ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ


ಬೈಲಹೊಂಗಲ,ಜೂ.5: ಬೈಲಹೊಂಗಲ ಹಾಗೂ ಚನ್ನಮ್ಮ ಕಿತ್ತೂರು ತಾಲೂಕಿನ ಎಲ್ಲ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾನು ಅವರ ಬೇಕು ಬೇಡಗಳ ಬಗ್ಗೆ ಚನ್ನಾಗಿ ಅರಿತಿದ್ದೇನೆ ಹೀಗಾಗಿ ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಚನ್ನಮ್ಮ ಕಿತ್ತೂರು ನೂತನ ಶಾಸಕ ಬಾಬಾಸಾಹೇಬ ಪಾಟೀಲ ಭರವಸೆ ನೀಡಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕು ಎನ್.ಪಿ.ಎಸ್.ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಸ್.ಡಿ.ಗಂಗನ್ನವರ ಶಿಕ್ಷಕರು ಬಹಳ ದಿನಗಳಿಂದ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು. ಬೈಲಹೊಂಗಲ ಬಿಇಓ ಕಛೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ತುರ್ತು ಕೆಲಸಗಳೂ ಕೂಡ ಆಗುತ್ತಿಲ್ಲ ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಹೊಸ ಸಿಬ್ಬಂದಿ ನೇಮಕಗೊಳಿಸಲು ಪ್ರಯತ್ನಿಸಬೇಕು. ಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಅನುದಾನ ಕೊಡಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ತಾಲೂಕು ಅಧ್ಯಕ್ಷ ಇಸ್ಮಾಯಿಲ ತಿಗಡಿ, ಉಪಾಧ್ಯಕ್ಷೆ ಹೇಮಾ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಅರ್ಜುನ ಕೋಣಿನನವರ, ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ಭಜಂತ್ರಿ, ಗೌರವ ಅಧ್ಯಕ್ಷ ಬಿ.ವಿ.ಬಾನಿ, ಅಂಬರಶೆಟ್ಟಿ, ಶಿಕ್ಷಣ ಸಂಯೋಜಕ ಅಮೀರ್‍ಅಹ್ಮದ ನರಸನ್ನವರ, ದಾಸನಕೊಪ್ಪ, ಎಸ್ ಎಸ್ ಪಾಟೀಲ್, ಬಸನಗೌಡ ತಿಗಡಿ, ಗುರುರಾಜ ಬೋಳನ್ನವರ, ರಾಜು ರುದ್ರನಾಯ್ಕರ, ರಾಮಣ್ಣ ತೋರಣಗಟ್ಟಿ ವಿಜಯ ಹುಣಶೀಕಟ್ಟಿ, ಪುಂಡಲೀಕ ನಿಕಮ್ಮನವರ, ವೀರೇಶ ಚರಂತಿಮಠ, ವಿಠ್ಠಲ ಹುಣಶೀಕಟ್ಟಿ ಹರೀಶ ವಕ್ಕುಂದ, ಎಂ.ಜಿ.ನದಾಫ್, ಜಗದೀಶ್ ಸಂಗಪ್ಪನವರ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಸಂದೀಪ ಕುಲಕರ್ಣಿ ನಿರೂಪಿಸಿದರು. ಅರ್ಜುನ ಕೋಣಿನವರ ವಂದಿಸಿದರು.