ಶಿಕ್ಷಕಿ ತಾಯಮ್ಮಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ

ಕಲಬುರಗಿ,ಜ.11: ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕಕರ ಕ್ಷೇಮಾಭಿವೃದ್ದಿ ಸಂಘ ಆಯೋಜಿಸಿದ ರಾಜ್ಯ ಮಟ್ಟದ ಸಾವಿತ್ರಿಬಾಯಿ ಫುಲೆ ಜಯಂತೋತ್ಸವದಲ್ಲಿ ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಹೊಸಹೆಬ್ಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ತಾಯಮ್ಮ ಆರ್ ಕರಣಕೋಟೆ ಅವರಿಗೆ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಗಲಕೋಟೆ ಸುಕ್ಷೇತ್ರ ಪಟ್ಲೂರ ತುಳಜಾ ಭವಾನಿ ಪೂಜ್ಯ ಪರಶುರಾಮ ಮಹಾರಾಜರುಸಾನಿಧ್ಯವಹಿಸಿದ್ದರು. ಧಾರವಾಡ ರಾಜ್ಯ ಶಾಲಾ ನಾಯಕತ್ವ ಶೈಕ್ಷಣಿಕ ಯೊಜನೆ ಮತ್ತು ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ. ಬಿ. ಕೆ. ಎಸ್. ವರ್ಧನ್, ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕಕರ ಕ್ಷೇಮಾಭಿವೃದ್ದಿ ಸಂಘ ರಾಜ್ಯ ಅಧ್ಯಕ್ಷ ಡಾ. ವಿಶ್ವನಾಥ ಧುಮಾಳ, ರಾಜ್ಯ ಕಾರ್ಯದರ್ಶಿ ಎನ್. ಎಲ್. ರಾಠೋಡ ಮುಂತಾದವರು ಇದ್ದರು.