ಶಿಕ್ಷಕ ಹುದ್ದೆ ಪವಿತ್ರವಾದ ಹುದ್ದೆ : ಮಜಹರ ಹುಸೇನ

ಭಾಲ್ಕಿ:ಜು.10: ಶಿಕ್ಷಕ ಹುದ್ದೆಯು ಎಲ್ಲಾ ಹುದ್ದೆಗಳಿಗಿಂತಲೂ ಪವಿತ್ರವಾದ ಹುದ್ದೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಅಭಿಪ್ರಾಯಪಟ್ಟರು.

ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ವತಿಯಿಂದ ಆಯೋಜಿಸಿದ್ದ ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಹಾಗು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಭಾಷ ಹುಲಸೂರೆಯವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದ ಪ್ರತಿಯೊಂದು ದೇಶಗಳÀಲ್ಲಿಯೂ ಶಿಕ್ಷಕರಿಗೆ ಸಿಗುವ ಗೌರವ ಮತ್ಯಾರಿಗೂ ಸಿಗುವುದಿಲ್ಲ. ಹೀಗಾಗಿ ಶಿಕ್ಷಕರ ಹುದ್ದೆ ಅತ್ಯಂತ ಪವಿತ್ರವಾದ ಹುದ್ದೆಯಾಗಿದೆ. ನಿವೃತ್ತಿಯ ನಂತರವೂ ಆತ್ಮ ಗೌರವದಿಂದ ಬಾಳುವ ಹುದ್ದೆ ಶಿಕ್ಷಕ ಹದ್ದೆಯಾಗಿದೆ. ಶಿಕ್ಷಕರು ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿ ಬಾಳಬೇಕು ಎಂದರು. ಬಹುಮುಖ ಪ್ರತಿಭೆಯುಳ್ಳ ಶಿಕ್ಷಕ ಜಯರಾಜ ದಾಬಶೆಟ್ಟಿ ಮತ್ತು ಸುಭಾಷ ಹುಲಸೂರೆಯವರು ನಿವೃತ್ತಿ ನಂತರವೂ ಸಮಾಜಕ್ಕೆ ತಮ್ಮ ಉತ್ತಮವಾದ ಸೇವೆ ನೀಡುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಮಾತನಾಡಿ, ಸೇವೆಗೆ ಸೇರುವುದು ಆಕಸ್ಮಿಕ ಆದರೆ ನಿವೃತ್ತಿ ಜೀವನ ನಿಶ್ಚಿತ. ನಾವು ನಿವೃತ್ತಿಯ ನಂತರವೂ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಾಬಶೆಟ್ಟಿ ಮತ್ತು ಹುಲಸೂರೆಯವರು ಉತ್ತಮ ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು.

ಸಾಹಿತಿ ಹಾಗು ಉಪಖಜಾನೆಯ ಸಹಾಯಕ ನಿದೇರ್ಶಕ ಮಾಣಿಕ ನೇಳಗೆ ಮಾತನಾಡಿ, ಜಯರಾಜ ದಾಬಶೆಟ್ಟಿ ಮತ್ತ ಸುಭಾಷ ಹುಲಸೂರೆಯವರು ಸದಾ ಕ್ರಿಯಾಶೀಲರಾದ ವ್ಯಕ್ತಿಗಳಾಗಿದ್ದಾರೆ. ಅವರ ಕಾರ್ಯ ಕ್ಷಮತೆ ನಮ್ಮೆಲ್ಲರಿಗೂ ಮಾದರಿಯಾಗಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ, ನಮ್ಮ ತಾಲೂಕಿನಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘ ಗಟ್ಟಿಯಾಗಿ ಬಳೆಯಲು ಜಯರಾಜ ದಾಬಶೆಟ್ಟಿಯವರ ಶ್ರಮ ಮಹತ್ವದ್ದಾಗಿದೆ. ಅವರ ಮಾರ್ಗದರ್ಶನ ಸದಾ ನಮ್ಮ ಮೇಲಿರಲಿ ಎಂದು ಹೇಳಿದರು. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಾಜಿ ಕಾಂಬಳೆ ಪ್ರಾಸ್ತಾವಿಕವಾಗಿ ಮಾತಾಡಿದರು.

ಇದೇವೇಳೆ ನೂತನವಾಗಿ ಅಧಿಕಾರ ಸ್ವೀಕರಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಮತ್ತು ಖಜಾನೆ ಅಧಿಕಾರಿ ಮಾಣಿಕ ನೇಳಗೆಯವರಿಗೆ ಸಂಘದ ವತಯಿಂದ ಸನ್ಮಾನಿಸಿ ಗೌರವಿಸಲಾಯಿತು. ಚಿತ್ರಕಲಾ ಶಿಕ್ಷಕ ಜಪ್ಸನ್ ಕೋಟೆ ಸಂಗಡಿಗರು ಸುಗಮ ಸಂಗೀತ ಹಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಶಿವಕುಮಾರ ಹೂಗಾರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಬಿರಾದಾರ, ಉಪನ್ಯಾಸಕಿ ಮಲ್ಲಮ್ಮಾ ಆರ್ ಪಾಟೀಲ, ಪುಷ್ಪಾವತಿ ಚಕುರ್ತೆ, ಕಿರಣಕುಮಾರ ಭಾಟಸಿಂಗೆ, ಮಾಯಾವತಿ ಗೋಖಲೆ, ಅರುಣಾ ಘಂಟೆ, ಅಶೋಕ ಕುಂಬಾರ, ಶಿವಕುಮಾರ ಘಂಟೆ, ಖಲೀಲ ಅಹಮದ, ಜಾಲಿಂದರ ಮೇತ್ರೆ, ಹಣಮಂತ ಕಾರಾಮುಂಗೆ, ಪ್ರಾಥಮಿಕ ಶಿಕ್ಷಕರ ಸಂಘದ ಅದ್ಯಕ್ಷ ಗೋವಿಂದರಾವ ಬಿರಾದಾರ, ಬಾಲಾಜಿ ಬೈರಾಮಡಗಿ, ಪಿ.ಎಸ್.ಬಿರಾದಾರ, ದಿನೇಶ ಥಮಕೆ, ಮಾರುತಿ ಸಗರ, ಚಂದ್ರಕಾಂತ ತಳವಾಡೆ, ಸಂತೋಷ ಬಿರಾದಾರ, ವಿಶ್ವಾರಾಧ್ಯ, ಪ್ರದೀಪ ಘಂಟೆ, ದೈಹಿಕ ಶಿಕ್ಷಕ ಚನ್ನವೀರ ಚಕ್ರಸಾಲಿ, ಚಿತ್ರಕಲಾ ಶಿಕ್ಷಕ ಪರಮೇಶ್ವರ ಕಡ್ಯಾಳೆ ಉಪಸ್ಥಿತರಿದ್ದರು.

ಮಾಧವ ಸಿಂಧೆ ಸ್ವಾಗತಿಸಿದರು. ವಿಠಲ ಬಿರಾದಾರ ನಿರೂಪಿಸಿದರು. ಕಿರಣ.ಬಿ ವಂದಿಸಿದರು.