ಶಿಕ್ಷಕ ವೃತ್ತ ಪವಿತ್ರವಾದುದ್ದಾಗಿದೆ:ಚವ್ಹಾಣ

ತಾಳಿಕೋಟೆ:ಸೆ.12: ಎಲ್ಲ ವೃತ್ತಿಗಳಲ್ಲಿ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿಯಾಗಿದೆ ಅಂತಹ ಶಿಕ್ಷಕರಿಗೆ ಗೌರವಿಸುವದರೊಂದಿಗೆ ಅವರನ್ನು ನಿತ್ಯ ನೆನೆಯುವಂತಹ ಕಾರ್ಯವಾಗಬೇಕೆಂದು ಶ್ರೀ ನಿಮಿಷಾಂಬ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀಮಾ ಘನಶಾಮ ಚವ್ಹಾಣ ಅವರು ನುಡಿದರು.
ಬಾಪೂಜಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಶಿಕ್ಷಕ ಎನ್ನುವದು ಒಂದು ವ್ಯಕ್ತಿಯಲ್ಲಾ ಅದೊಂದು ಶಕ್ತಿಯಾಗಿದೆ ಶಿಕ್ಷಕ ಪ್ರೀತಿಯ ವಸ್ತು ವಿದ್ದಂತೆ ಅಂತಹ ಪ್ರೀತಿಯ ಶಿಕ್ಷಕಕರ ಮನಸ್ಸನ್ನು ಗೆದ್ದಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾದ್ಯವಾಗುತ್ತದೆ ತಾಯಿ ಉಸಿರು ಕೊಡುತ್ತಾಳೆ ತಂದೆ ಹೆಸರು ಕೊಡುತ್ತಾನೆ ಶಿಕ್ಷಕರಾದವರು ಉಸಿರು ನಿಂತರೂ ಕೂಡಾ ಹೆಸರು ಅಜರಾಮರವಾಗಿ ಉಳಿಯಬೇಕು ಅಂತಹ ಜ್ಞಾನವನ್ನು ತುಂಬುತ್ತಾನೆ ಅಂತಹ ಮೌಲ್ಯಾಧಾರಿತ ಶಿಕ್ಷಣ ಕೊಡುವ ಶಿಕ್ಷಕ ವೃತ್ತಿ ಪವಿತ್ರವಾದಂತಹದ್ದಾಗಿದೆ ಅಂತಹ ಶಿಕ್ಷಕರಿಗೆ ಗೌರವ ಕೊಡುವದರೊಂದಿಗೆ ಪವಿತ್ರತೆಯನ್ನು ಎತ್ತಿ ಹಿಡಿಯುವ ಕಾರ್ಯ ಎಲ್ಲ ವಿದ್ಯಾರ್ಥಿಗಳು ಮಾಡಬೇಕೆಂದ ಅವರು ಶಿಕ್ಷಕ ವೃತ್ತಿಯ ಪಾವಿತ್ರತೆಯನ್ನು ಉಳಿಸಿಕೊಂಡು ಹೋಗುವಂತಹ ಕಾರ್ಯವನ್ನು ಶಿಕ್ಷಕರೂ ಕೂಡಾ ಮಾಡಬೇಕೆಂದು ಕಿವಿಮಾತೇಳಿದರು.
ಇನ್ನೋರ್ವ ಅತಿಥಿ ಸನ್ಮಾನ ಸ್ವಿಕರಿಸಿದ ಶಿಕ್ಷಕ ಎಚ್.ಎಂ.ಚೌದ್ರಿ ಅವರು ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯಿಂದ ರಾಷ್ಟ್ರಪತಿ ವೃತ್ತಿಯವರೆಗೆ ಬೆಳೆಯ ಬೇಕಾದರೆ ಪಡೆದ ಶಿಕ್ಷಣವೇ ಕಾರಣವಾಗುವದರ ಜೊತೆಗೆ ಮತ್ತೊಬ್ಬ ಶಿಕ್ಷಕರಿಗೆ ಪ್ರೇರಣಾದಾಯಕ ಶಕ್ತಿಯನ್ನು ತುಂಬಿದಂತಹದ್ದಾಗಿದೆ ತಾಯಿ ಮಗುವನ್ನು ಹೊತ್ತುಕೊಂಡು ತನಗೆ ಕಂಡಿದ್ದು ತೋರಿಸಿದರೆ ತಂದೆ ತನಗೆ ಕಾಣದನ್ನೂ ತೋರಿಸಲು ಹೆಗಲ ಮೇಲೆ ಹೊತ್ತುಕೊಳ್ಳುತ್ತಾನೆ ಆದರೆ ಶಿಕ್ಷಕ ಇಡೀ ಪ್ರಪಂಚದಲ್ಲಿರುವ ಜ್ಞಾನದ ಶಕ್ತಿಯನ್ನು ತುಂಬುವ ಮೂಲಕ ಪ್ರಪಂಚವನ್ನು ದೇಶವನ್ನು ಮುನ್ನಡೆಸುವಂತಹ ಶಕ್ತಿಯ ಶಿಕ್ಷಣವನ್ನು ನೀಡುತ್ತಾನೆ ಅಂತಹ ಶಿಕ್ಷಕ ವೃತ್ತಿ ಎಲ್ಲರಿಗೂ ಸಿಗುವದಿಲ್ಲಾ ಅತ್ಯಂತ ಪವಿತ್ರತೆ ಅಡಗಿರುವ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಾದರಿಯ ಕಾರ್ಯವನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಿಮಿಷಾಂಬಾ ಏಜ್ಯೂಕೇಶನ್ ಸೋಸಾಯಿಟಿಯ ಅಧ್ಯಕ್ಷ ಘನಶಾಮ ಚವ್ಹಾಣ ಅವರು ವಹಿಸಿದ್ದರು.
ಇದೇ ಸಮಯದಲ್ಲಿ ಎಲ್ಲ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಮುಖ್ಯಗುರುಗಳಾದ ಶಿವಾನಂದ ಹಿರೇಮಠ ಪ್ರಾಸ್ಥಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಎಲ್ಲ ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ರುಕ್ಕಯ್ಯ ಮಸಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಂಜನಾ ಬಡಿಗೇರ ನಿರೂಪಿಸಿದರು. ಪೂರ್ವಾ ಗೌಡಗೇರಿ ವಂದಿಸಿದರು.