ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ: ಉಪನ್ಯಾಸ


ಧಾರವಾಡ,ಮಾ.12: ಕೌಶಲ್ಯಾಭಿವೃದ್ಧಿಯುವಕರ ಯಶಸ್ವಿ ವೃತ್ತಿಜೀವನಕ್ಕೆ ಪೂರಕ ಅಂಶ. ಇಂದುಉದ್ಯಮಕ್ಷೇತ್ರ ವಿಕಸನಗೊಳ್ಳುತ್ತಿದ್ದು ಒಂದಕ್ಕಿಂತ ಹೆಚ್ಚು ಕೌಶಲ್ಯಗಳಿದ್ದಾವೆ. ಉದ್ಯೋಗಾವಕಾಶಗಳು ದೊರಕಲಿವೆ ಎಂದುಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕರಾದ ಪ್ರೊ. ಎಸ್.ಎಂ.ಶಿವಪ್ರಸಾದ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ದಿ.ಎಸ್.ಜಿ. ನಾಡಗೀರಸ್ಮರಣಾರ್ಥದತ್ತಿಕಾರ್ಯಕ್ರಮದಲ್ಲಿ ‘ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ’ ವಿಷಯಕುರಿತು ಮಾತನಾಡಿದರು.
ಮುಂದುವರೆದು ಮಾತನಾಡಿದಅವರು, ಸಾವಿರ ವರ್ಷಗಳ ಹಿಂದೆ ಭಾರತದಲ್ಲಿಜಿ.ಡಿ.ಪಿ.ಪ್ರಮಾಣ ಹೆಚ್ಚಿತ್ತು.ಆದರೆಕೈಗಾರಿಕಾಕ್ರಾಂತಿಯ ಫಲವಾಗಿ ಯುರೋಪ, ಅಮೇರಿಕಾ, ಚೀನಾದಲ್ಲಿಜಿ.ಡಿ.ಪಿ.ಪ್ರಮಾಣ ಹೆಚ್ಚಾಯಿತು.ಶಿಕ್ಷಣದಲ್ಲಿ ಜಿ.ಡಿ.ಪಿ ಪ್ರಮಾಣ ಶೇಕಡಾ 6 ರಷ್ಟುಇರಬೇಕು.ಆದರೆ ಭಾರತದಲ್ಲಿಅದರ ಪ್ರಮಾಣ ಶೇಖಡಾ 2.5 ಜಿ.ಡಿ.ಪಿ. ಬೆಳವಣಿಗೆಯಲ್ಲಿ ಶಿಕ್ಷಣವೇ ಮುಖ್ಯಎಂದರು.
ಕ್ರಮೇಣದೇಶದಿಂದದೇಶಕ್ಕೆ ವಲಸೆ ಹೋಗುವವರ ಸಂಖ್ಯೆಅಧಿಕವಾಯಿತು.ಯಾವಾಗಕೈಗಾರಿಕಾಕ್ರಾಂತಿ ಸಂಭವಿಸಿತೋ ಆವಾಗ ಹೊಸ ಹೊಸ ಯಂತ್ರಗಳು ಅವಿಷ್ಕಾರಗೊಂಡುಅಪಾರ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾದವು. ಕಾಲಾಂತರದಲ್ಲಿ ನಿರುದ್ಯೋಗ ಸೃಷ್ಟಿಯಾಗಿ 55 ಸಾವಿರ ಮಿಲಿಯನ್‍ಕಾರ್ಮಿಕರುಉದ್ಯೋಗ ಕಳೆದುಕೊಂಡರು.ಅಷ್ಟೇ ಪ್ರಮಾಣದ ಹೊಸ ರೀತಿಉದ್ಯೋಗ ಸೃಷ್ಟಿಯಾಗಲಿವೆ. ಇದಕ್ಕೆತಕ್ಕಂತಹಕೌಶಲ್ಯಾಭಿವೃದ್ಧಿ ಶಿಕ್ಷಣ ನೀಡಬೇಕಿದೆ.
ಇಂದುರಾಷ್ಟ್ರೀಯ ಹೊಸ ಶಿಕ್ಷಣ ನೀತಿಜಾರಿಗೆತರಲಾಗುತ್ತಿದ್ದು, ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ನಿರೀಕ್ಷಿಸಲಾಗಿದೆ.ಶಿಕ್ಷಣದ ಗುರಿ ಅಂಕ ಗಳಿಕೆಗೆ, ಪದವಿಗೆ ಸೀಮಿತವಾಗಬಾರದು.ಯುವಕರಲ್ಲಿಕುತೂಹಲ ವಿಚಾರವಂತಿಕೆ ಹಾಗೂ ಚಿಕಿತ್ಸಕ ಪ್ರವೃತ್ತಿ ಹೆಚ್ಚಬೇಕಿದೆ.ಇಂದುಅಂಗೈಯಲ್ಲಿಯೇಜಗತ್ತುಇರುವುದರಿಂದ ಮಾಹಿತಿ ಪಡೆಯುವುದು ಸದ್ಬಳಕೆಯಾಗಬೇಕು.ಸಹಾನುಭೂತಿ ಸೃಜನಶೀಲ ಹಾಗೂ ಮೌಲ್ಯಾಧಾರಿತ, ಕೌಶಲ್ಯಆಧಾರಿತ ಶಿಕ್ಷಣ ನೀಡುವುದುಅಗತ್ಯವಿದೆ.ಶೇಕಡಾ 40 ರಷ್ಟುಆನ್‍ಲೈನ ವರ್ಗ ನಡೆಯುವ ಸಾಧ್ಯತೆಇದ್ದು, ಭವಿಷ್ಯದಲ್ಲಿ 2045ಕ್ಕೆ ಸಾವನ್ನುಗೆಲ್ಲುವಂತಹ ಸಂಶೋಧನೆಗಳು ನಡೆಯುತ್ತವೆಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಅಭಿಯಂತರರಾದಅರುಣ ನಾಡಿಗೇರ ಮಾತನಾಡಿ, ದಿ.ಎಸ್.ಜಿ. ನಾಡಗೀರಒಬ್ಬ ಹೆಸರಾಂತ ಶಿಕ್ಷಣ ತಜ್ಞರಾಗಿದ್ದರು. ಓರ್ವ ಶಿಕ್ಷಕರಾಗಿ ತಮ್ಮ ವೃತ್ತಿಧರ್ಮದ ಪಾವಿತ್ರ್ಯತೆ ಹೆಚ್ಚಿಸಿಕೊಂಡಿದ್ದರು. ಅಂದಿನ ಮುಖ್ಯಮಂತ್ರಿಎಸ್.ಆರ್.ಕಂಠಿಯವರು, ದಿ.ಎಸ್.ಜಿ. ನಾಡಗೀರರಿಂದ ಶೈಕ್ಷಣಿಕ ಸಲಹೆ ಪಡೆಯುತ್ತಿದ್ದರು. ಇಂದಿನ ಸ್ಪರ್ಧಾತ್ಮಕಯುಗದಲ್ಲಿಯುವಶಕ್ತಿತಮ್ಮದೈಹಿಕ, ಕಲಾತ್ಮಕ ಹಾಗೂ ಭಾವನಾತ್ಮಕ ಅಂಶ ಹೆಚ್ಚಿಸಿಕೊಳ್ಳಲು ಕೌಶಲ್ಯದ ಬೆಳವಣಿಗೆ ಅಗತ್ಯವಾಗಿದೆ. ಎನ್.ಇ.ಪಿ ಯಿಂದಅದು ಸಾಧ್ಯವಾಗಬೇಕುಎಂದರು.
ಎಸ್.ಜಿ. ನಾಡಗೀರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.ಶಂಕರ ಹಲಗತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿಡಾ.ಧನವಂತ ಹಾಜವಗೋಳ, ಎಂ.ಎಂ. ಚಿಕ್ಕಮಠ, ನಿಂಗಣ್ಣಕುಂಟಿ, ಮೋಹನ ಸಿದ್ಧಾಂತಿ, ಕೆ.ಜಿ.ದೇವರಮನಿ, ಡಾ.ರಾಜನ್‍ದೇಶಪಾಂಡೆ, ಮೋಹನ ನಾಡಗೀರ, ಅರ್ಚನಾ ಮತ್ತು ನೈನಾ ನಾಡಗೀರ, ಆನಂದ ನಾಡಗೀರ, ಮುರಳಿಧರರಾವ, ಗುರುರಾಜಜಮಖಂಡಿ ಸೇರಿದಂತೆ ಮುಂತಾದವರಿದ್ದರು.