ಶಿಕ್ಷಕ ಮರುಚಿಂತನೆ ಅತ್ಯಗತ್ಯ

ಧಾರವಾಡ,ಮಾ15 : ಸಮಾಜದಿಂದ ಪಡೆದುಕೊಂಡದ್ದನ್ನ ಮರಳಿ ಸಮಾಜಕ್ಕಾಗಿ ನಾವು ಏನನ್ನಾದರುಕೊಡಲೇಬೇಕಾದದ್ದು ಅನಿವಾರ್ಯ. ಶೈಕ್ಷಣಿಕಕ್ಷೇತ್ರದಲ್ಲಿ ಶಿಕ್ಷಕನ ಮೇಲೆ ಸಮಾಜಅಪಾರವಾದ ನಂಬಿಕೆ, ಗೌರವ, ವಿಶ್ವಾಸವನ್ನುಇಟ್ಟಿದ್ದಾರೆ. ವಿದ್ಯಾರ್ಥಿ ಹಾಗೂ ಸಮಾಜದ ಸೇತುವೆಯಾಗಿ ಶಿಕ್ಷಕ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣವಾಗಿಜಾರಿಗೆಯಾಗದ ಈ ಸಂದರ್ಭದಲ್ಲಿ ಶಿಕ್ಷಕ ಮರುಚಿಂತನೆಯನ್ನು ಮಾಡಬೇಕಾದದ್ದು ಇಂದಿನ ಅಗತ್ಯವಾಗಿದೆಎಂದುಕಾಲೇಜು ಶಿಕ್ಷಣ ಇಲಾಖೆಯಜಂಟಿ ನಿರ್ದೇಶಕರಾದಕೃಷ್ಣಮೂರ್ತಿ ಬಿಳಿಗೆರೆ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬ್ಯಾಂಕಿಂಗ್‍ಕ್ಷೇತ್ರದ ಭೀಷ್ಮ ದಿ.ಆರ್.ಎಸ್. ಹೂಗಾರದತ್ತಿ 83ನೇ ಜನ್ಮದಿನದ ನಿಮಿತ್ಯಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿ-2023 ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನ ವಿತರಣಾ ಸಮಾರಂಭದ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಆರ್.ಎಸ್. ಹೂಗಾರಅವರು ಮಕ್ಕಳ ಕಲಿಕೆಗಾಗಿ ನೀಡುತ್ತಿರುವ ಪ್ರೋತ್ಸಾಹಧನ ಮಕ್ಕಳಲ್ಲಿ ಪ್ರೇರಣೆಯನ್ನು ನೀಡುತ್ತದೆ. ಮಕ್ಕಳು ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದಅಧ್ಯಕ್ಷತೆ ವಹಿಸಿದ್ದ ಚಂದ್ರಕಾಂತ ಬೆಲ್ಲದ ಮಾತನಾಡಿ, ಬಡತನದರೇಖೆಯಲ್ಲಿ ಬೆಳೆದು ಉನ್ನತ ಸ್ಥಾನಕ್ಕೇರಿದ್ದ ಆರ್.ಎಸ್. ಹೂಗಾರಅವರ ವ್ಯಕ್ತಿತ್ವ ಭಾವಿ ಜನಾಂಗಕ್ಕೆ ಮಾದರಿಯಾಗಿರುವಂಥದ್ದು.ಹೂಗಾರಅವರ ಬಗ್ಗೆ ಗದುಗಿನತೋಂಟದಾರ್ಯ ಮಠದ ಸ್ವಾಮಿಜಿಗಳಿಗೆ ಅಪಾರಗೌರವ, ಪ್ರೀತಿಇತ್ತು.ಆ ಹಿನ್ನೆಲೆಯಲ್ಲಿ ಹೂಗಾರಅವರ ಹೆಸರಿನಲ್ಲಿಅಣ್ಣಿಗೇರಿಯಲ್ಲಿಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವುದು ಇದಕ್ಕೆ ಸಾಕ್ಷಿಯಾಗಿದೆಎಂದರು.
ಪ್ರಾಸ್ತಾವಿಕವಾಗಿ ಸಂಘದಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿಯವರು, ನಾಡಿನಆರ್ಥಿಕತಜ್ಞರೊಂದಿಗೆ ಸಂಪರ್ಕವನ್ನು ಹೊಂದಿದ್ದ ಹೂಗಾರವರು ಪ್ರಭಾವಿ ವ್ಯಕ್ತಿಗಳಾಗಿದ್ದರು.ನಾಡಿನಜನರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಅವರು ಬ್ಯಾಂಕಿಂಗ್‍ಕ್ಷೇತ್ರದಲ್ಲಿ ಭೀಷ್ಮಎಂದೇಖ್ಯಾತರಾಗಿದ್ದರು.ಇವತ್ತಿನ ಮಕ್ಕಳಿಗೆ ಅವರ ಹೆಸರಿನಿಂದ ನೀಡುತ್ತಿರುವ ಪ್ರೋತ್ಸಾಹಧನ ಆ ಮಕ್ಕಳ ಭವಿಷ್ಯದಲ್ಲಿತಾವುಕೂಡಾ ಹೂಗಾರರಂತೆ ಆಗಬೇಕು ಎಂಬ ಪ್ರೇರಣೆಯನ್ನು ನೀಡುವಂತಾಗಲಿ ಎಂದರು.
ದಿ. ಆರ್.ಎಸ್. ಹೂಗಾರ ಸೇವಾರತ್ನ ಪ್ರಶಸ್ತಿಯನ್ನು ಡಾ.ವ್ಹಿ.ಎಸ್. ಸಾಧುನವರ ಪರವಾಗಿಕಿತ್ತೂರರಾಣಿಚನ್ನಮ್ಮಅರ್ಬನ್‍ಕ್ರೆಡಿಟ್ ಸೌಹಾರ್ಧ ಸಹಕಾರಿ ನಿ.ಬೈಲಹೊಂಗಲದ ಹಿರಿಯ ವ್ಯವಸ್ಥಾಪಕ ಶಿವಾನಂದ ಮುಳಗುಂದ, ಶಾಖಾ ವ್ಯವಸ್ಥಾಪಕರಾದ ಪ್ರಶಾಂತದೊಡವಾಡ, ಪ್ರಶಾಂತ ಮಾಯಕಾರ, ಮಂಜುನಾಥಅಂಗಡಿ, ಸೋಮೇಶ ಕವಳಿ ಸ್ವೀಕರಿಸಿದರು.
ಧಾರವಾಡದ ಆಕಾಶ ಸುರೇಂದ್ರ ಕಾಂಬಳೇಕರ, ನರೇಂದ್ರದ ವಿದ್ಯಾಶ್ರೀ ಗಂಟಿ, ಇಡಗಲ್ಲ್ಲನ ವಿಜಯ ಸುಭಾಷ ಭಜಂತ್ರಿ ಹಾಗೂ ಸವಿತಾ ನೀಲಪ್ಪ ಮಾದರ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹಧನರೂ.5,000/- ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಡಾ. ಜಿನದತ್ತ ಹಡಗಲಿ ಪ್ರಶಸ್ತಿ ಪತ್ರ ವಾಚನ ಮಾಡಿದರು. ಶಂಕರ ಕುಂಬಿ ಸ್ವಾಗತಿಸಿದರು.ಡಾ. ಮಹೇಶ ಹೊರಕೇರಿಕಾರ್ಯಕ್ರಮ ನಿರೂಪಿಸಿದರು.ಶಂಕರ ಹಲಗತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ವೀರಣ್ಣಒಡ್ಡೀನ, ಗುರು ಹಿರೇಮಠ, ನಿಂಗಣ್ಣಕುಂಟಿ, ಸದಾನಂದ ಶಿವಳ್ಳಿ, ಪ್ರಮೀಳಾ ಜಕ್ಕಣ್ಣವರ, ವ್ಹಿ.ಎನ್. ಕೀರ್ತಿವತಿ, ಎಚ್.ಎಫ್.ಸಮುದ್ರಿ, ಕೋಟಿಗೌಡರ, ಮಹಾಂತೇಶ ನರೇಗಲ್, ಶಂಕರ ಬೆಟಗೇರಿ, ಶ್ರೀಶೈಲಗೌಡ ಕಮತರ, ಎಸ್.ಕೆ.ಕುಂದರಗಿ ಸೇರಿದಂತೆ ಮಕ್ಕಳ ಪಾಲಕರುಇದ್ದರು.