ಶಿಕ್ಷಣದಷ್ಟೇ ಸಂಸ್ಕಾರವು ಮುಖ್ಯ:ಪ್ರೊ.ಲಮಾಣೆ

ತಾಳಿಕೋಟೆ:ಫೆ.6: ಮಕ್ಕಳು ಶಿಕ್ಷಣ ಕಲಿಯುವಾಗ ಶಿಕ್ಷಣ ಹೇಗೆ ಪಡೆದುಕೊಳ್ಳುತ್ತಾರೆಂಬುದು ಮುಖ್ಯವಾಗುವದಿಲ್ಲಾ ಶಿಕ್ಷಣದಷ್ಟೇ ಸಂಸ್ಕಾರವು ಹೇಗೆ ಪಡೆದುಕೊಂಡಿದ್ದಾರೆ ಯಾವ ರೀತಿಯಾಗಿ ವರ್ತಿಸುತ್ತಾರೆಂಬುದು ಇಡೀ ಸಮಾಜವು ಗಮನಸುತ್ತಿರುತ್ತದೆ ಎಂದು ಮುದ್ದೇಬಿಹಾಳ ಎಂ.ಜಿ.ವ್ಹಿ.ಸಿ.ಕಾಲೇಜ್‍ನ ಉಪನ್ಯಾಸಕ ವ್ಹಿ.ಎಸ್.ಲಮಾಣಿ ಅವರು ಹೇಳಿದರು.
ರವಿವಾರರಂದು ಪಟ್ಟಣದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಶ್ರೀ ಭಾಗ್ಯವಂತಿ ವಿಜ್ಞಾನ ಪಧವಿ ಪೂರ್ವ ಕಾಲೇಜ್ ಹಾಗೂ ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜ್‍ನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕøತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಕೇವಲ ಶಿಕ್ಷಣ ಕಲಿಸಿದರೆ ಗುರುವಾಗುವದಿಲ್ಲಾ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ತಂದೆ ತಾಯಿಯ ಸ್ವರೂಪದಲ್ಲಿ ನಿಂತು ಸಂಸ್ಕಾರವನ್ನು ಬಿತ್ತುವಂತಹ ಕಾರ್ಯ ಮಾಡಬೇಕು ಅಂದಾಗ ಮಕ್ಕಳಿಗೆ ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಸಂಸ್ಕಾರಯುತ ಬಧುಕನ್ನು ರೂಪಿಸಿದಂತಾಗುತ್ತದೆ ಅಂತಹ ಕಾರ್ಯವನ್ನು ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಮತಿ ಸವೀತಾ ತಳ್ಳೊಳ್ಳಿ ಅವರು ತಾಯಿಯ ಸ್ವರೂಪದಲ್ಲಿ ಸಂಸ್ಕಾರಯುತ ಪಾಠ ಭೋದನೆ ಮಾಡಿರುವದು ಮಕ್ಕಳಲ್ಲಿ ನಾವು ನೀವೆಲ್ಲರೂ ಇಂದು ಕಾಣುತ್ತಿದ್ದೇವೆಂದ ಅವರು ಒಬ್ಬ ತಾಯಿಯಾಗಿ ಯಾವ ರೀತಿ ತನ್ನ ಮಗುವಿಗೆ ಹೆಜ್ಜೆ ಹಾಕುವದನ್ನು ಕಲಿಸುತ್ತಾರೋ ಹಾಗೆ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತಗೆ ಸಂಸ್ಕಾರಯುತ ಬಧುಕನ್ನು ರೂಪಿಸುವಂತಹ ಕಾರ್ಯ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯಲ್ಲಿ ಮಾಡಲಾಗಿದೆ ಇದನ್ನು ವಿಧ್ಯಾರ್ಥಿಗಳ ಸಾಧನೆಯ ಹೆಜ್ಜೆಯಲ್ಲಿ ಗುರುತಿಸಬಹುದಾಗಿದೆ ಎಂದರು. ವಿದ್ಯಾರ್ಥಿಗಳಲ್ಲಿ ಹಠವೆಂಬುದು ಇರಬೇಕು ಹಠವೆಂಬುದು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೊಗಲಿದೆ ಯಾವುದೇ ಮಕ್ಕಳನ್ನು ದಡ್ಡವೆಂದು ಕರೆಯಬಾರದು ಇದು ಸಮಾಜದಲ್ಲಿ ಪ್ರತಿದ್ವನಿಯಾಗುತ್ತಾ ಮಕ್ಕಳಮೇಲೆ ಪರಿಣಾಮ ಬೀರುತ್ತದೆ ಮಕ್ಕಳನ್ನು ಸರಿದಾರಿಯತ್ತ ತೆಗೆದುಕೊಂಡು ಹೊಗುವಂತಾಗಬೇಕು ನಿಮ್ಮ ಸ್ಪರ್ದೆ ನಿಮ್ಮ ಜೊತೆಯಲ್ಲಿ ಇರಬೇಕು ಮಗ್ಗಲಮನೆಯ ಹುಡಗ ಶ್ಯಾಣೆ ಕಂಡರೆ ಮಕ್ಕಳಿಗೆ ಕಿರಿ ಕಿರಿ ಮಾಡಲಿಕ್ಕೆ ಹೊಗುತ್ತೇವೆ ಅದು ಆಗಭಾರದು ನಮ್ಮ ಮಕ್ಕಳಿಗೆ ವೈರಿ ರೀತಿ ನೊಡಬಾರದು ಸಮಾದಾನ ರಿತಿಯಲ್ಲಿ ಭಾವನಾತ್ಮಕವಾಗಿ ಮಕ್ಕಳೊಂದಿಗೆ ಚರ್ಚಿಸಿ ಸಮಸ್ಯಯನ್ನು ಹೋಗಲಾಡಿಸುವಂತಹ ಕೆಲಸ ಪಾಲಕರಾದವರು ಮಾಡಬೇಕು ಆವಾಗ ಮಕ್ಕಳಿಗೆ ಸಾಧನೆಯ ದಾರಿ ಸಿಗಲು ಸಾದ್ಯವಾಗಲಿದೆ ಜೀವನದಲ್ಲಿ ಯಾವುದಾದರೂ ಋಣ ತೀರಿಸಬಹುದು ತಂದೆ ತಾಯಿಯ ಋಣ ತೀರಿಸಲಾಗುವದಿಲ್ಲಾ ನಿತ್ಯ ತಂದೆ ತಾಯಿಯನ್ನು ಗೌರಯುತವಾಗಿ ಕಾಣುವದರೊಂದಿಗೆ ಪೂಜಿಸಿದರೆ ನಿಮ್ಮ ಯಶಸಿನ ಹಾದಿ ಸುಗಮವಾಗಲಿದೆ ಎಂದು ಮಕ್ಕಳಿಗೆ ಬಹು ಮಾರ್ಮಿಕವಾಗಿ ತಂದೆ, ಯಾಯಿ, ಮಕ್ಕಳ ಕಥೆಯೊಂದಿಗೆ ವಿವರಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುದ್ದೇಬಿಹಾಳ ಎಂ.ಜಿ.ಎಂ.ಕೆ.ಕಾಲೇಜ್‍ನ ಪ್ರಾಚಾರ್ಯ ಎಸ್.ಕೆ ಹರನಾಳ ಅವರು ಮಾತನಾಡಿ ತಾಯಿ ಕೊಟ್ಟಳು ತುತ್ತು ತಂದೆ ಕೊಟ್ಟ ಮುತ್ತು ಗುರು ಕೊಟ್ಟ ವಿದ್ಯೆ ಎಂಬ ಗಾಧೆಯಂತೆ ತಾಯಿಯನ್ನು ಗೌರವಿಸುವದರೊಂದಿಗೆ ಬೆಳೆದು ನಿಂತವರು ದೇಶದಲ್ಲಿ ಅನೇಕ ಜನರು ಮಹಾ ಪುರುಷರಾಗಿ ಹೋಗಿದ್ದಾರೆ ಈ ನಮ್ಮ ಭಾರತ ಜ್ಞಾನಿಗಳ ನಾಡು, ಯೋಗಗಳ ನಾಡುವಾಗಿದೆ ಈ ದೇಶದ ಸಂಸ್ಕøತಿಯನ್ನು ಇಡೀ ವಿಶ್ವವೇ ಗೌರವಿಸುತ್ತದೆ ಅಂತಹ ದೇಶದಲ್ಲಿ ಜನಿಸಿದ ನಾವು ಪುಣ್ಯವಂತರಾಗಿದ್ದೇವೆ ಎಲ್ಲ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆಯಾಗಿ ಹೊರಹೊಮ್ಮಬೇಕು ಉತ್ತಮ ಶಿಕ್ಷಣದೊಂದಿಗೆ ಸಂಸ್ಕಾರಯುತ ಬಧುಕಿನೆಡೆಗೆ ಸಾಗಲೆಂಬ ಉದ್ದೇಶದಿಂದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯನ್ನು ಡಾ.ವೀರೇಶ ತಳ್ಳೊಳ್ಳಿ ಅವರು ಕಟ್ಟಿದ್ದಾರೆ ಸಮಾಜದಲ್ಲಿಯ ಕಟ್ಟ ಕಡೆಯ ವಿಧ್ಯಾರ್ಥಿಗೂ ಕೂಡಾ ಕಡಿಮೆ ಫಿ ನಲ್ಲಿ ಉತ್ತಮ ಶಿಕ್ಷಣ ಸಿಗಲಿ ಎಂಬ ಉದ್ದೇಶ ಅವರದ್ದಾಗಿದೆ ಜಿಲ್ಲೆಯಲ್ಲಿಯೇ ದಿನಕ್ಕೆ 200 ಕ್ಕೂ ಅಧಿಕ ಬಡರೋಗಿಗಳಿಗೆ ಚಿಕೀತ್ಸೆ ನೀಡುತ್ತಿರುವ ಏಕೈಕ ವೈಧ್ಯರೆನಿಸಿಕೊಂಡಿದ್ದಾರೆ ಇವರು ತಾವು ಶಿಕ್ಷಣ ಕಲಿಯುವ ಸಮಯ ಪಟ್ಟ ಕಷ್ಟ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಬರಬಾರದೆಂಬ ಉದ್ದೇಶದಿಂದ ಸಂಸ್ಥೆಯನ್ನು ಕಟ್ಟಿದ್ದಾರೆ. ಶ್ರದ್ದೆಯಿಂದ ಓದುವದರೊಂದಿಗೆ ಸಾಧನೆಯ ತವಕದೊಂದಿಗೆ ಮುನ್ನಡೆಯುತ್ತಾ ಸಾಗಿದರೆ ವಿಧ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾದ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚಿಕ್ಕಮಕ್ಕಳ ತಜ್ಞವೈಧ್ಯ ಡಾ.ವೀರೇಶ ತಳ್ಳೋಳ್ಳಿ ಅವರು ಮಾತನಾಡಿ ಒಬ್ಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿಧ್ಯಾರ್ಥಿ ಲಕ್ಷಾಂತರ ಫಿ ಕಟ್ಟಿ ಕಲಿಯುವದು ತುಂಬಾ ಕಷ್ಟಕರವಾಗಿದೆ ರೈತರ ಮಕ್ಕಳು ಬಡವರ ಮಕ್ಕಳು ಉತ್ತಮ ಉನ್ನತ ವ್ಯಾಸಂಗ ಮಾಡಬೇಕಾಗಿದೆ ಇದನ್ನು ಮನಗಂಡು ಕಡಿಮೆ ಫಿನಲ್ಲಿ ಮಕ್ಕಳು ಉತ್ತಮ ಶಿಕ್ಷಣಪಡೆಯಲಿ ಎಂಬ ಉದ್ದೇಶದೊಂದಿಗೆ ನಾನು ದುಡಿದ ಪ್ರತಿ ಬೆವರಿನ ಹನಿಯಿಂದ ಈ ಸಂಸ್ಥೆಯನ್ನು ಕಟ್ಟಲಾಗಿದೆ ನಾನು ಕಾಲೇಜ್ ಕಟ್ಟಡ ಕಟ್ಟಬಹುದು ಆದರೆ ಈ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಸಾಧನೆ ಮಾಡಿದಾಗ ಈ ಸಂಸ್ಥೆ ಕಟ್ಟಿದ್ದಕ್ಕೂ ಸಾರ್ಥಕವಾಗಲಿದೆ ನಮ್ಮ ಬಳಿ ವಿದ್ಯೆ ಎಂಬುದು ಇದ್ದರೆ ಏನಾದರೂ ಸಾಧನೆ ಮಾಡಬಹುದು ಜ್ಞಾನ ಶಕ್ತಿಯ ಜೊತೆಗೆ ಏಕಾಗ್ರತೆ ಎಂಬುದು ವಿದ್ಯಾರ್ಥಿಗಳಿಗೆ ಅವಶ್ಯವಿದೆ ಏಕಾಗ್ರತೆಯನ್ನು ರೂಡಿಸಿಕೊಳ್ಳುವದನ್ನು ವಿದ್ಯಾರ್ಥಿಗಳು ಕಲಿಯಬೇಕು ಇದರಿಂದ ಪುಸ್ತಕದಲ್ಲಿಯ ಅಕ್ಷರ ಮಸ್ತಕದಲ್ಲಿ ಮೂಡಲು ಸಾಧ್ಯವಾಗಲಿದೆ ಎಂದು ಸ್ವಾಮಿ ವಿವೇಕಾನಂದರು ಹೊಂದಿದ್ದ ಅಪಾರವಾದ ಜ್ಞಾನದಿಂದ ಇಡೀ ವಿಶ್ವದಲ್ಲಿಯೇ ಅವರ ಹೆಸರು ಪ್ರಜ್ವಲಿಸಿದ್ದರ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು ಸಾನಿದ್ಯ ವಹಿಸಿದ್ದ ಮಾವಿನಭಾವಿಯ ಶ್ರೀ ಬಸವರಾಜ ಗುರೂಜಿ ಅವರು ಮಾತನಾಡಿದರು.
ಇಲಕಲ್ಲದ ವ್ಹಿ.ಸಿ.ಅಕ್ಕಿ ಸ್ಮಾರಕ ಸಂಘದ ಆಡಳಿತಾಧಿಕಾರಿ ಅವಿನಾಶ ಅಕ್ಕಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರೋ.ಶ್ರೀಕಾಂತ ಪಾಟೀಲ ಅವರು ಪರಿಕ್ಷೆಗಳನ್ನು ಯಾವ ರೀತಿಯಾಗಿ ಎದುರಿಸಬೇಕೆಂಬುದರ ಕುರಿತು ವಿವರಿಸಿದರು. ವಿಧ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ಸಮಯದಲ್ಲಿ ಭಾಗೇಶ ತಳ್ಳೊಳ್ಳಿ, ಸ್ವಪ್ನಾ ಪಡಸಾಲಿ, ಸುಮಯ್ಯಾ ಲಾಹೋರಿ, ಭಾಗ್ಯಶ್ರೀ ಗೋನಾಳ, ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೆದಿಕೆಯ ಮೇಲೆ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸವೀತಾ ವೀ. ತಳ್ಳೊಳ್ಳಿ, ನ್ಯಾಯವಾದಿ ಡಿ.ವಾಯ್.ಮೇಟಿ, ಪ್ರಾಚಾರ್ಯ ಡಿ.ಎಲ್.ಬನಸೋಡೆ, ಹುಗ್ಗಿ, ರಾಜಹ್ಮದ, ಮೊದಲಾದವರು ಇದ್ದರು.
ಪ.ಪೂ.ಕಾಲೇಜ್ ಪ್ರಾಚಾರ್ಯ ರಮೇಶ ಪೂಜಾರಿ ಹಾಗೂ ನರ್ಸಿಂಗ್ ಕಾಲೇಜ್‍ನ ಕು.ಅಶ್ವೀನಿ ಮೇಡಂ ಅವರು ವರಧಿ ವಾಚಿಸಿದರು.
ಇಲಿಯಾಸ ಚೌದ್ರಿ ನಿರೂಪಿಸಿದರು. ನರ್ಸಿಂಗ್ ಕಾಲೇಜ್ ಪ್ರಾಚಾರ್ಯ ಅನೀಲ ಪತ್ರಿಮಠ, ವಂದಿಸಿದರು.