
ಭಾಲ್ಕಿ:ಆ.2:ಶಿಕ್ಷಕ ವೃತ್ತಿಯಲ್ಲಿದ್ದವರು ಆದರ್ಶ ಶಿಲ್ಪಿಗಳಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೆನ ಸಲಹೆ ನೀಡಿದರು.
ಭಾಲ್ಕಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಮೂಹ ಸಂಪನ್ಮೂಲ ಕೇಂದ್ರ ವಲಯದಲ್ಲಿ ಸೇವೆಗೈದು ನಿವೃತ್ತರಾದ ದಿಲೀಪ ನಾಯಿಕೊಡೆ,ನಜಿಮೋದಿನ್,ಭೀಮರಾವ ವಡ್ಡೆÀ,ಶೇಕ ಮುಜಾಫರ್ ಶಿಕ್ಷಕರಿಗೆ ಗೌರವಿಸಿ ಮಾತನಾಡಿದರು.
ಶಿಕ್ಷಕ ವೃತ್ತಿ ಪವಿತ್ರ ವೃತ್ತಿಯಾಗಿದೆ.ಶಿಲ್ಪಿ ತನ್ನ ಕಠೀಣ ಪರಶ್ರಮದ ಮೂಲಕ ಕಲ್ಲಿನಲ್ಲಿ ಸುಂದರ ಮೂರ್ತಿ ನಿರ್ಮಿಸುತ್ತಾನೋ ಹಾಗೆ ಶಿಕ್ಷಕರಾದವರು ತಮ್ಮ ಆದರ್ಶ ಬೋಧನೆಯಿಂದ ಆದರ್ಶ ಮಕ್ಕಳನ್ನು ಸೃಷ್ಠಿಸಬೇಕು.ಶ್ರಧ್ಧೆ,ಭಕ್ತಿಯಿಂದ ತನ್ನ ಕಾಯಕ ಮಾಡಬೇಕು ಎಂದು ಹೇಳಿ,ನಿವೃತ್ತರ ಜೀವನ ಸುಖ,ಸಂತೋಷ,ನೆಮ್ಮದಿ ಮತ್ತು ಸಮೃದ್ದಿಯಿಂದ ಕೂಡಿರಲಿ ಎಂದು ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡು ಆಗಮಿಸಿದ ನೂತನ ಜಿಪಿಟಿ ಶಿಕ್ಷಕಿ ಶಾಂತಾ ಅವರಿಗೂ ಸನ್ಮಾನಿಸಲಾಯಿತು.
ಬ್ಯಾಗ ವಿತರಣೆ:ಮುಖ್ಯಗುರು ಬಾಲಾಜಿ ಬೈರಾಗಿ ತಮ್ಮ ಸ್ವಂತ ವೆಚ್ಚದಿಂದ ಶಾಲೆಯ ಮಕ್ಕಳಿಗೆ ಬ್ಯಾಗ ವಿತರಿಸಿದರು.
ಸಿಆರ್‍ಪಿ ನೀಲಕಂಠ ಕುರ್ಣಿ ಅಧ್ಯಕ್ಷತೆವಹಿಸಿ ಮಾತನಾಡಿದರು.ಸಂಬಣ್ಣ ಕಟ್ಟಿಮನಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.