ಶಿಕ್ಷಕಿ ಪಲ್ಲವಿಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ   


ಸಂಜೆವಾಣಿ ವಾರ್ತೆ
ಹೊಸಪೇಟೆ ನ8: ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತಗಾಯನ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಶಿಕ್ಷಕಿ ಪಲ್ಲವಿಭಟ್ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಜೆಗೆ ಬೆಂಗಳೂರಿನಲ್ಲಿ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯ  ಹೊಸಪೇಟೆ ತಾಲೂಕಿನ ಬ್ಯಾಲಕುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ವಿಜಯನಗರ ಜಿಲ್ಲೆಗೆ ಹಾಗೂ ಹೊಸಪೇಟೆ ತಾಲೂಕಿಗೆ ಕೀರ್ತಿ ಮರೆದಿದ್ದಾರೆ.
ಇದೇ ತಿಂಗಳು 11 ರಿಂದ 17 ರವರೆಗೆ ತ್ರಿಪುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಕರ್ನಾಟಕ ಪ್ರತಿನಿಧಿಯಾಗಿ ಪಾಲ್ಗೊಳಲಿದ್ದಾರೆ. ಶಿಕ್ಷಕಿ ಪಲ್ಲವಿಭಟ್‍ರವರ ಈ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಡಾ.ನಾಯಕ ಹುಲಗಪ್ಪ, ಕಾರ್ಯದರ್ಶಿ ಪ್ರಕಾಶ ಕುಲಕರ್ಣಿ, ಉಮಾಮಹೇಶ್ವರ, ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘ, ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಕೆ, ನೂರ್‍ಜಹಾನ್, ಗುಂಡಿ ಮಾರುತಿ, ಶ್ರೀಕಾಂತ ಸೇರಿದಂತೆ ಇತರರು ಪಾಳ್ಗೊಂಡಿ ಸನ್ಮಾನಿಸುವ ಮೂಲಕ ಶಿಕ್ಷಕಿ ಪಲ್ಲವಿಭಟ್‍ರವರಿಗೆ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಯಶಗಳಿಸುವಂತೆ ಹಾರೈಸಿದರು.