ಶಿಕ್ಷಕ ಶಿವಕುಮಾರ್‌ರಿಗೆ ಸನ್ಮಾನ

ಕೋಲಾರ ಸೆ.೨೪; ರೋಟರಿ ಕ್ಲಬ್ ಕೋಲಾರ ಹಮ್ಮಿಕೊಂಡಿದ್ದ ೨೦೨೧-೨೨ ಸಾಲಿನ ನೂತನ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ನೇಷನ್ ಬಿಲ್ಡರ್ ಅವಾರ್ಡ್ ೨೦೨೧ ಕಾರ್ಯಕ್ರಮದಲ್ಲಿ ನಗರದ ಶ್ರೀ ರಮಣ ಮಹರ್ಷಿ ವಿದ್ಯಾಲಯದ ಶಿಕ್ಷಕರ ಶಿವಕುಮಾರ್.ಬಿ ರವರನ್ನು ರೋಟರಿ ಕ್ಲಬ್ ಕೋಲಾರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಕ್ಲಬ್ ಜಂಟಿ ಕಾರ್ಯದರ್ಶಿಯಾಗಿರುವ ಶಿವಕುಮಾರ್ರವರ ಸಾಹಿತ್ಯ, ನಾಡು ನುಡಿ, ಶಿಕ್ಷಣ ಕ್ಷೇತ್ರ ಹಾಗೂ ಸಮಾಜ ಸೇವೆ ಮತ್ತು ಇತ್ತೀಚೆಗೆ ಲಭಿಸಿದ ರಾಜ್ಯ ಮಟ್ಟದ ಬಸವ ಸೇವಾ ರತ್ನ ಪ್ರಶಸ್ತಿಗೆ ಶ್ರೀಯುತರ ಅಪಾರ ಸೇವೆಯನ್ನು ಗುರ್ತಿಸಿ ರೋಟರಿ ಕ್ಲಬ್ ಕೋಲಾರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ರೋಟರಿ ಜಿಲ್ಲೆ ೩೧೯೦ ವತಿಯಿಂದ ಆಗಮಿಸಿದ್ದ ಜಿಲ್ಲಾ ತರಬೇತುದಾರರಾದ ರೋ.ಸತೀಶ್ ಮಾಧವನ್, ವಲಯ ರಾಜ್ಯ ಪಾಲರಾದ ರೋ.ಎಸ್ ವಿ ಸುಧಾಕರ್, ಸಹಾಯಕ ರಾಜ್ಯಪಾಲರಾದ ರೋ.ಮುನಿಯಪ್ಪ ಡಿ.ಪಿ, ನಿಕಟ ಪೂರ್ವ ಕಾರ್ಯದರ್ಶಿ ಎಂ.ಎಸ್.ರವಿ, ಅಧ್ಯಕ್ಷರಾದ ರೋ.ರಾಮನಾಥ್, ಕಾರ್ಯದರ್ಶಿ ರೋ.ಎಂ.ಎನ್.ರಾಮಚಂದ್ರ ಗೌಡ, ಸಹಾಯಕ ರಾಜ್ಯಪಾಲರಾದ ರೋ.ಹೆಚ್ ರಾಮಚಂದ್ರಪ್ಪ ಹಾಗೂ ಮಾಜಿ ಅಧ್ಯಕ್ಷರು ಮತ್ತು ರೋಟರಿಯನ್‌ಗಳಾದ ಟಿ.ಜಿ. ಆರ್.ಬಾಲಾಜಿ, ಅಶೋಕ್ ಕುಮಾರ್, ಕೆ.ಬಿ.ಅಶೋಕ್, ಬಿ.ಎಸ್.ಗೋವಿಂದರಾಜು, ಚಂದ್ರಶೇಖರ್, ಚಂದ್ರಪ್ಪ, ಜನಾರ್ಧನ್, ಸಾ.ನಾ.ಮೂರ್ತಿ, ವೆಂಕಟೇಶಪ್ಪ, ಶಂಕರ್ ಪ್ರಸಾದ್, ಜಿ.ಎಂ.ವೆಂಕಟರವನಪ್ಪ ಇನ್ನು ಹಲವು ಗಣ್ಯರು ಭಾಗವಹಿಸಿದ್ದರು.