ಶಿಕ್ಷಕ ಬಂಡೆಗೆ ಬಸವಭೂಷಣ ಪ್ರಶಸ್ತಿ ಪ್ರದಾನ

ವಿಜಯಪುರ, ಮಾ.15- ಜಿಲ್ಲೆಯ ಬಸವ ಜನ್ಮಭೂಮಿ ಪ್ರತಿಷ್ಠಾನದ ದಶಮಾನೋತ್ಸವ ಹಾಗೂ ವಚನ ವೈಭವ ಕಾರ್ಯಕ್ರಮದಲ್ಲಿ ಅನುಪಮ ಶೈಕ್ಷಣಿಕ ಸೇವೆಗಾಗಿ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಅವರಿಗೆ ಪ್ರತಿವರ್ಷ ಕೊಡಮಾಡುವ “ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ”ಯನ್ನು ಬಬಲೇಶ್ವರದ ಷ.ಬ್ರ ಡಾ.ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಸಾಹಿತಿ ಪ.ಗು ಸಿದ್ದಾಪುರ, ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಚಲನಚಿತ್ರ ನಟ ಡಾ.ಆಡುಗೋಡಿ ಶ್ರೀನಿವಾಸ, ಬಾಗಲಕೋಟ ಸಾಹಿತಿ ಡಾ.ಪ್ರಕಾಶ ಖಾಡೆ, ವಿಜಯಪುರ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಪ್ರತಿಷ್ಠಾನದ ಮುಖ್ಯಸ್ಥ ಡಾ.ಮುರುಗೇಶ ಸಂಗಮ ಮುಂತಾದವರು ನೀಡಿ ಗೌರವಿಸಿದರು.