ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ

ಕಲಬುರಗಿ,ಮಾ.14- ವ್ಯಕ್ತಿಯ ಸವಾರ್ಂಗೀಣ ಅಭಿವೃದ್ಧಿಗೆ ಶಿಕ್ಷಣವು ಪೂರಕವಾಗಲಿದ್ದು ಆ ದಿಸೆಯಲ್ಲಿ ಪೆÇೀಷಕರು ಮತ್ತು ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಚಿಂಚೋಳಿ ಶಾಸಕÀ ಡಾ.ಅವಿನಾಶ ಜಾಧವ ಕರೆ ನೀಡಿದರು.
ಅವರು ಕಾಳಗಿ ಸಮೀಪದ ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಾಲಾ ವಾರ್ಷಿಕೋತ್ಸವ ಮತ್ತು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಗುರಿ ತಲುಪಲು ವಿದ್ಯಾರ್ಥಿನಿಯರು ಶ್ರಮಿಸಬೇಕೆಂದು ಹೇಳಿದರು.
ಪ್ರಾಂಶುಪಾಲರ ಕೋರಿಕೆಯಂತೆ ಮುಂದಿನ ದಿನಗಳಲ್ಲಿ ಶಾಲೆಗೆ ಕಾಂಪೌಂಡ್ ವಾಲ್ ನಿರ್ಮಾಣ ಮತ್ತು ಹೈ ಮಾಸ್ಟ್ ದೀಪದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದ ಅವರು ಹತ್ತನೇ ತರಗತಿ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆಯಲು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕೋಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ತಾಂಡೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಆಗಮಿಸಿ ಮಾತನಾಡಿದರು.
ರಾಜ್ಯ ಉಪಾಧ್ಯಕ್ಷ ಪರಮೇಶ್ವರ ದೇಸಾಯಿ,ಕಾಳಗಿ ಅಧ್ಯಕ್ಷ ಮಹಾಂತೇಶ ಪಂಚಾಳ, ಗ್ರಾ.ಪಂ ಸದಸ್ಯರಾದ ಮಲ್ಲಪ್ಪ ಚಿಂತಕುಂಟ, ರೇವಣಸಿದ್ದಪ್ಪ ತೆಳಗಿನದೊಡ್ಡಿ, ಬಾಲಾಜಿ ಜಮಾದಾರ,ರಮೇಶ ನಾಲವಾಡೆ, ರೇವಣಸಿದ್ದ ಕಟ್ಟಿಮನಿ, ಕ್ರೈಸ್ ಡಿಸಿಓ ಶಿವರಾಂ ಚವ್ಹಾಣ, ಪ್ರಾಂಶುಪಾಲರಾದ ಶರಣಬಸಪ್ಪ ಮಾಗಶೆಟ್ಟಿ, ಮಲ್ಲಿಕಾರ್ಜುನ ಬಿರಾದಾರ, ಸಿದ್ದಪ್ಪ ತಂಬಾಕೆ, ಮಲ್ಲಪ್ಪ ಹಿರೆಮಾಳ, ಆನಂದ ಕೊಡೆಕಲ್, ಸಿ ಆರ್ ಪಿ ಪ್ರಕಾಶ, ನಿಲಯಪಾಲಕ ಶಿವಕುಮಾರ ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿ ಗಂಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್ ಅಧ್ಯಕ್ಷತೆ ವಹಿಸಿದ್ದರು.
ಸಂಗೀತ ಶಿಕ್ಷಕ ಮಹಾಂತಪ್ಪ ಹಡಗಿಲ ಹಾರೂತಿ ಪ್ರಾರ್ಥಿಸಿದರು, ನಾಗಶೆಟ್ಟಿ ಸ್ವಾಗತಿಸಿದರು. ಶಿವಾನಂದ ಬೀಳಗಿ ಶಾಲಾ ವರದಿ ವಾಚಿಸಿದರು. ಮಹೇಶ ಎಸ್.ಜಿ ನಿರೂಪಿಸಿದರು.
ನಂತರ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮಕ್ಕೂ ಮುಂಚೆ ವಸತಿ ಶಾಲೆಯ ಪಾಲಕ ಪೆÇೀಷಕರ ಸಭೆ ನಡೆಯಿತು.