ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.6: ಹೊಸಪೇಟೆ ಶಿಕ್ಷಕ ದಂಪತಿಗಳು ತಮ್ಮ ತಮ್ಮ ವಿಷಯಗಳಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ರ್ಯಾಂಕ್ ಬಂಗಾರದ ಪದಕ ಹಾಗೂ ನಗದು ಬಹುಮಾನಕ್ಕೆ ಕಾರಣವಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಕಾರ್ಯನಿರ್ವಹಿಸುವ ರಮಿಜಾಬಿ ಪಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಗುರುಬಸವರಾಜ್ ಹೆಚ್.ಎಂ. ಶೈಕ್ಷಣಿಕ ಸಾಧನೆ ಮಾಡಿದ ದಂಪತಿಗಳಾಗಿದ್ದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಜರುಗಿದ 18ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮೊದಲ ರ್ಯಾಂಕ್ ಪಡೆಯುವ ಮೂಲಕ ರಾಜ್ಯಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಅತಿ ಹೆಚ್ಚಿನ ಅಂಕಗಳಿಸಿದ್ದಾರೆ. ಈ ಸಾಧನೆಗೆ ನಗದು ಬಹುಮಾನವನ್ನು ಪಡೆದರೆ, ಗುರುಬಸವರಾಜ್ ಹೆಚ್.ಎಂ. ಇವರು ಸಮಾಜಶಾಸ್ತ್ರ ವಿಷಯದಲ್ಲಿ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ದಂಪತಿಗಳು ಒಂದೇ ಘಟಿಕೋತ್ಸವದಲ್ಲಿ ರ್ಯಾಂಕ್ ಪಡೆದು ರಾಜ್ಯಪಾಲರಿಂದ ಸ್ವೀಕರಿಸಿದ್ದು ಸ್ಥಳೀಯ ಶಿಕ್ಷಕರ ಸಂಘದ ಪದಾಧಿಕಾರಿಗಳು ಹರ್ಷಿಸಿದ್ದಾರೆ.