ಶಿಕ್ಷಕ ಸಮಾಜದ ಸುಧಾರಕ :ಶರಣಗೌಡ

ಶಹಾಪುರ :ಸೆ.7: ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಶರಣಗೌಡ ಸದಾಪೂರ್ ಅವರು ವಿದ್ಯಾರ್ಥಿಗಳೇ ಹಿಂದಿನ ಪ್ರಾಚೀನ ಕಾಲದಿಂದಲೂ ಶಿಕ್ಷಣಕ್ಕೆ ತನ್ನದೇ ಆದ ಮಹತ್ವವಿದೆ ಹಿಂದಿನ ಕಾಲದಲ್ಲಿ ಅನೇಕ ವಿಶ್ವವಿದ್ಯಾಲಯಗಳು ತಮ್ಮದೇ ಆದ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ ಉದಾಹರಣೆಗೆ ನಳಂದ ವಿಶ್ವವಿದ್ಯಾಲಯ ತಕ್ಷಶಿಲಾ ವಿಶ್ವವಿದ್ಯಾಲಯ ಮುಂತಾದ ವಿಶ್ವವಿದ್ಯಾಲಯಗಳು ಅನೇಕ ಬೌದ್ಧಿಕ ಜೀವಿಗಳನ್ನು ಸೃಷ್ಟಿ ಮಾಡಿವೆ ಅದಕ್ಕಾಗಿ ತಾವುಗಳು ಶಿಕ್ಷಕ ವೃತ್ತಿ ಅಮೂಲ್ಯವಾದ ವೃತ್ತಿಯೆಂದು ಹೇಳಿದರು.
ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೊರಿಗುಡ್ಡ (ಉಕ್ಕಿನಾಳ) ಶಹಾಪುರ ದಿಲ್ಲಿ ನಡೆದ ಹೊಸಬೆಳಕು ಶಿಕ್ಷಣ ಮತ್ತು ಸಾಂಸ್ಕøತಿಕ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸೈದಾಪುರ ಉದ್ಘಾಟನೆ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಕೊಡುವ ಗೌರವ ತುಂಬಾ ಕಡಿಮೆಯಾಗುತ್ತಿದೆ ಗುರುಗಳಿಗೆ ನಮಸ್ಕಾರ ಎನ್ನುವ ಬದಲು ಹಾಯ್ ಸರ್ ಎನ್ನುವ ಪದ ಬಳಕೆಯಾಗುತ್ತಿದೆ ಪ್ರೀತಿಯ ವಿದ್ಯಾರ್ಥಿಗಳೇ ಶಿಕ್ಷಕರು ಎಂದರೆ ವಿದೇಯತೆಯ ಸ್ಥಾನವನ್ನು ಹೊಂದಿದವರು ಯಾವ ವಿದ್ಯಾರ್ಥಿ ಶಿಕ್ಷಕರಿಗೆ ಗೌರವವನ್ನು ಕೊಡುವುದಿಲ್ಲವೋ ಅವನು ಸಮಾಜದ ಕಳಂಕ ವ್ಯಕ್ತಿ ಆಗುತ್ತಾನೆ ಹಾಗೂ ತಂದೆ ತಾಯಿಯರಿಗೆ ಗೌರವ ಕೊಡುವುದಿಲ್ಲ ಅವನು ಸಮಾಜದ ಕೆಟ್ಟ ವ್ಯಕ್ತಿಯಾಗುತ್ತಾನೆ ಅದಕ್ಕಾಗಿ ಮೊದಲಿಗೆ ನಿಮ್ಮಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದನ್ನು ರೂಢಿಸಿಕೊಳ್ಳಿ ಎಂದು ಹೊಸ ಬೆಳಕು ಶಿಕ್ಷಣ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವ ಸಾಹಿತಿಗಳು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಮಾತನಾಡುತ್ತಾ ಏನಾದರೂ ಆಗು ಮೊದಲು ಮಾನವನಾಗು ಎಂಬ ತತ್ವ ಸಿದ್ಧಾಂತದಂತೆ ಯಾವುದೇ ಒಬ್ಬ ವ್ಯಕ್ತಿ ಶಿಕ್ಷಕನಾಗಿರುವುದು ರಾಷ್ಟ್ರದ ದೃಢ ಸಂಕಲ್ಪದೊಂದಿಗೆ ತಾನು ನೀಡಿದ ಶಿಕ್ಷಣ ಮುಂದಿನ ರಾಷ್ಟ್ರದ ಭವಿಷ್ಯಕ್ಕೆ ಉಪಯೋಗವಾಗಲಿ ಎಂದು ತೀರ್ಮಾನಿಸಿ ತನ್ನ ಶಿಕ್ಷಕ ವೃತ್ತಿಯನ್ನು ಆರಂಭಿಸುತ್ತಾನೆ ತಾನು ಕಲಿಸಿದ ವಿದ್ಯಾರ್ಥಿಯು ಸಾಧನೆ ಶಿಖರವನ್ನು ಏರಿದಾಗ ಅತ್ಯಂತ ಸಂತೋಷ ಭರಿತವಾಗಿ ಖುಷಿ ಪಡುವ ವ್ಯಕ್ತಿ ಅದು ಶಿಕ್ಷಕ.
” ಸೋತೆಯನ್ನ ಬೇಡ ಸೋಲಿನಲ್ಲೇ ಗೆಲುವಿದೆ ನಾ ಗೆಲ್ಲುವ ತನಕ ನನ್ನ ಆಟ ಮುಗಿದಿಲ್ಲ ಎಂದರೆ ನೀವು ಯಾವತ್ತು ಸೋಲುವುದಿಲ್ಲ” ಎಂಬ ಪ್ರೀತಿಯ ಮಾತುಗಳನ್ನಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಸ್ಥೈರ್ಯವನ್ನು ತುಂಬಿದರು ವಿದ್ಯಾರ್ಥಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಒಬ್ಬ ಶಿಕ್ಷಕ ರಾಷ್ಟ್ರದ ಭವಿಷ್ಯವನ್ನು ನಿರ್ಮಿಸಲು ನೂರಾರು ವಿದ್ಯಾರ್ಥಿಗಳನ್ನು ತಯಾರಿಸುತ್ತಾನೆ ವಿದ್ಯಾರ್ಥಿಗಳು ಸಾಮಾಜಿಕ ನೈತಿಕ ಮೌಲ್ಯಗಳೊಂದಿಗೆ ರಾಷ್ಟ್ರದ ಭವಿಷ್ಯದ ಹಿತ ಚಿಂತನೆಗೆ ಸದಾ ಜಾಗೃತವಾಗಿರಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮಾತನಾಡಿದರು ಪ್ರಾಚೀನ ಕಾಲದಲ್ಲಿ ಉಪನಯನ ಸಂಸ್ಕೃತಿಯಿಂದ ಆರಂಭವಾದ ನನ್ನ ಶಿಕ್ಷಣಕ್ಕೆ ಇಡೀ ಶಿಕ್ಷಣದ ಬೆಳವಣಿಗೆಗೆ ಕಾರಣರಾದ ನನ್ನ ಗುರುರಂದಕ್ಕೆ ಹೃದಯಪೂರ್ವಕ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ತಿಳಿಸುತ್ತಾ ಮುಂದಿನ ಜೀವನದಲ್ಲಿ ವಿದ್ಯಾರ್ಥಿ ಮಿತ್ರರು ತಮ್ಮ ಗು???ಂದಾವನ್ನು ಹೆತ್ತ ತಂದೆ ತಾಯಿಯನ್ನು ಅಕ್ಕಪಕ್ಕದ ನೆರೆಹೊರೆಯವರನ್ನು ಪ್ರೀತಿಯಿಂದ ಕಾಣಿರೆಂದು ಹೇಳುತ್ತಾ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಮುಖ್ಯ ಅತಿಥಿಗಳಾಗಿ ಗುರುರಾಜ ದೇವಪುರ ಶಾಲೆಯ ಶಿಕ್ಷಕರಾದ ರಾಜಕುಮಾರ್ ಬಡಿಗೇರ್ ಶಂಕರ್ ಸರ್ ಸಂತೋಷ್ ಜೋಗುರ್ ರೇಣುಕಾ ಜಕ್ಕರಡ್ಡಿ ಅಶ್ವಿನಿ ಬಬಲಾದಿ ರಮೇಶ್ ಹೂಗಾರ ಚಂದ್ರು ರಾಠೋಡ ಭಾಗಮ ಪಾಟೀಲ್ ಶಾಲೆಯ ಎಲ್ಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು ಮಕ್ಕಳು ಶಿಕ್ಷಕರಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಸ್ತಿ ವಿತರಿಸಿದರು.