ಶಿಕ್ಷಕಿ ಸೈಯದಾ ಆಯಿಷಾ ಅಮಾನತು

ರಾಯಚೂರು,ಏ.೨೯- ನಗರದ ಸರಕಾರಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸೈಯದಾ ಆಯಿಷಾ ಅವರು ಸರಕಾರ ಸೌಲಭ್ಯ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಸಿ ಅವರನ್ನು ಅಮಾನತುಗೊಳಿಸಿ ತಾಲೂಕು ಶೈಕ್ಷಣಿಕ ಅಧಿಕಾರಿ ಚಂದ್ರಶೇಖರ ಬಂಡಾರಿ ಅವರು ಅದೇಶಿಸಿದ್ದಾರೆ. ಶಿಕ್ಷಕಿ ಸೈಯದಾ ಆಯಿಷಾ ಅವರು ಅನಾರೋಗ್ಯದ ನೆಪದ ಮೇಲೆ ವೈದ್ಯಕೀಯ ಚಿಕೆತ್ಸೆ ಎಂದು ಸುಳ್ಳು ಮಾಹಿತಿ ನೀಡಿರುವ ಚಿಕೆತ್ಸೆ ಭತ್ಯೆ ಪಡೆದುಕೊಂಡಿದ್ದರು ಹಾಗೂ ಶಾಲೆ ಹಾಜರಿಯಾಗದೆ ಮನೆಯಲ್ಲಿ ಉಳಿದುಕೊಂಡು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದರು. ಸಹಿಯಲ್ಲಿ ವ್ಯತ್ಯಾಸ ಕಂಡು ಬಂದದೆ. ಶಿಕ್ಷಕಿಗೆ ಸಂತಾನ ಇಲ್ಲದಿದ್ದರು ಇಲಾಖೆ ಸುಳ್ಳು ಮಾಹಿತಿ ನೀಡಿ ಶಿಶುಪಾಲನ ರಜೆಯನ್ನು ತೆಗೆದುಕೊಂಡಿದ್ದರು. ಈ ಸಂಬಂಧ ಸಾಮಾಜಿಕ ಹೋರಾಟಗಾರ ಅಂಬಾಜಿರಾವ್ ಮೈದರಕರ್ ದೂರು ನೀಡಿದ್ದರು. ಅಂಬಾಜಿರಾವ್ ಅವರ ದೂರನ್ನು ಪರಿಗಣಿಸಿ ವಿಚಾರಣೆ ನಡೆಸಿರುವ ಕ್ಷೇತ್ರದ ಶೈಕ್ಷಣಿಕ ಅಧಿಕಾರಿ ಚಂದ್ರಶೇಖರ ಎಂ ಬಂಡಾರಿ ಅವರು ಶಿಕ್ಷಕಿ ಸೈಯದಾ ಆಯಿಷಾ ಅವರು ಸರಕಾರಿ ಸೌಲಭ್ಯ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿರುವ ಪರಿಣಾಮ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಹಾಗೂ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ಶಿಕ್ಷಕಿ ಸೈಯದಾ ಆಯಿಷಾ ಸೂಚಿಸಿದ್ದಾರೆ.