ಶಿಕ್ಷಕ ವೃತ್ತಿ ಮಾಡಿದ ಸುಣಗಾರ ಭಾಗ್ಯವಂತರು

ಇಂಡಿ:ಜೂ.4:ಶಿಕ್ಷಕ ವೃತ್ತಿ ಮಾಡಿದ ಸುಣಗಾರವರ ಕೆಲಸ ಭಾಗ್ಯವಂತರ ಕೆಲಸವಾಗಿದ್ದು, ಶ್ರೇಷ್ಠ ಸೇವೆ, ಸುಣಗಾರರವರು ತಮ್ಮ ವಿದ್ಯಾರ್ಥಿ ಸಮುದಾಯವನ್ನು ಎಲ್ಲ ಕ್ಷೇತ್ರಗಳಲ್ಲಿ ಬೆಳೆಸಿದ ಗಾರುಡಿಗರು ಎಂದು ಪರಮಪೂಜ್ಯ ಡಾ. ಸ್ವರೂಪಾನಂದ ಶ್ರೀಗಳು ಹೇಳಿದರು.

ಪಟ್ಟಣದ ಶಂಕರ ಪಾರ್ವತಿ ಸಬಾಭವನದಲ್ಲಿ ಸುಮಾರು 38 ವರ್ಷ ಸೇವೆ ಸಲ್ಲಿಸಿ ಇಂಡಿ ತಾಲೂಕಿನ ತೆನೆಹಳ್ಳಿ ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿದ ಅಂಬಣ್ಣ ಸುಣಗಾರರವರ ಸೇವಾ ನಿವೃತ್ತಿ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸುಣಗಾರರವರು ತಾಲೂಕಿನಲ್ಲಿ ಸಾಮಾಜಿಕ ಬದಲಾವಣೆ ತರುವಂತಹ ಕೆಲಸ ಮಾಡಿದ್ದಾರೆ.ಕಠಿಣ ಪರಿಶ್ರಮಿಗಳು, ವಿದ್ಯಾರ್ಥಿಗಳಿಗೆ ಪ್ರತಿ ಕ್ಷಣವೂ ಕಲಿಸುವ ತಹತಹ ಇಮ್ಮಡಿಗೊಳಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ನೌಕರರ ಸಂಘದ ಇಂಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಎಸ.ಆರ್.ಪಾಟೀಲ,ಕಸಾಪ ಇಂಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಕಾಂತು ಇಂಡಿ,ಜೆಒಸಿಸಿ ಬ್ಯಾಂಕ ವಿಜಯಪುರದ ಉಪಾಧ್ಯಕ್ಷ ಅಲ್ಲಾಬಕ್ಷ ವಾಲಿಕಾರ,ಎಸ್.ಬಿ.ಗೌರಿ,ಕದಳಿ ವೇದಿಕೆಯ ಗಂಗುಬಾಯಿ ಗಲಗಲಿ ಮಾತನಾಡಿ ಅಂಬಣ್ಣ ಸುಣಗಾರರವರು ಇಂಡಿ ತಾಲೂಕಿನ ರಾಜ್ಯ ನೌಕರರ ಸಂಘದ ಅಧ್ಯಕ್ಷರಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿ ಒಳ್ಳೆಯ ಸಂಘಟನೆ ಮಾಡಿ ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಸೇವೆ ಪ್ರಶಂಸನೀಯ ಎಂದರು.

ನಿವೃತ್ತ ಅಂಬಣ್ಣ ಸುಣಗಾರ,ಮಂಜುನಾಥ ಸುಣಗಾರ, ಶಸಾಪ ಅಧ್ಯಕ್ಷ ಆರ್.ವಿ.ಪಾಟೀಲ,ಆನಂದ ವಾಲಿಕಾರ,ಸಿದ್ದು ಕೋಳಿ

ಮಾತನಾಡಿದರು.

ಇದೇ ವೇಳೆ ಅಂಬಣ್ಣ ಸುಣಗಾರ ದಂಪತಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಕರ್ನಾಟಕ ರಾಜ್ಯ ನೌಕರರ ಸಂಘದ ಇಂಡಿ ಘಟಕದ ಅಧ್ಯಕ್ಷ ಎಸ್.ಡಿ.ಪಾಟೀಲ,ಪ್ರಧಾನ ಕಾರ್ಯದರ್ಶಿ ಆರ್.ಎಂ.ಮೇತ್ರಿ, ಹಿರೇಮಸಳಿ ಗ್ರಾಮದ ಮಲ್ಲೆಶಪ್ಪ ಪಾಟೀಲ,ಟಿ.ಎನ್.ಕಟ್ಟೆ,ಎಸ್.ಬಿ.ಹರಳಯ್ಯ ವೇದಿಕೆಯ ಮೇಲಿದ್ದರು.