ಶಿಕ್ಷಕ ನಿವೃತ್ತಿಯಾಗುವುದು ವೃತ್ತಿಯಿಂದ ಮಾತ್ರ, ವಿದ್ಯಾರ್ಥಿಗಳ ಮನಸ್ಸಿನಿಂದಲ್ಲ

(ಸಂಜೆವಾಣಿ ವಾರ್ತೆ)
ವಿಜಯಪುರ :ಆ.2: ಶ್ರೀಮತಿ ಶಾರದಾಬಾಯಿ ಬಾ. ಬಿರಾದಾರಪಾಟೀಲ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 55, ಗಾಂಧಿ ನಗರ, ವಿಜಯಪುರ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಬಂಧು ಬಳಗ ಹಾಗೂ ಸ್ನೇಹಿತರಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರೇವಣಸಿದ್ದೇಶ್ವರ ಟ್ರಸ್ಟ್ ಸಮಿತಿ ಅಧ್ಯಕ್ಷರು, ಸರಕಾರಿ ಪ.ಪೂ. ಕಾಲೇಜು ಇಂಗಳೇಶ್ವರದ ನಿವೃತ್ತ ಉಪನ್ಯಾಸಕರಾದ ಬಿ.ಜಿ. ಪಾಟೀಲ ರವರು ಮಾತನಾಡುತ್ತ, ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತಿರುತ್ತೇವೆ. ಇಂದು ಇವರ ನಡೆ-ನುಡಿ ನಮಗೆಲ್ಲರಿಗೂ ಪ್ರೇರಣೆ. ಶಿಕ್ಷಕ ನಿವೃತ್ತಿಯಾಗುವುದು ವೃತ್ತಿಯಿಂದ ಮಾತ್ರ. ಆದರೆ ವಿದ್ಯಾರ್ಥಿಗಳ ಮನಸ್ಸಿಂದಲ್ಲ. ಗುರುಮಾತೆಯರು ಪ್ರೀತಿ ವಾತ್ಸಲ್ಯ ಮಮತೆಯಿಂದ ವಿದ್ಯಾರ್ಥಿಗಳ ಪ್ರೀತಿ ಗಳಿಸಿರುವದು ಬಹಳ ಸಂತೋಷ. ಗುರುಮಾತೆಯವರ ನಿವೃತ್ತಿ ಜೀವನ ಸುಖಕರವಾಗಿ ಸಾಗಲಿ ಹಾಗೂ ಆಯುಷ್ಯ ಆರೋಗ್ಯ ಹಾಗೂ ಸಂಪತ್ತು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಣಾಧಿಕಾರಿಗಳು ಶ್ರೀ ವ್ಹಿ.ಡಿ. ಸಕ್ರಿ ಅವರು ಮಾತನಾಡಿ, ಶ್ರೀಮತಿ ಶಾರದಾಬಾಯಿ ಬಾ. ಬಿರಾದಾರಪಾಟೀಲ ಇವರ ಸೇವೆಯನ್ನು ಸಮೀಪದಿಂದ ಕಂಡಿದ್ದು, ಇವರು ಉತ್ತಮ ಹಾಗೂ ಆದರ್ಶ ಶಿಕ್ಷಕರು, ಒಳ್ಳೆಯ ಸ್ನೇಹ ಜೀವಿಗಳು, ಹಾಗೂ ಬಂಧು, ಬಾಂಧವರಿಗೆ ಹಿರಿಯರಿಗೆ ಗೌರವದಿಂದ ಹಾಗೂ ಆತ್ಮೀಯ ಭಾವದಿಂದ ಕಂಡವರು.ಇವರ ಇಬ್ಬರು ಹೆಣ್ಣು ಮಕ್ಕಳು ಸಹ ಶಿಕ್ಷಕರಾಗಿದ್ದಾರೆ.
ಇನ್ನೋರ್ವ ಅತಿಥಿಗಳಾಗಿ ಎಚ್.ಓ.ಡಿ. ಎನಾಟಮಿ ಡಿಪಾರ್ಟಮೆಂಟ್ ಡಾ.ಬಿ.ಜಿ.ಪಾಟೀಲ, ಬಿ.ಎಮ್. ಪಾಟೀಲ ವೈದ್ಯಕೀಯ ಕಾಲೇಜು, ವಿಜಯಪುರ ಇವರು ಮಾತನಾಡಿ, ಈ ಶಾಲೆಯ ಪರಂಪರೆಯ ಕೊಂಡಿಯಾಗಿ ಅವರು ಕೆಲಸ ಮಾಡುವುದರ ಜೊತೆಗೆ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ವೃತ್ತಿ ಜೀವನದೂದ್ದಕ್ಕೂ ಮಕ್ಕಳೊಂದಿಗೆ ಸ್ನೇಹಿತನಾಗಿ ಬೆರೆಯುತ್ತಿದ್ದೇನೆ. ನನ್ನ ಸಹೋದ್ಯೋಗಿಗಳು ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯಬೇಡಿ ಮಕ್ಕಳು ದಾರಿ ತಪ್ಪುತ್ತಾರೆ ಎನ್ನುತ್ತಿದ್ದರು. ಆದರೆ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರೆ ಮಾತ್ರ ಆ ಮಕ್ಕಳು ನಮ್ಮ ಮಾತನ್ನು ಕೇಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಇನ್ನೋರ್ವ ಐ.ಜಿ.ಸಾಸಟ್ಟಿ ನಿವೃತ್ತಿ ಹಿರಿಯ ಆರೋಗ್ಯ ತನಿಖಾಧಿಕಾರಿಗಳು, ಸಿದ್ದು ಪಾಟೀಲ ನಿವೃತ್ತ ಪ್ರೌಢ ಶಾಲಾ ಶಿಕ್ಷಕರು, ಅಣ್ಣಾರಾಯ ಸಾಸಟ್ಟಿ ಶಿಕ್ಷಕರು, ನಾಗೇಶ ದೇಸಾಯಿ ಬ್ಯಾಂಕ ಅಧಿಕಾರಿಗಳು, ಸಂತೋಷ ಆರ್. ಕೊಕಟನೂರ, ಸಂಜು ಕುರುಗೋಟಗಿ ಶಿಕ್ಷಕರು, ಗುರುಮಾತೆಯವರ ತಂದೆಯವರಾದ ಬಿ.ಎನ್.ಪಾಟೀಲ ಮಾಜಿ ಅಧ್ಯಕ್ಷರು ಟಿ.ಡಿ.ಬಿ. ಬಸವನ ಬಾಗೇವಾಡಿ, ಡಾ. ಅರವಿಂದ ಬಿರಾದಾರ, ಸಂಗನಗೌಡ ಕ.ಬಿರಾದಾರ, ನಾನಾಸಾಹೇಬಗೌಡ. ಎನ್.ಪಾಟೀಲ, ಶ್ರೀಮತಿ ಕಮಲಾಬಾಯಿ ಬಾಳಾಸಾಹೇಬಗೌಡ ಪಾಟೀಲ, ಶ್ರೀಮತಿ ಸುಶಿಲಾಬಾಯಿ.ಚಂ . ಪಾಟೀಲ. ಶ್ರೀಮತಿ ದ್ರಾಕ್ಷಾಯಣಿ.ಜ ಬಿರಾದಾರ, ಶ್ರೀಮತಿ ಮಂಜೂಳಾ.ಎನ್. ದೇಸಾಯಿ, ಶ್ರೀಮತಿ, ಶ್ರೀ ಮಠಪತಿ ದಂಪತಿಗಳು ರಾಜಶೇಖರ.ಬಾ. ಪಾಟೀಲ, ಶ್ರೀಮತಿ ಲತಾ ಪಾಟೀಲ, ಶ್ರೀ ಸುನೀಲ ಮತ್ತು ಸೀಮಾ, ರತ್ನಾಬಾಯಿ ಹಾಗೂ ಮುಂತಾದವರು ಪಾಲ್ಗೊಂಡು ಶುಭ ಹಾರೈಸಿದರು.
ಎಚ್.ಬಿ.ಗೂಗಿಹಾಳ ನಿವೃತ್ತ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರತ್ನಾಬಾಯಿ ಸಾಸಟ್ಟ ಸ್ವಾಗತಿಸಿದರು. ಶ್ರೀಮತಿ ಸೀಮಾ ವಂದಿಸಿದರು.