ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕಾರ್ಯವಾಗಬೇಕು: ಸುಂಟೆ

ಭಾಲ್ಕಿ: ಆ.7:ಸಂಘಟನೆಯ ವತಿಯಿಂದ ಶಿಕ್ಷಕರಿಗೆ ಸದಾ ಸ್ಪಂದಿಸುವ ಕಾರ್ಯವಾಗಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಸುಂಟೆ ಹೇಳಿದರು.
ಪಟ್ಟಣದ ಬಿಆರ್‍ಸಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸಭೆ ಮತ್ತು ನಿವೃತ್ತ ಹಾಗು ವರ್ಗವಾದ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘ ವಿರುವುದು ಶಿಕ್ಷಕರ ಶ್ರೇಯಕ್ಕಾಗಿ, ಸರ್ಕಾರದ ಎಲ್ಲಾ ಕ್ಷೇತ್ರಗಳಲ್ಲಿಯೂ, ಶಿಕ್ಷಕರು ತುಂಬಾ ಒತ್ತಡದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಮಕ್ಕಳಿಗೆ ಪಾಠ ಹೇಳುವುದರೊಂದಿಗೆ ಚುನಾವಣೆ, ಗಣತಿ ಸೇರಿದಂತೆ ಇತರೆ ಕಾರ್ಯಗಳಲ್ಲಿಯೂ ಸರ್ಕಾರಿ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವಲ್ಲಿ ಸಮಸ್ಯ ಕಂಡುಬರುತ್ತಿದೆ ಎಂದು ಹೇಳಿದರು.
ದೈಹಿಕ ಶಿಕ್ಷಣಾಧಿಕಾರಿ ರೋಹಿದಾಸ ರಾಠೋಡ ಮಾತನಾಡಿ, ಶಿಕ್ಷಕರ ಸಂಘದವರು ಪ್ರಯತ್ನ ಪಟ್ಟರೆ ಉತ್ತಮ ಶಿಕ್ಷಕರ ನಮ್ಮ ತಾಲೂಕಿನಲ್ಲಿಯೇ ಉಳಿಸಿಕೊಳ್ಳಬಹುದಿತ್ತು. ಮಕ್ಕಳ ಹಾಜರಾತಿ ಕಡಿಮೆ ಇರುವುದರಿಂದ ಇಲ್ಲಿಯ ಹಲವಾರು ದೈಹಿಕ ಶಿಕ್ಷಕರು ಬೇರೆ ತಾಲೂಕಿಗೆ ವರ್ಗವಾಗಿ ಹೋಗಿದ್ದಾರೆ. ಇದು ನಮಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದೇವೇಳೆ ನಿವೃತ್ತ ಶಿಕ್ಷಕರು, ವರ್ಗವಾಗಿ ಬೇರೆ ತಾಲೂಕಿಗೆ ತೆರಳುವ ಶಿಕ್ಷಕರಿಗೆ ಮತ್ತು ಸಂಘದಲ್ಲಿ ನಾಮನಿದೇರ್ಶಿತ ಸದಸ್ಯರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇಸಿಓ ಸಹದೇವ.ಜಿ, ನಿವೃತ್ತ ಶಿಕ್ಷಕ ಸುಭಾಷ ಹುಲಸೂರೆ, ವಸಂತ ಹುಣಸನಾಳೆ, ನಿರಂಜಪ್ಪ ಪಾತ್ರೆ ಸಂಘದ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಗಣಪತಿ ಭಕ್ತಾ, ಹಣಮಂತ ಕಾರಾಮುಂಗೆ, ಚಂದ್ರಕಾಂತ ತಳವಾಡೆ, ಎಸ್.ನೇಳಗೆ, ಸುನಿತಾ ಮಮ್ಮಾ, ಮೈತ್ರಾದೇವಿ ಚಂದ್ರಕಾಂತ, ಕಲ್ಯಾಣರಾವ ಕುಂಬಾರಗೇರೆ, ಸಂತೋಷ ವಾಡೆ, ಬಸವರಾಜ ಮಡಿವಾಳ, ಐಜಿಕ ಬಂಗಾರೆ, ಸಂಜೀವ ಸೋನಕಾಂಬಳೆ ಉಪಸ್ಥಿತರಿದ್ದರು. ಅಶೋಕ ಕುಂಬಾರ ಸ್ವಾಗತಿಸಿದರು. ಚಂದ್ರಕಾಂತ.ಟಿ ನಿರೂಪಿಸಿದರು. ಬಸವರಾಜ.ಎಮ್ ವಂದಿಸಿದರು.