
ಕಲಬುರಗಿ,ಸ 4: ಪ್ರತಿ ವರ್ಷ ರಾಜ್ಯ ಸರಕಾರವು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿರುವುದು ಸರಿಯಾದ ನಿರ್ಧಾರ. ಆದರೆ ಈ ಬಾರಿ ಪ್ರಶಸ್ತಿ ನೀಡುವದರಲ್ಲಿ ಕಲಬುರಗಿ ಜಿಲ್ಲೆಗೆ ಅನ್ಯಾಯ ಮಾಡಿರುವದು ಖಂಡನೀಯ ಕರವೇ ಕಾವಲುಪಡೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಹೇಳಿದ್ದಾರೆ.ಪ್ರಸ್ತುತ ವರ್ಷ ಕಲಬುರಗಿ ಜಿಲ್ಲೆಯಿಂದ ರಾಜ್ಯ ಪ್ರಶಸ್ತಿಗೆ ಎರಡು ಪ್ರಸ್ತಾವನೆಗಳನ್ನು ಕಳುಸಿಕೊಡಲಾಗಿದ್ದು,ಆಯ್ಕೆ ಸಮಿತಿಯು ಕನಿಷ್ಠ ಪಕ್ಷ ಒಂದು ಪ್ರಶಸ್ತಿಯನ್ನು ಕೂಡ ಕಲಬುರಗಿ ಜಿಲ್ಲೆಗೆ ಕೊಡದೇ ಇರುವುದು ಯಾವ ನ್ಯಾಯ ? ಎಂದಿದ್ದಾರೆ.