ಶಿಕ್ಷಕ ದಂಪತಿ ಪುತ್ರನಿಗೆ ಶೇ.92 ಅಂಕ

ಕೋಲಾರ,ಮೇ,೧೬- ಜಿಲ್ಲೆಯ ಮಾಲೂರಿನ ಕ್ರೈಸ್ಟ್ ಇಂಟರ್‌ನ್ಯಾಷನಲ್ ಶಾಲೆ ವಿದ್ಯಾರ್ಥಿ ಹಾಗೂ ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ,ಶಿಕ್ಷಕಿ ಜಯಂತಿ ದಂಪತಿ ಪುತ್ರ ಜೆ.ಸಿ.ವರುಣ್ ಐಸಿಎಸ್‌ಸಿ ೧೦ನೇ ತರಗತಿ ಪರೀಕ್ಷೆಯಲ್ಲಿ ಶೇ.೯೨.೪ ಅಂಕಗಳ ಸಾಧನೆ ಮಾಡಿದ್ದಾರೆ.
ಇದೀಗ ಇಂಡಿಯನ್ ಸರ್ಟಿಫಿಕೇಟ್ ಆಪ್ ಸೆಕೆಂಡರಿ ಎಜುಕೇಷನ್ ೧೦ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವರುಣ್ ಕನ್ನಡದಲ್ಲಿ ೯೫, ಇಂಗ್ಲೀಷ್-೮೭, ಗಣಿತ-೯೦, ವಿಜ್ಞಾನ-೯೦, ಸಮಾಜವಿಜ್ಞಾನ-೯೪ ಹಾಗೂ ಕಂಪ್ಯೂಟರ್-೯೬ ಅಂಕಗಳೊಂದಿಗೆ ಶೇ.೯೨.೪ ಅಂಕಗಳ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಯ ಸಾಧನೆಗಾಗಿ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಕೋಲಾರ ಜಿಲ್ಲಾದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್, ಪದಾಧಿಕಾರಿಗಳಾದ ಕೆ.ಲೀಲಾ ಮತ್ತಿತರರು ಅಭಿನಂದಿಸಿದ್ದಾರೆ.