ಶಿಕ್ಷಕ ಜಯಣ್ಣಗೆ ಸನ್ಮಾನ

ಕೋಲಾರ,ಜು,೮:ನಗರದ ಹಾರೋಹಳ್ಳಿಯ ಮಹರ್ಷಿ ಯೋಗ ಮಂದಿರದಲ್ಲಿ ಗುರುಪೂರ್ಣಿಮ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯೋಗ ಗುರು ಜಯಣ್ಣ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕೆಂದರೆ ಅವನ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂದರು.
ಗುರು ಇಲ್ಲದೆ ಜೀವನಕ್ಕೆ ಅಥವಾ ಜ್ಞಾನಕ್ಕೆ ಯಾವುದೇ ರೀತಿ ಅರ್ಥ ಇರುವುದಿಲ್ಲ ನಮ್ಮ ಮೊದಲ ಗುರು ತಾಯಿ ನಮಗೆ ಜೀವನದ ಅರ್ಥವನ್ನು ನೀಡುತ್ತಾಳೆ, ಅದೇ ರೀತಿ ಜೀವನಕ್ಕೆ ಅಗತ್ಯ ಜ್ಞಾನವನ್ನು ಗುರು ನೀಡುತ್ತಾನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ನಂದೀಶ್ವರ್, ಸದಾಶಿವ, ಕೆ.ಎಂ.ಪ್ರಕಾಶ್, ರಾಜೇಂದ್ರ ಪ್ರಸಾದ್, ಜಗನ್ನಾಥ್, ಡಿ.ಎಸ್ .ಉಮೇಶ್, ಮಲ್ಲಿಕಾರ್ಜುನ್,,ಮುನಿಯಪ್ಪ, ಮುನೇಂದ್ರ, ಪಿ.ವಿ .ಪ್ರಕಾಶ್, ಚಂದ್ರ ಕುಮಾರ್, ಹಾಜರಿದ್ದರು.