
ವಿಜಯಪುರ :ಮೇ.12: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಮಹತ್ವ ನೀಡಲು, ರವೀಂದ್ರನಾಥ್ ಟ್ಯಾಗೋರ್ರ ತತ್ವ- ಚಿಂತನೆಗಳೇ ಪ್ರಮುಖ ಕಾರಣ ಎಂದು ಮಾತೃಭಾಷೆಯಲ್ಲಿನ ಶಿಕ್ಷಣದ ಬಲವಾದ ಸಮರ್ಥಕರೊಲ್ಲಬ್ಬರಾದ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುರುದೇವ ರವೀಂದ್ರನಾಥ ಠಾಗೋರ್ರವರು ಯಾವಾಗಲೂ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮಗುವಿಗೆ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಿದ್ದಲ್ಲಿ, ಅವನ ಆಲೋಚನಾ ಮತ್ತು ಸಂಶೋಧನಾ ಸಾಮಥ್ರ್ಯವನ್ನು ತೀವ್ರವಾಗಿ ನಿಬರ್‍ಂಧಿಸಿದ ಹಾಗಾಗುತ್ತದೆ ಎನ್ನುವುದು ಅವರ ತತ್ವವಾಗಿತ್ತು ಎಂದು ರವೀಂದ್ರನಾಥ್ ಟ್ಯಾಗೋರರ ಜನ್ಮದಿನ ಸಂದರ್ಭದಲ್ಲಿ ಮಹಾನ್ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.
ಮಾತೃಭಾಷೆಯಲ್ಲಿನ ಶಿಕ್ಷಣ ನೀಡುವ ಗುರುದೇವರ ಚಿಂತೆನೆ ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. ವಿದೇಶಿ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಗಳನ್ನು ವೈಭವೀಕರಿಸುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಗುರಿಯಾಗಬಾರದು ಎಂದು ಗುರುದೇವರು ನಂಬಿದ್ದರು. ಉರು ಹೊಡೆಯಲು ಹೇಳಿಕೊಡುವ ಶಿಕ್ಷಣಕ್ಕೆ ವಿರುದ್ಧವಾಗಿ ಗುರುದೇವ ರವೀಂದ್ರನಾಥ ಟ್ಯಾಗೋರ್ರವರು ಶಿಕ್ಷಣದ ಈ ಹೊಸ ಕಲ್ಪನೆಯನ್ನು ಮುಂದಿಟ್ಟಿದ್ದರು ಎಂದು ಟ್ಯಾಗೋರ್ರ ಅಮರ ಕೃತಿಗಳನ್ನು ಅಪಾರವಾಗಿ ಓದುವ, ಗೃಹ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಶಾಂತಿನಿಕೇತನದಲ್ಲಿ, ಟ್ಯಾಗೋರ್ರವರು ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಆಧುನಿಕ ಕಲಿಕೆಯ ತಂತ್ರಗಳೊಂದಿಗೆ ಸಂಯೋಜಿಸಿದ್ದರು. ಹಾಗೇ ಮಾತೃಭಾಷೆಯಲ್ಲಿನ ಕಲಿಕೆಗೆ ಅತ್ಯುನ್ನತ ಮಹತ್ವ ನೀಡಿದ್ದರು. ಒಬ್ಬ ವ್ಯಕ್ತಿ ತನ್ನ ಮಾತೃಭಾಷೆಯನ್ನು ಬಳಸದೆ ತನ್ನ ಅಂತರಂಗವನ್ನು ಅನ್ವೇಷಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತೃಭಾಷೆಯಲ್ಲಿನ ಶಿಕ್ಷಣವನ್ನು ಅಳವಡಿಸಿಕೊಳ್ಳುವುದಕ್ಕೆ ಟ್ಯಾಗೋರ್ರವರ ಬೋಧನೆಗಳೆ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
“ಬ್ರಿಟಿಷರು ಪರಿಚಯಿಸಿದ ಶಿಕ್ಷಣ ಪದ್ಧತಿಗಳು ಮತ್ತು ಗಿಳಿ ಪಾಠ ವಿಧಾನಗಳನ್ನು ವಿರೋಧಿಸಿ, ಶಾಂತಿನಿಕೇತನದ ಮೂಲಕ ಮಾನವ ಸಾಮಥ್ರ್ಯದ ಅನಂತ ವಿಕಾಸದೆತ್ತರಕ್ಕೆ ಒಯ್ಯುವ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದರು. ಇದು ನಾವೆಲ್ಲರೂ ಪಾಲಿಸಬೇಕಾದ ಮತ್ತು ಪ್ರಪಂಚದ ಮುಂದೆ ಹೆಮ್ಮೆಯಿಂದ ಪ್ರದರ್ಶಿಸುವ ಪರಂಪರೆಯಾಗಿದೆ ಎಂದು ಶಾ ಹೇಳಿದ್ದಾರೆ.