ಶಿಕ್ಷಣಕ್ಷೇತ್ರದ ಸೇವೆ ಗುರುತಿಸಿ ಡಾ.ಕೆ.ಬಸವರಾಜಪ್ಪ ಸನ್ಮಾನ

ದಾವಣಗೆರೆ.ಜು.೨೫; ನಿಟುವಳ್ಳಿಯ ಜ್ಞಾನದೀಪ ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ. ಕೆ.ಬಸವರಾಜಪ್ಪ ಇವರಿಗೆ ಶಿಕ್ಷಣ ಕ್ಷೇತ್ರದ ಸುದೀರ್ಘ ಸೇವೆಗಾಗಿ ಬೆಂಗಳೂರಿನ ಕರ್ನಾಟಕ ಹಿಂದಿ ಪ್ರಚಾರ ಸಮಿತಿ ಹಾಗೂ ಕೆ.ಹೆಚ್.ಪಿ.ವಿಜ್ಞಾನ ಕಾಲೇಜು ವತಿಯಿಂದ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು.ಕೆ. ಬಸವರಾಜಪ್ಪ ಅವರು ಜ್ಞಾನ ದೀಪ ಪಬ್ಲಿಕ್ ಶಾಲೆಯ ಆರ್ಥಿಕವಾಗಿ ಹಿಂದುಳಿದ ಕೆಲವು ಬಡ ಮಕ್ಕಳಿಗೆ ಉಚಿತವಾಗಿ ಶಾಲಾ ಶುಲ್ಕ ಇಲ್ಲದೆ ಹಾಗೂ ಉಚಿತ ಪಠ್ಯ ಪುಸ್ತಕ, ಶಾಲಾ ಸಮವಸ್ತ್ರಗಳನ್ನು ಒದಗಿಸಿ ಶಿಕ್ಷಣವನ್ನು ನೀಡುತ್ತಿದ್ದು ಇವರ ಸೇವೆ ಗುರುತಿಸಿ ಸನ್ಮಾನ ಮಾಡಗಿದೆ.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾರ ಅಶೋಕ್ ಹಾರಳ್ಳಿ, ಉಪಾಧ್ಯಕ್ಷರಾದ ಡಾ. ವಿ.ಆರ್.ದೇವಗಿರಿ, ಡಾ.ಎ.ಅನ್ವಯ್ ಹಾಗೂ ವಿ.ಸಂಕನೂರ್, ಡಾ. ರಾಜಲಕ್ಷ್ಮೀ ಕೃಷ್ಣನ್, ಡಾ. ಗಣೇಶ್ ಕಿಣಿ ಉಪಸ್ಥಿತರಿದ್ದರು.