ಶಿಕ್ಷಕ ಐನಾಪೂರ ಕಮಲಾಕರ್ ಅವರಿಗೆ ಬೀಳ್ಕೊಡುಗೆ

ರಾಯಚೂರು,ಜು.೩೧- ನಗರದ ಟಾಗೋರ ಸ್ಮಾರಕ ಪ್ರೌಡ ಶಾಲೆಯ ಹಿರಿಯ ಶಿಕ್ಷಕರಾದ ಐನಾಪೂರ ಕಮಲಾಕರ್ ಇವರು ತಮ್ಮ ಸುಧೀರ್ಘ ೩೭ ವರ್ಷಗಳ ಸೇವಾ ಸೇವಾ ಸಲ್ಲಿಸಿ ಶುಕ್ರವಾರ ವಯೋನಿವೃತ್ತಿ ಯಾಗಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಆರ್ ಕೆ.ಅಮರೇಶ್ ಮಾತನಾಡಿ ಇವರ ಪ್ರಾಮಾಣಿಕ ಸೇವೆಯನ್ನು ಹಾಗೂ ವಿದ್ಯಾರ್ಥಿ ಸ್ನೇಹಿ ಸೇವೆಯನ್ನು ನೆನಸಿಕೊಂಡರು.ಇವರು ತಯಾರಿಸಿ ಎಸ್.ಎಸ್.ಎಲ್ ಸಿ ವಾರ್ಷಿಕ ಪರೀಕ್ಷೆ ೨೦೦೭ ರ ತೃತೀಯ ಬಾಷೆ ಹಿಂದಿ ಪ್ರಶ್ನೆ ಪತ್ರಿಕೆಯನ್ನು ರಾಜ್ಯ ಮಟ್ಟದಲ್ಲಿ ತಯಾರಿಸಿ ಇಡೀ ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆ ಯಾಗಿದ್ದು,ವಿಶೇಷ ಎಂದುರು.
ಪ್ರಸ್ತುತ ಇವರು ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಯಚೂರು ಜಿಲ್ಲಾ ಟ್ರೈನಿಂಗ್ ಕಮಿಷನರ್ ಆಗಿ ೨೦೨೦-೨೧ ರಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಸೇವಾ ನಿವೃತ್ತಿ ಜೀವನ ಶುಭವಾಗಲಿ ಎಂದು ಹಾರೈಸಿದರು.
ಇನ್ನೊಬ್ಬ ಸಿಬ್ಬಂದಿಯಾದ ದ್ವಿತೀಯ ದರ್ಜೆ ಸಹಾಯಕ ಶ್ರೀಮಂತ್ ಎಲ್.ಕೆ. ಇವರು ಕೂಡ ವಯೋ ನಿವೃತ್ತಿಯಾಗಿದ್ದಾರೆ ಇವರ ಜೀವನ ಕೂಡ ಸುಖಕರವಾಗಿರಲಿ ಎಂದು ಸಂಸ್ಥೆಯ ಪರವಾಗಿ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಕವಿತಾ ಹಾಗೂ ಭೋದಕ ಹಾಗೂ ಭೋದಕೇತಾ ಸಿಬ್ಬಂದಿ ಹಾಜರಿದ್ದರು.