ಶಿಕ್ಷಕ ಉಪನ್ಯಾಸಕರ ವೇತನ ತಾರತಮ್ಯ ಪರಿಹಾರಕ್ಕೆ ಅಂಬಲಗಿ ಮನವಿ

ಕಲಬುರಗಿ,ನ.18- ಅತಿಥಿ ಶಿಕ್ಷಕರ ಬಾಕಿ ವೇತನ ಕೊಡಿಸುವಲ್ಲಿ ಯಶಸ್ವಿಯಾಗಿರುವ ಎಂಎಲ್‍ಸಿ ಶಶೀಲ ಜಿ.ನಮೋಶಿ ಅವರು, ಶಿಕ್ಷಕ ಉಪನ್ಯಾಸಕರಿಗೆ ಕೇಂದ್ರದ ಮಾದರಿಯಲ್ಲಿ ವೇತನ ಕೊಡಿಸುವ ಮೂಲಕ ಈ ತಾರತಮ್ಯವನ್ನು ಸರಿಪಡಿಸುವಂತೆ ಪ್ರೊ.ಎಂ.ಬಿ.ಅಂಬಲಗಿ ಅವರು ಮನವಿ ಮಾಡಿದರು.
ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಶಶೀಲ ನಮೋಶಿ ಅವರನ್ನು ಈಶಾನ್ಯ ವಲಯದ ಶಿಕ್ಷಕರ ವೇದಿಕೆಯಿಂದ ಗೃಹ ಸನ್ಮಾನಮಾಡಿ ಮಾತನಾಡಿದ ಅವರು, ಶಿಕ್ಷಕ ಉಪನ್ಯಾಸಕರ ಸಮಸ್ಯೆಗಳ ಜತೆ ಈ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಲಂ.371(ಜೆ)ದಡಿ ಅನುದಾನ ಕೊಡಿಸಲು ಮುಂದಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶೀಲ ಜಿ.ನಮೋಶಿ ಅವರು, ತಮ್ಮ ಗೆಲುವಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ, ತಮ್ಮ ಗೆಲುವು ಶಿಕ್ಷಕರಿಗೆ ಸಮರ್ಪಣೆ ಮಾಡುತ್ತೇನೆ ಎಂದರು.
ತಮ್ಮನ್ನು ಬೆಂಬಲಿಸಿ ಗೆಲ್ಲಸಿಲೇಂದೆ ಬಿಜೆಪಿಗೆ ಸೇರಿದ ಅಂಬಲಗಿ ಅವರು, ತಮ್ಮ ವೇದಿಕೆಯ ಸದಸ್ಯರ ಹಾಗೂ ಶಿಕ್ಷಕ ಉಪನ್ಯಾಸಕರ ಮನಸ್ಸನ್ನು ಪರಿವರ್ತಿಸಿ ನನ್ನ ಪರವಾಗಿ ಶ್ರಮಿಸಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಡಾ. ರಾಜೇಂದ್ರ ಯರನಾಳೆ, ಶಿವಯ್ಯ ಸ್ವಾಮಿ, ಡಾ. ಸಿದ್ರಾಮಯ್ಯ ಮಠ, ಡಾ. ಶಿವಶರಣಪ್ಪ ಧಾಬಾ, ಡಾ. ಬಸವರಾಜ ಸಣ್ಣಕ್ಕಿ, ರಾಘವೇಂದ್ರ ಕಲ್ಯಾಣಕರ್, ವೀರೇಂದ್ರ ಪಾಟೀಲ ಕುಮಸಿ, ಗುರುಪ್ರಸಾದ ಅಂಬಲಗಿ, ದೇವಿಂದ್ರಪ್ಪ ಅವಂಟಿ, ಸೇರಿದಂತೆ ಹಲವಾರು ಶಿಕ್ಷಕ-ಉಪನ್ಯಾಸಕರು ಉಪಸ್ಥಿತರಿದ್ದರು.