ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾದದ್ದು

ಕೆಂಭಾವಿ :ಅ.1: ವಿದ್ಯೆಗೆ ಸಮಾನವಾದದ್ದು ಮೊತ್ತೊಂದಿಲ್ಲ ಎಂಬ ಮಾತಿದೆ ಹಾಗೇ ಸರ್ಕಾರಿ ಸೇವೆಯ ವೃತ್ತಿಯಲ್ಲಿಯೆ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು ವಿದ್ಯಾರ್ಥಿಗಳ ಜೊತೆ ಪ್ರತಿಯೊಬ್ಬ ಶಿಕ್ಷಕರು ಉತ್ತಮ ಸ್ನೇಹಮಯಿ ಜೀವನ ನಡೆಸಬೇಕು ಎಂದು ನಿವೃತ್ತ ಪ್ರಾಚಾರ್ಯ ರಾಜಶೇಖರ ಗಣಾಚಾರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸತತ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಗಣಿತ ಉಪನ್ಯಾಸಕ ನರಸಿಂಹರಾವ ಕುಲಕರ್ಣಿ ಅವರಿಗೆ ಸೋಮವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ವೃತ್ತ ಜೀವನದಲ್ಲಿ ಸದಾ ಸ್ನೇಹಮಯಿ, ಹೃದಯವಂತ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕುಲಕರ್ಣಿ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು ಎಂದು ಬಣ್ಣಿಸಿದರು. ಕನ್ನಡ ಪಂಡಿತ ಶಿವಶರಣಪ್ಪ ಶಿರೂರ ಮಾತನಾಡಿ, ನರಸಿಂಹರಾವ ಕುಲಕರ್ಣಿ ಅವರ ವೃತ್ತಿ ಮತ್ತು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದ ಪಾಠ, ಶಿಸ್ತು, ಸಂಸ್ಕಾರ, ಅವರಿಗಿದ್ದ ಕಾಳಜಿ ಬಗ್ಗೆ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನರಸಿಂಹರಾವ ಕುಲಕರ್ಣಿ ಹುಟ್ಟಿದ ಊರಲ್ಲಿ ಸತತ 12 ವರ್ಷಗಳ ಕಾಲ ಸಾರ್ಥಕ ಸೇವೆ ನನಗೆ ಖುಷಿ ತಂದಿದೆ. ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಊರಿನ ಜನತೆಯ ಸಹಕಾರವೆ ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದರು. ಪ್ರಾಚಾರ್ಯ ಶಕುಂತಲಾ ಹಡಗಲಿ ಅಧ್ಯಕ್ಷತೆ ವಹಿಸಿದ್ದರು, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಗುಂಡಭಟ್ಟ ಜೋಷಿ, ಪುರಸಭೆ ಸದಸ್ಯೆ ರಮ್ಯಾ ದೇಶಪಾಂಡೆ, ಅಶೋಕ ಸೊನ್ನದ, ಖಲೀಲ ಅಹ್ಮದ ಸುಮಂಗಲಾ ಕುಲಕರ್ಣಿ, ಗುರುರಾಜ ಕುಲಕರ್ಣಿ ಇದ್ದರು.

ವಿದ್ಯಾಶ್ರೀ ಮತ್ತು ಕೌಸರಬಾನು ನಿರೂಪಣೆ ಮಾಡಿದರು, ರಾಮಣ್ಣ ಪಾಟೀಲ ಸ್ವಾಗತಿಸಿದರು, ಬಸವರಾಜ ಕಾಡಮಗೇರಾ ವಂದಿಸಿದರು. ನಂತರ ನರಸಿಂಹರಾವ ಕುಲಕರ್ಣಿ ಹಾಗೂ ಸುಮಂಗಲಾ ಕುಲಕರ್ಣಿ ದಂಪತಿಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅದ್ದೂರಿ ಮೆರವಣಿಗೆ-ಕಾರ್ಯಕ್ರಮದ ನಂತರ ಬಾಜಾ ಭಜಂತ್ರಿಗಳೊಂದಿಗೆ ತೆರೆದ ವಾಹನದಲ್ಲಿ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಜೊತೆಗೂಡಿ ಸಿಹಿ ಹಂಚಿ ಸಂಭ್ರಮಿಸಿ ನರಸಿಂಹರಾವ ಕುಲಕರ್ಣಿ ಅವರ ಮನೆಯವರೆಗೆ ಅದ್ದೂರಿ ಮೆರವಣಿಗೆ ಮಾಡಿ ಅವರನ್ನು ಬೀಳ್ಕೊಟ್ಟರು.

ನನ್ನ ತಂದೆ-ತಾಯಿಯಿಂದ ಕಲಿತ ಉತ್ತಮ ಸಂಸ್ಕಾರವೆ ನನಗೆ ಶ್ರೀರಕ್ಷೆಯಾಯಿತು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ತಮ್ಮ ಶಿಕ್ಷಕರ ಜೊತೆ ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸಿ ಉತ್ತಮ ವಿದ್ಯಾವಂತರಾಗ ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕು.
ನರಸಿಂಹರಾವ ಕುಲಕರ್ಣಿ. ನಿವೃತ್ತ ಉಪನ್ಯಾಸಕ.