ಶಿಕ್ಷಕರ ಸತತ ಪ್ರಯತ್ನದಿಂದ ಮಕ್ಕಳ ಪಗ್ರತಿ ಸಾಧ್ಯ:ಬಡಿಗೇರ

ಸೈದಾಪುರ:ಆ.6:ಶಿಕ್ಷಕರ ಸತತ ಪ್ರತಯ್ನದಿಂದ ಮಕ್ಕಳ ಪಗ್ರತಿ ಸಾಧ್ಯ. ಇದಕ್ಕಾಗಿ ಯೋಜನೆ ರೂಪಿಸಿಕೊಂಡು ಪ್ರಯತ್ನ ಮಾಡಬೇಕು ಎಂದು ಡಯಟ್ ಪ್ರಾಂಶುಪಾಲ ಕೆ.ಡಿ.ಬಡಿಗೇರ ಅಭಿಪ್ರಾಯಪಟ್ಟರು.

ಇಲ್ಲಿನ ಸೈದಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ಕಲಿಕಾ ಚೇತರಿಕೆ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಣೆ ಮಾಡಲಾಗಿದೆ. ಇದು ನಮ್ಮ ಜವಬ್ದಾರಿಯನ್ನು ಹೆಚ್ಚಾಗುವಂತೆ ಮಾಡಿದೆ ಎಂದರು. ವಿನೂತನ ಕಲಿಕಾ ಪದ್ಧತಿಗಳನ್ನು ಬಳಕೆ ಮಾಡಿಕೊಂಡು ಮಕ್ಕಳ ಮಟ್ಟವನ್ನು ಪರಿಗಣಿಸಿ ಬೋದನೆ ಮಾಡಬೇಕು. ಕಲಿಕೆ ಆಸಕ್ತಿ, ಸಂತಸದಾಯಕವಾಗಿರಬೇಕು. ಇದರಿಂದ ಹಾಜರಾತಿ ಸೇರಿದಂತೆ ದಾಖಲಾತಿಯ ಪ್ರಮಾಣ ಹೆಚ್ಚಾಗಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಕ್ರಿಯಾ ಯೋಜನೆ ರೂಪಿಸಿಕೊಂಡು ಸಮೂದಾಯದ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಸಲಹೆ ನೀಡಿದರು.

ಬಿ.ಆರ್.ಸಿ ಮಲ್ಲಿಕಾರ್ಜುನ ಪೂಜಾರಿ, ಶಾಲಾ ಮುಖ್ಯಗುರು ಈರಣ್ಣ ಯರಗಟ್ಟಿ, ಜಾಫರ ಶರೀಫ್, ಎಪಿಎಸ್ ಸಂಸ್ಥೆಯ ಲಕ್ಷ್ಮಣ ಪಾಟೀಲ, ಬಿಆರ್‍ಪಿ ಬಸವರಾಜ ಮನಗನಾಳ, ಸಿಆರ್‍ಪಿಗಳು, ಶಿಕ್ಷಕರು ಸೇರಿದಂತೆ ಇತರರಿದ್ದರು.