ಮಾದಿಗ ಸಮಾಜದವರು ಸೌಹಾರ್ದತೆಯಿಂದ ಜೀವನ ಸಾಗಿಸು ತ್ತಾ ಸಮಾಜದಲ್ಲಿ ಗೌರವ,ಮನ್ನಣೆಗೆ ಪಾತ್ರರಾಗಬೇಕು ‘ಎಂದು ಕಿವಿಮಾತು ಹೇಳಿದರು.ಮಾದಿಗ ಸಮಾಜದ ಹೆಣ್ಣುಮಕ್ಕಳು,ಯುವಕರು, ಬಡ ತನ,ಕೌಟುಂಬಿಕ ಸಮಸ್ಯೆ ನೆಪಯೊಡ್ಡಿ ಶಿಕ್ಷಣವನ್ನು ಅರ್ಧ ಕ್ಕೆ ಮೊಟಕುಗೊಳಿಸದೆ.ಉತ್ತಮ ವ್ಯಾಸಂಗದೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೈಯಬೇಕು ಎಂದು ಸಲಹೆ ನೀಡಿದರು.ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,ದೇಶದಲ್ಲಿ ಮಹಿಳೆಯರನ್ನೊಳಗೊಂಡಂತೆ ಎಲ್ಲಾ ವರ್ಗದವರಿಗೆ ಸಮಾನತೆ,ಶಿಕ್ಷಣ,ಮತದಾನ,ಅಧಿ ಕಾರ,ಆಸ್ತಿ ಹಕ್ಕನ್ನು ಕಲ್ಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಅಪಾಯದ ಅಂಚಿನಲ್ಲಿದ್ದು ಶ್ರೇಷ್ಠ ಸಂವಿಧಾನವನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿ ಸಿದ ಮನಸ್ಥಿತಿಗಳು ಬದಲಾಗಬೇಕಿದೆ ಎಂದು ಹೇಳಿದರು.ಜಯಂತಿ ಕಾರ್ಯಕ್ರಮಗಳಲ್ಲಿ ಮಹಾನೀಯರ ಆದರ್ಶ ಮತ್ತು ಸಂದೇಶಗಳು ಯುವಸಮೂಹಕ್ಕೆ ತಲುಪುವಂತೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳನ್ನು ಆಯೋಜಿಸಬೇಕು ಕೇವಲ ಮೆರವಣಿಗೆ ಸಂಭ್ರಮಕ್ಕೆ ಮಿತಿಗೊಳಿಸಬಾರದು ಎಂದರು.ದಲಿತ ಮುಖಂಡ ಶಂಭುಲಿಂಗಪ್ಪ ಮಾತನಾಡಿ,’ಪ್ರೊ.ಕೃಷ್ಣ ಪ್ಪ ಅವರ ದಲಿತ ಸಂಘರ್ಷ ಸಮಿತಿ ಯ ಅಸ್ಮಿತೆಯನ್ನು ಹರಿದು ಹಂಚಿಹೋಗಿರುವ ಹತ್ತಾರು ಬಣಗಳ ದಲಿತ ಸಂಘಟನೆಗಳು ಅರಿಯಬೇಕಿದೆ.ಶೋಷಿತರಿಗೆ ಅಷ್ಟೇ ಅಲ್ಲದೆ ಸಮಾಜದಲ್ಲಿ ಯಾರೊಬ್ಬ ವ್ಯಕ್ತಿಗೂ ಶೋಷಣೆ ನಡೆದಲ್ಲಿ ದಲಿತ ಸಂಘಟನೆಗಳು ಧ್ವನಿಯಾಗ ಬೇಕು. ಸಂಘಟನೆ ನಾಯಕತ್ವದಲ್ಲಿ ಪ್ರಾಮಾಣಿಕತೆ ಅಗತ್ಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಡಿಎಸ್ ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜು ನಾಥ್ ಮಾತನಾಡಿ,’ದೇಶದಲ್ಲಿ ಮನುವಾದ ಅಳಿಸಿ ಪ್ರಜಾ ಪ್ರಭುತ್ವ ಉಳಿಸಿದ ಶ್ರೇಷ್ಠ ಗ್ರಂಥ ಸಂವಿಧಾನವಾಗಿದೆ.ಚುನಾವಣೆ ಸಂದರ್ಭದಲ್ಲಿ ಸಂವಿಧಾನಬದ್ದ ಮತದಾನದ ಹಕ್ಕನ್ನು ಆಮಿಷೆಗೊಳಗಾಗಿ ಮಾರಾಟಮಾಡಿಕೊಳ್ಳದೆ. ಸಂವಿಧಾನ ವಿರೋಧಿಗಳಿಗೆ ತಿರಸ್ಕರಿಸಿ ತಕ್ಕಪಾಠಕಲಿಸ ಬೇಕು’ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಅಂಬೇಡ್ಕರ್ ಪುತ್ಥಳಿ ಸಮಿತಿ ಅಧ್ಯಕ್ಷ ಪೂಜಾರ್ ಸಿದ್ದಪ್ಪ,ಡಿ ಎಸ್ ಎಸ್ ತಾಲೂಕು ಸಂಚಾಲಕ ಕುಬೇಂದ್ರಪ್ಪ,ಪ.ಪಂ ಉಪಾಧ್ಯಕ್ಷೆ ನಿರ್ಮಲಕುಮಾರಿ, ಗ್ರಾ.ಪಂ ಅಧ್ಯಕ್ಷೆ ರಣದಮ್ಮ,ಉಪಾಧ್ಯಕ್ಷ ವಿರೇಶ್,ಸದಸ್ಯ ರಾದ ಪೂಜಾರ್ ಬಸಣ್ಣ,ಕರಿಬಸಮ್ಮ,ಮಂಜುಳಾ, ನೀಲ ಮ್ಮ,ಮುಖಂಡರಾದ ಶಿವಕುಮಾರ್ ಸ್ವಾಮಿ,ವಕೀಲ ಹನುಮಂತಪ್ಪ, ನಾಗಲಿಂಗಪ್ಪ, ಬಸಣ್ಣ,ಪಲ್ಲಾಗಟ್ಟೆ ರಂಗಪ್ಪ,ಶಿವಕುಮಾರ್,  ಉಮೇಶ್,ಪಾಂಡು ವ್ಯಾಸಗೊಂಡನಹಳ್ಳಿ, ಗ್ರಾಮಘಟಕದ ಅಧ್ಯಕ್ಷ ನಿಂಗರಾಜ್,ಮಲ್ಲೇಶ್, ರವಿ ಕುಮಾರ್,ಮಂಜುನಾಥ್,ಸೇರಿದಂತೆ ಭಾಗವಹಿಸಿದ್ದರು.