ಶಿಕ್ಷಕರ ಸಮಸ್ಯೆ ಬಗೆ ಹರಿಸಲು ಮನವಿ

ಮಾಲೂರು.ಜ೨೧:ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆ ಹರಿಸಿ ಕೊಡುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಕಲಾ ಅವರಿಗೆ ಮನವಿ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಯ್ಯ ಮಾತನಾಡಿ, ಹೋಬಳಿವಾರು ಗುರುಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಗಳಿಕೆ ರಜೆಗಳ ವಿವರಗಳನ್ನು ಸೇವಾ ಪ್ರಸ್ತಕ ಹಾಗೂ ಹೆಚ್.ಆರ್.ಎಂ.ಎಸ್, ತಂತ್ರಾಂಶದಲ್ಲಿ ಹೊಂದಾಣಿಕೆ ಮಾಡುವುದು, ಪ್ರತಿ ಶಿಕ್ಷಕರಿಗೆ ಸೇವಾ ಪ್ರಸ್ತಕದ ನಕಲು ಪ್ರತಿಗಳನ್ನು ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಕೆ.ಜಿ.ಐ.ಡಿ. ಸಂಖ್ಯೆಗಳು, ಆರ್.ಎಂ.ಎಸ್ ತಂತ್ರಾಂಶದಲ್ಲಿ ತಪ್ಪಾಗಿದ್ದು, ಕೂಡಲೇ ಸರಿಪಡಿಸುವುದು. ೨೦೨೩-೨೪ನೇ ಸಾಲಿನ ತೆರಿಗೆ ಸಲುವಾಗಿ ಶಿಕ್ಷಕರ ವಾರ್ಷಿಕ ವೇತನ ಹಾಗೂ ಶಿಕ್ಷಕರಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಮುಂಗಡ ಹಣ ನೀಡಬೇಕು, ಕಛೇರಿ ಸಿಬ್ಬಂದಿಯೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಯನ್ನು ಶೀಘ್ರವಾಗಿ ಕರೆಯುವುದು. ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ಲುಗಳನ್ನು ವಿಲೇವಾರಿ ಮಾಡಬೇಕು. ಶಿಕ್ಷಕರ ಕೆ.ಜಿ.ಇ.ಡಿ./ಜಿ.ಪಿ.ಎಫ್, ಸಾಲದ ಅರ್ಜಿಗಳನ್ನು ತಮ್ಮ ಕಛೇರಿಯ ಲಾಗಿನ್‌ನಲ್ಲಿ ಶೀಘ್ರವಾಗಿ ವಿಲೇವಾರಿ ಮಾಡಿ ಶಿಕ್ಷಕರಿಗೆ ಅನುಕೂಲ ಕಲ್ಪಿಸುವಂತೆ ಮನವಿ ಸಲ್ಲಿಸಿದರು.
ಸಂಘದ ಪ್ರದಾನ ಕಾರ್ಯದರ್ಶಿ ಪಿ.ರಮೇಶ್, ಖಜಾಂಚಿ ಚಿಕ್ಕ ವೆಂಕಟೇಶ್, ಭಗತ್ ಸಿಂಗ್ ಹಾಜರಿದ್ದರು.