ಶಿಕ್ಷಕಿಯರ ತರಬೇತಿ ಕೇಂದ್ರ ಉದ್ಘಾಟನೆ

ದಾವಣಗೆರೆ.ನ.೨೨;ಶ್ರೀಮತಿ ಸಾವಿತ್ರಿಬಾಯಿ ಫುಲೆ ನರ್ಸರಿ ಶಿಕ್ಷಕಿಯರ ತರಬೇತಿ ಕೇಂದ್ರ (ಎನ್.ಟಿ.ಸಿ.) ಉದ್ಘಾಟನೆದಾವಣಗೆರೆ ದಕ್ಷಿಣ ವಲಯದ ಲೋಕಿಕೆರೆ ರಸ್ತೆ, ಇಂಡಸ್ಟ್ರೀಯಲ್ ಏರಿಯಾ ಎಸ್.ಎ. ರವೀಂದ್ರನಾಥ ಬಡಾವಣೆಯಲ್ಲಿ ವಿಶ್ವ ಮಾನವ ವಿದ್ಯಾಸಂಸ್ಥೆ (ರಿ)ಯ ವತಿಯಿಂದ ಶಿವರಾಂ ಕಾರಂತ ಶಾಲೆಯಲ್ಲಿ 2020-21ನೇ ಸಾಲಿಗೆ ಶ್ರೀಮತಿ ಸಾವಿತ್ರಿಬಾಯಿ ಫುಲೆ ನರ್ಸರಿ ಶಿಕ್ಷಕಿಯರ ತರಬೆತಿ ಕೇಂದ್ರದ (ಎನ್.ಟಿ.ಸಿ) ಉದ್ಘಾಟನೆ ಮಾಡಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆ 41 ವಾರ್ಡಿನ ಸದಸ್ಯರಾಗಿರುವ ಶ್ರೀಮತಿ ಗೀತಾ ನಾಗರಾಜ್‌ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಶುಭ ಹಾರೈಸಿದರು.ತರಬೇತಿ ಕೇಂದ್ರದ ಆಡಳಿತಾಧಿಕಾರಿಗಳಾದ ಎಂ.ಆರ್.ಲಕ್ಷ್ಮಣ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತ “ಹೆಣ್ಣು ಮಕ್ಕಳು ನಿಮ್ಮ ಉದ್ಯೋಗ ನೀವೆ ರೂಪಿಸಿಕೊಳ್ಳಲು ನಿಮಗೊಂದು ಸದಾವಕಾಶ. ಈ ತರಬೇತಿ ಪಡೆದ ಅಭ್ಯರ್ಥಿಗಳು ಅಂಗನವಾಡಿ ಶಿಕ್ಷಕಿ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಗೆ ನೇಮಕವಾಗುವ ಅವಕಾಶವಿದೆ ಎಂದು ತರಬೇತಿದಾರರಾದ ಶಿಬಿರಾರ್ಥಿಗಳಿಗೆ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉತ್ತರ ವಲಯ ಭಾ.ಜ.ಪ. ಉಪಾಧ್ಯಕ್ಷರಾದ ಶ್ರೀಮತಿ ಸೀಮಾ ಸತೀಶ್‌ರವರು ಮಾತನಾಡುತ್ತ ಈ ತರಬೇತಿ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಲು, ಸ್ವಂತ ಶಾಲೆಗಳನ್ನು ಪ್ರಾರಂಭಿಸಲು ತಮ್ಮ ಮಕ್ಕಳಿಗೆ ಉತ್ತಮ ಬೋಧನೆ ನೀಡಲು ಸಹಕಾರಿಯಾಗುತ್ತದೆ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು. ಈ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ  ಕೆ. ಮಲ್ಲಪ್ಪನವರು ವಹಿಸಿದ್ದರು. ಇವರು 18 ರಿಂದ 30 ವರ್ಷದೊಳಗಿನ ಮಹಿಳೆಯರು ಈ ತರಬೇತಿಯನ್ನು ಪಡೆದು ಸ್ವಂತ ಉದ್ಯೋಗವನ್ನು ಸೃಷ್ಠಿಸಿಕೊಳ್ಳಲು ಒಳ್ಳೆಯ ಅವಕಾಶವಿದೆ ಎಂದು ತಿಳಿಸಿದರು. ಶಿಕ್ಷಕಿ ಶ್ರೀಮತಿ ಜ್ಯೋತಿಯವರು ಪ್ರಾರ್ಥನೆ ಮಾಡಿದರು. ಮುಖ್ಯ ಶಿಕ್ಷಕರಾದ  ಎಂ.ಎಸ್.ಕೃಷ್ಣಪ್ಪ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ರೂಪಾ ವಂದಿಸಿದರು. ಕಾರ್ಯಕ್ರಮದಲ್ಲಿ  ನಾಗರಾಜ,  ಸತೀಶ್ ಶಿಬಿರಾರ್ಥಿಗಳಾದ ಪಾರ್ವತಮ್ಮ, ಮೋನಿಕಾ, ತೇಜ, ರತ್ನಮ, ಜ್ಯೋಗಿ, ಅರ್ಪಿತಾ, ತೇಜಸ್ವಿನಿ, ಎಲ್.ಐ.ಸಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.