
ನೇಸರಗಿ,ಮಾ26: ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತಮ ಮಾರ್ಗದರ್ಶನ ಮಾಡುವ ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು ಎಂದು ಕಿತ್ತೂರ ,ದೇಶನೂರ ವಿರಕ್ತಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ ಹೇಳಿದರು.
ಶನಿವಾರ ಸಮೀಪದ ದೇಶನೂರ ಗ್ರಾಮದ ಸಿದ್ದಲಿಂಗೇಶ್ವರ. ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವಾ ನಿವೃತ್ತರಾದ ಎಂ.ಡಿ.ನಂದೆನ್ನವರ ಅವರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ,37 ವರ್ಷಗಳ ಕಾಲ ಮುಖ್ಯೊಪಾದ್ಯಾಯ ನಂದೆನ್ನವರ ಅವರು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ.ಅವರ ಸೇವಾ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
ಸೇವಾ ನಿವೃತ್ತರಾದ ಎಂ.ಡಿ.ನಂದೆನ್ನವರ ಮಾತನಾಡಿ, ನನ್ನ 37 ವರ್ಷದ ಸೇವಾ ಅವಧಿಯಲ್ಲಿ ಎಲ್ಲ ಶಿಕ್ಷಕರು, ಪಾಲಕರ ಉತ್ತಮ ಸಹಕಾರ ನೀಡಿದ್ದರಿಂದ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಯಿತೆಂದರು.
ಕಾರ್ಯಕ್ರಮದಲ್ಲಿ ದೇಶನೂರ ಪಿಕೆಪಿಎಸ್ ಅಧ್ಯಕ್ಷ ಬಿ.ಬಿ.ಕೇದಾರಿ, ಉಪಾದ್ಯಕ್ಷ ಬಸವರಾಜ ಕಮತಗಿ, ಮಾಜಿ ತಾ.ಪಂ ಸದಸ್ಯ ಶ್ರೀಶೈಲ ಕಮತಗಿ, ಗ್ರಾ.ಪಂ ಉಪಾದ್ಯಕ್ಷೆ ಶೋಭಾ ಭಜಂತ್ರಿ, ಮತ್ತಿಕೊಪ್ಪ ಪಿಕೆಪಿಎಸ್ ಉಪಾಧ್ಯಕ್ಷ ಅಡಿವೆಪ್ಪ ಹೊಸಮನಿ, ಡಾ.ಎಂ.ಆರ್.ಮುಲ್ಲಾ, ಮಹಾಂತೇಶ ಅಂತೆನ್ನವರ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ, ಕಸಾಪ ತಾಲೂಕಾ ಅಧ್ಯಕ್ಷ ಎನ್.ಆರ್.ಟಕ್ಕಾಯಿ, ಆನಂದ ಹಜೇರಿ, ರಾಜು ಮಡಿವಾಳರ, ನಾಗರಾಜ ಮುಚ್ಚಂಡಿ, ಮಹಾಂತೇಶ ಕೊತ್ತಲ, ಯೋಗೇಶ ಕಾಂಬೋಜಿ, ಶಿವಾನಂದ ಗೂರನವರ, ಸೋಮಪ್ಪ ಕೋಟಗಿ, ಮೊದಲಾದವರು ಇದ್ದರು.
ಶ್ರೀಮತಿ ಎಸ್.ಬಿ.ಪೂಜೇರಿ ಸ್ವಾಗತಿಸಿದರು. ಸಿ.ವಾಯ್.ಪೂಜಾರ ನಿರೂಪಿಸಿ, ವಂದಿಸಿದರು.