ಶಿಕ್ಷಕಿ ತಾಯಮ್ಮಗೆ ಶಿಕ್ಷಕರತ್ನ ಪ್ರಶಸ್ತಿ

ಕಲಬುರಗಿ:ಫೆ.19: ಚೇತನ ಫೌಂಡೇಷನ್ ಕರ್ನಾಟಕ ಹಾಗೂ ಸಂಚಲನ ನ್ಯೂಸ್ ಸಹಯೋಗದಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜರುಗಿದ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಪ್ರಸಕ್ತ ಸಾಲಿನ ಫೆ 18ರಂದು ರವಿವಾರ ಆಯೋಜಿಸದ ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಹೊಸಹೆಬ್ಬಾಳ ಸ.ಹಿ.ಪ್ರಾ ಶಾಲೆ ಸಹ ಶಿಕ್ಷಕಿ ತಾಯಮ್ಮ ಆರ್ ಕರಣಕೋಟಿ ಅವರಿಗೆ ಗದುಗಿನ ಗಾಂಧಿ, ಶಿಕ್ಷಕ ಸಂತ ಬಿ. ಈ ಅಣ್ಣಿಗೇರಿ ಶಿಕ್ಷಕರತ್ನ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷ ಮಲ್ಲಿಕಾರ್ಜುನ ಉಪ್ಪಿನ ಚೇತನ ಫೌಂಡೇಷನ್ ಕರ್ನಾಟಕ ಅಧ್ಯಕ್ಷ ಡಾ ಚಂದ್ರಶೇಖರ ಮಾಡಲಗೇರಿ ಹಾಗೂ ಉಪಾಧ್ಯಕ್ಷ ಭ್ಯಾಗ್ಯಶ್ರೀ ರಜಪೂತ ಮುಂತಾದವರು ಇದ್ದರು.