ಶಿಕ್ಷಕ ವೃತ್ತಿಯಲ್ಲಿದೆ ಸೇವಾ ಮನೋಭಾವ

ಮಾದನಹಿಪ್ಪರಗಿ: ಜೂ.8:ಶಿಕ್ಷಕ ವೃತ್ತಿ ಪವಿತ್ರವಾದದು. ತಮ್ಮ ಮಕ್ಕಳ ಸಾಧನೆಗಿಂತ ತಮ್ಮ ಕೈಯಲ್ಲಿ ಕಲಿತ ಮಕ್ಕಳ ಸಾಧನೆ ಕಂಡು ಹೆಮ್ಮೆ ಪಡುವವರು ಶಿಕ್ಷಕರು ಮಾತ್ರ. ಈ ವೃತ್ತಿಯಲ್ಲಿ ಸೇವಾ ಮನೋಭಾವ ಎದ್ದುಕಾಣುತ್ತದೆ ಎಂದು ಅಭಿನವ ಶಿವಲಿಂಗ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಇಲ್ಲಿಗೆ ಸಮೀಪದ ದರ್ಗಾಶಿರೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾಗಿದ್ದ ಶ್ರೀಮತಿ ಸರಸ್ವತಿ ಪಾಟೀಲರ ವಯೋನಿವೃತ್ತಿ ಬೀಳ್ಕೊಡುವ ಸಮಾರಂಭದ ಸಾನಿಧ್ಯವಹಿಸಿ ಮಾತಾಡಿದರು. ಶಾಲೆಯವತಿಯಿಂದ ಮತ್ತು ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರ ಸಮಯ ಪಾಲನೆ ಒರೆಗೆ ಹಚ್ಚಬೇಡಿರಿ ನಿಮ್ಮ ಮಕ್ಕಳಳು ವಿದ್ಯಾಭ್ಯಾಸ ಸರಿಯಾಗಿದೆ ನಡೆದಿದೆಯೋ ಇಲ್ಲವೋ ಎಂದು ತಿಳಿಯಿರಿ. ನಿಮ್ಮ ಮಕ್ಕಳಿಗೆ ಶಿಕ್ಷರು ಪಾಠ ಸರಿಯಾಗಿ ಮಾಡುತ್ತಾರೋ ಇಲ್ಲವೋ ತಿಳಿಯಿರಿ ಎಂದು ಹೇಳಿದರು. ವೇದಿಕೆಯ ಮೇಲೆ ಗ್ರಾ. ಪಂ.ಸದಸ್ಯೆ ಸುನಂದಾ ಸುತಾರ, ಶಿವಾನಂದ ಘಂಟೆ, ದುಂಡಪ್ಪ ಪುಜಾರಿ, ಪ್ರಭುಲಿಂಗ ನಡಗೇರಿ, ಶಾರದಾ ಚೌಧರಿ, ಸಂಜುಕುಮಾರ ಮರಬೆ, ಮಲ್ಲಿನಾಥ ಘಂಟೆ, ಶ್ರೀಶೈಲ ಗಂಟೆ, ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಶ್ರೀಶೈಲ ಜಳಕೋಟಿ, ಕಲ್ಯಾಣಿ ಸಾಲೋಟಗಿ, ಅಶೋಕ ತೋಳನೂರ, ನಾಗೇಂದ್ರ ಚಿಂಚೋಳಿ, ಶ್ರೀಮಂತ ಪರೇಣಿ, ಪ್ರಕಾಶ, ಪ್ರಭಾವತಿ, ಮುಂತಾದವರಿದ್ದರು. ಶಶಿಕಾಂತ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಅಶೋಕ ಕಾಂಬಳೆ, ನಿರೂಪಣೆ ಹಣಮಂತ ಮುಶೆಣ್ಣನವರ್ ನಡಸಿದರು. ಸಭೆಯ ಅಧ್ಯಕ್ಷೆಯನ್ನು ಮಾಜಿ ಗ್ರಾಮ ಪಂಚಾಯಿತು ಅಧ್ಯಕ್ಷೆ ವಿಜಯಾಬಾಯಿ ಮುಲಗೆ ವಹಿಸಿದ್ದರು.