ಶಿಕ್ಷಕ ಹುದ್ದೆಯ ಪಾವಿತ್ರ್ಯತೆ ಕಾಪಾಡಿ ; ಮೊಕ್ತೆದಾರ್

ಔರಾದ್ : ಫೆ.26:ಶಿಕ್ಷಕರಾದವರು ನುಡಿದಂತೆ ನಡೆಯಬೇಕು. ನಡೆದಂತೆ ನುಡಿಯುವ ಮೂಲಕ ಶಿಕ್ಷಕ ಹುದ್ದೆಯ ಪಾವಿತ್ರ್ಯತೆ ಕಾಪಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಹೇಳಿದರು.

ಪಟ್ಟಣದ ಮುರಾರ್ಜಿ ವಸತಿ ಶಾಲೆಯಲ್ಲಿ ಈಚೇಗೆ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ತಮ್ಮ ಕರ್ತವ್ಯ ಮತ್ತು ವೃತ್ತಿ ಪಾವಿತ್ರ್ಯತೆ, ಗೌರವ ಮತ್ತು ಘನತೆ ಕಾಪಾಡಿಕೊಳ್ಳಬೇಕು. ಶಿಕ್ಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು ಎಂದರು. ವಿದ್ಯಾರ್ಥಿಗಳು ಶಿಕ್ಷಕರ ಹಾವ-ಬಾವಗಳು ಪರಿಶೀಲಿಸುತ್ತಾರೆ. ಆದ್ದರಿಂದ ಶಿಕ್ಷಕರಾದವರು ಚಾರಿತ್ರ್ಯವಂತರೂ ಶೀಲವಂತರೂ ಆಗಬೇಕು ಎಂದರು. ಇನ್ನೂ ವಿದ್ಯಾರ್ಥಿಯ ಅಭಿವೃದ್ಧಿಗೆ ವಸತಿ ಶಾಲೆಯ ಅಡುಗೆ ಸಹಾಯಕರಿಂದ ಶಿಕ್ಷಕರ, ಪಾಲಕರು, ಇಲಾಖೆಯ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು. ವಿದ್ಯಾರ್ಥಿಗಳು ನಾವು ಏನಾಗಬೇಕು ಎಂದು ನಾವೇ ನಿರ್ಧರಿಸಿದಾಗ ಸಾಧನೆ ಮಾಡಲು ಸಾಧ್ಯವಿದೆ. ಇದಕ್ಕೆ ಪರಿಶ್ರಮ, ಸಂಕಲ್ಪ, ಸಹನೆ ಮುಖ್ಯ ಎಂದು ಕಿವಿಮಾತು ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಬಾಲಾಜಿ ಗಾಯಕವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧನೆ ಮಾಡುವುದು ವಿದ್ಯಾರ್ಥಿಗಳ ಕೆ?ಯಲ್ಲಿಯೇ ಇದೆ. ಮುಖ್ಯವಾಗಿ ಆಸಕ್ತಿ ಇರಬೇಕು. ಛಲ ಇರಬೇಕು. ಛಲವನ್ನು ಸಾಧಿಸುವ ಗುರಿ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಳ್ಳೆಯ ರೀತಿಯ ತಯಾರಿ ಇರಬೇಕು. ಅಂದಾಗ ಸಾಧನೆ ಮಾಡಲು ಸುಲಭವಾಗುತ್ತದೆ ಎಂದರು.

ಸಂತಪೂರ ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಭಗವಂತ ಕಾಂಬಳೆ ಮಾತನಾಡಿದರು. ವನಮಾರಪಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಶಿವಾಜಿ ಪವಾರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ ದುರಮಂಡೆ, ಬಲ್ಲೂರ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಸುನಿಲ ಸಿಂಗಾರೆ, ಶಿಕ್ಷಕ ಬಾಲಾಜಿ ಅಮರವಾಡಿ, ಕಿಶೋರ್, ಪತ್ರಕರ್ತರಾದ ಅಂಬರೇಶ್ ಚಿದ್ರೆ, ಅಂಬಾದಾಸ ನೇಳಗೆ, ಅಶೋಕ ಶೆಂಬೆಳ್ಳಿ, ಶಿಕ್ಷಕ ಬಾಲಾಜಿ ಮೇತ್ರೆ, ಶಿಕ್ಷಕರಾದ ಪವನ, ಸಿದ್ದು, ಅರುಣ ದೇವಕತ್ತೆ, ಶಾಂತಾ ಕನಕೆ, ಸಿದ್ದಮ್ಮ, ಬಬಿತಾ, ಸಂತೋಷ ಫೂಲೆ, ಡ್ಯಾನಿಯಲ್ ಸೇರಿದಂತೆ ವಸತಿ ಶಾಲೆಯ ಸಿಬ್ಬಂದಿ, ಪಾಲಕ, ವಿದ್ಯಾರ್ಥಿಗಳು ಪಾಲ್ಗೊಂಡರು. ಶಾಲಾ ವಾರ್ಷಿಕ ವರದಿಯನ್ನು ಸೂರ್ಯಕಾಂತ ಅಪ್ಪೆ ಓದಿದರು. ಸಂಗಮೇಶ ಚಿದ್ರೆ ಸ್ವಾಗತಿಸಿದರು. ಆನಂದ ನಿರೂಪಿಸಿದರು. ರೋಸಲಿನ್ ವಂದಿಸಿದರು. ಈ ವೇಳೆ ವಿದ್ಯಾರ್ಥಿ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷರ ರತ್ನದೀಪ ಕಸ್ತೂರೆ ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಪೆÇೀಟೋಗಳು ವಿತರಿಸಿ ಗಮನ ಸೆಳೆದರು. ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕರಾದ ಶಿವಕುಮಾರ ಅಲಮಾಜೆ ಅವರಿಗೆ ವಿಶೇಷವಾಗಿ ಸತ್ಕರಿಸಲಾಯಿತು.


ಮಕ್ಕಳ ಸಾಂಸ್ಕøತಿಕ ಕಲರವ

ಈ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನಡೆದಿದ್ದು, ಎಲ್ಲರ ಗಮನ ಸೆಳೆಯಿತು. 10 ನೇ ತರಗತಿಯ ಶುಭಂ, ಆದಿತ್ಯ, ಉಷಾ, ಲಕ್ಷ್ಮೀ ಅವರನ್ನು ಆದರ್ಶ ವಿದ್ಯಾರ್ಥಿ ಎಂದು ಸತ್ಕರಿಸಲಾಯಿತು. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್ ಬಂದಿರುವ ಹರ್ಷತ ರಡ್ಡಿ, ವೈಷ್ಣವಿ, ಸುಮೀತ ಅವರನ್ನು ಸತ್ಕರಿಸಲಾಯಿತು. ಆದಿತ್ಯ, ಉಷಾ, ಶಿವಾನಂದ ಸ್ವಾಮಿ ಶಾಲೆಯ ಶಿಕ್ಷಕರ ಕುರಿತು ಮಾತನಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.