ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುವೆ – ನಮೋಶಿ

ಸಿರುಗುಪ್ಪ,ನ.21- ನಗರದ ಅಭಯಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದವತಿಯಿಂದ ಈಶಾನ್ಯ ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಅವರನ್ನು ಅಧ್ಯಕ್ಷ ದಮ್ಮೂರು ಮಲ್ಲಿಕಾರ್ಜುನ ಅವರು ಸನ್ಮಾನಿಸಿದರು.
ನಂತರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಮಾತನಾಡಿ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕಂಡು ಬರುವ ಶಿಕ್ಷಕರ ಹಾಗೂ ಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಳಗನ್ನು ಬಗೆಹರಿಸಿ ಕಾರ್ಯರೂಪಕ್ಕೆ ತರಲಾಗುವುದು, ಶಿಕ್ಷಕರ ದೂರುಗಳಿಗೆ ಸ್ಪಂದಿಸಲಾಗುವುದು, ಶಿಕ್ಷಣ ಇಲಾಖೆಯನ್ನು ಬಲಪಡಿಸಲು ರಾಜ್ಯ ಸರ್ಕಾರವು ಸಿದ್ದವಾಗಿದೆ, ಅತಿಥಿ ಉಪನ್ಯಾಸಕ ವೇತವನ್ನು ಬಿಡುಗಡೆಗೊಳಿಸಲು ಮುಖ್ಯಮಂತ್ರಿಯವರೊಂದಿಗೆ ಸಮಲೋಚನೆ ನಡೆಸಿ ಶೀಘ್ರ ಬಿಡುಗಡೆಗೊಳಿಸಲಾಗುವುದು, ದೈಹಿಕ, ಚಿತ್ರಕಲಾ, ಸಂಗೀತ ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಮಂತ್ರಿಯವರೊಂದಿಗೆ ಚರ್ಚಿಸಲಾಗುವುದು, ನಮ್ಮ ಕ್ಷೇತ್ರಕ್ಕೆ ಅಗತ್ಯವಾದ ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕ ಸಂಘದ ತಾ.ಅಧ್ಯಕ್ಷ ರುದ್ರಪ್ಪ ಮಾತನಾಡಿ ರಾಜ್ಯದಲ್ಲಿ 14350 ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದು, ಕೋವಿಡ್-19ನಿಂದಾಗಿ 32 ಅತಿಥಿ ಉಪನ್ಯಾಸಕರು ಮರಣಹೊಂದಿದ್ದಾರೆ, ಇವರಿಗೆ ಸರ್ಕಾರದಿಂದ ಸೇವಾ ಭದ್ರತೆಯನ್ನು ನೀಡಬೇಕು, ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆ ರಜೆಯನ್ನು ನೀಡಬೇಕು, ಮಾಸಿಕ ವೇತನವನ್ನು 25ಸಾವಿರಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ತಾಲೂಕು ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ದಮ್ಮೂರು ಮಲ್ಲಿಕಾರ್ಜುನ ಮಾತನಾಡಿ ಕಲ್ಯಾಣ ಕರ್ನಾಟಕ ವಿಭಾಗದ ಅನುದಾನ ರಹಿತ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಸರ್ಕಾರದಿಂದ ಪ್ರೋತ್ಸಹ ಅನುದಾನವನ್ನು ನೀಡಬೇಕು, 6 ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಬೇಕು, 371ಜೆಯಲ್ಲಿ ಕಾಯ್ದಿಟ್ಟ ಅನುದಾನವನ್ನು ಬಳಸಿಕೊಂಡು ಅಭಿವೃದ್ದಿಯನ್ನು ಮಾಡಬೇಕೆಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳದ ಬಿ.ಇ.ದೊಡ್ಡಯ್ಯ, ಎಲೆಗಾರ ವೆಂಕಟೇಶ, ಚಾಗಿಸುಬ್ಬಯ್ಯ, ಬಸವಲಿಂಗಪ್ಪ, ಸುರೇಶ, ರುದ್ರಪ್ಪ, ಬಸವರಾಜ, ನರಸಿಂಹ, ಗೋಪಾಲ, ಸುಧಾಕರ, ಗುರುಕಾಮ್, ಪಾರ್ವತೇಶ ಇದ್ದರು.