ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಟಿ.ಹೆಚ್. ಬಸವರಾಜಪ್ಪಗೆ ಸನ್ಮಾನ

ಚಿತ್ರದುರ್ಗ.ಜು.17: ತಾಲ್ಲೂಕಿ ಸಹ ಶಿಕ್ಷಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೊಳಹಾಳ್ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಟಿ.ಹೆಚ್. ಬಸವರಾಜಪ್ಪ ಅವರಿಗೆ ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಚಿದಾನಂದಪ್ಪ ಆಗಮಿಸಿದ್ದು, ಪ್ರೌಢಶಾಲಾ ಮುಖ್ಯಶಿಕ್ಷಕ ಹೆಚ್.ಆರ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸಿಂಧುಮತಿ, ಎಂ.ಎಸ್. ಸುನೀಲ್ ಕುಮಾರ್, ಹಾಲಸ್ವಾಮಿ, ಶಿವಮ್ಮ, ಖಂಡ್ಯಾನಾಯ್ಕ, ಟಿ. ಮಂಜುಳ ಹಾಗೂ ಸಿಬ್ಬಂದಿಗಳಾದ ತಿಮ್ಮೇಶ್, ರುದ್ರೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.