
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.01 ತಾಲೂಕಿನ ಹೊಸಕೇರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಟಿ. ಸೋಮಶೇಖರ್ ವೃತ್ತಿಯ ಸವಿನೆನಪಿಗಾಗಿ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಸಿ ಆನಂದ್ .ಸೋಮಶೇಖರ ಶಿಕ್ಷಕ ವೃತ್ತಿಯಲ್ಲಿ 15 ವರ್ಷ ಪೂರೈಸಿದ ಸವಿನೆನಪಿಗಾಗಿ ಶಾಲಾ ಮಕ್ಕಳಿಗೆ ಮಗ್ಗಿ ಪುಸ್ತಕ, ನೋಟ್ ಪುಸ್ತಕ,ಪೆನ್ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ ಶಿಕ್ಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜೊತೆಗೆ ಉಪಯೋಗವಾಗುವಂತ ಸಾಮಗ್ರಿಗಳನ್ನು ನೀಡುವ ಮೂಲಕ ಶಿಕ್ಷಕ ಸೋಮಶೇಖರ್ ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದಾನೆ. ಮಕ್ಕಳಿಗೆ ಉಚಿತವಾಗಿ ಪುಸ್ತಕ ಮತ್ತು ಪೆನ್ನು ವಿತರಿಸಿದರೆ ಅವರು ವಿದ್ಯಾಭಾಸದಲ್ಲಿ ಆಸಕ್ತಿ ವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ , ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿ. ಕೊಟ್ರೇಶ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್ ಲೋಕಪ್ಪ, ಹೊಸಕೇರಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಕೆ .ಜನಾರ್ಧನ ಆರ್ .ವಿ ಅಂಬಿಕಾ, ಜಿ. ಮಂಜುಳಾ ಎಸ್. ಎಂ ವೇದಮೂರ್ತಿ ಇದ್ದರು ಪ್ರಾರ್ಥನೆಯನ್ನು ಶಾಲಾ ಮಕ್ಕಳು ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಎಂ.ಎಸ್ ಆನಂದ್ ನೆರವೇರಿಸಿದರು ಕೆ. ವಿಜಯ್ ಕುಮಾರ್ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು
One attachment • Scanned by Gmail