ಶಿಕ್ಷಕ ಅಮಾನತು : ಒಂದು ಡಿಬಾರ್

ಇಂಡಿ:ಮಾ.27:ಪಟ್ಟಣದಲ್ಲಿ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲೂಕಿನ್ಯಾದಂತ ಪ್ರಾರಂಭಗೊಂಡವು. ಒಟ್ಟು 4563 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 85 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿ ಉಳಿದರು.
ಪರೀಕ್ಷೆ ನಡೆದ ಪಟ್ಟಣದ ಸಾಯಿ ಪಬ್ಲಿಕ್ ಶಾಲೆ ಕೇಂದ್ರಕ್ಕೆ ಭೇಟಿ ನೀಡಿದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನು ಡಿಬಾರು ಮಾಡಿದ್ದಾರೆ.
ಅದಲ್ಲದೆ ಪರೀಕ್ಷೆ ಕೆಲಸದಲ್ಲಿ ನಿಷ್ಕಾಳಜಿ ಮಾಡಿದಕ್ಕಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೋರಗಿಯ ರಾಜಶೇಖರ ಬಂಡೆ ಶಿಕ್ಷಕರನ್ನು ಪರೀಕ್ಷೆಯಿಂದ ಅಮಾನತು ಗೊಳಿಸಿ ಈ ಕುರಿತು ಅವರನ್ನು ಸೇವೆಯಿಂದ ಅಮಾನತು ಗೊಳಿಸಿ ಅವರ ಮೇಲೆ ಸೂಕ್ತ ಕ್ರಮಕ್ಕಾಗಿ ಡಿಡಿಪಿಐ ಇವರಿಗೆ ಪತ್ರ ಬರೆದಿರುವದಾಗಿ ಎಸಿ ಗದ್ಯಾಳ ತಿಳಿಸಿದ್ದಾರೆ.
ಉಳಿದಂತೆ ಇಂಡಿ ಪಟ್ಟಣದ ಎಂಟು ಮತ್ತು ಗ್ರಾಮಾಂತರ ಪ್ರದೇಶದ ಎಂಟು ಕೇಂದ್ರಗಳಲ್ಲಿ ಪರೀಕ್ಷೆ ಸುವ್ಯವಸ್ಥಿತ ನಡೆದಿವೆ.