ಮಾನ್ವಿ,ಜೂ.೦೧-
ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಜಿ ಹಂಪಯ್ಯ ನಾಯಕ ಅವರಿಗೆ ಮಾನವಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅಭಿಮಾನ ಪೂರ್ವಕವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿ ಗೌರವಿಸಲಾಯಿತು ಎಂದು ಅಧ್ಯಕ್ಷ ಸಂಗಮೇಶ ಮುಧೋಳ ಹೇಳಿದರು.
ನಂತರ ಮಾತಾನಾಡುವ ಅವರು ಶಿಕ್ಷಕರ ವರ್ಗಾವಣೆ, ಬಡ್ತಿ,ನೇಮಕಾತಿ, ಸಮಸ್ಯೆಗಳ ಬಗ್ಗೆ, ಶಾಲೆಗಳ ಬಗ್ಗೆ ಹಾಗೂ ಮುಖ್ಯವಾಗಿ ೨೦೦೬ ರ ನಂತರ ನೇಮಕವಾದ ಎಲ್ಲಾ ನೌಕರರಿಗೆ ಮತ್ತೆ ಹಳೆ ಪಿಂಚಣಿ ಯೋಜನೆ ಮರುಜಾರಿಗಾಗಿ ಶಿಕ್ಷಣ ಸಚಿವರ ಹಾಗೂ ಮುಖ್ಯಮಂತ್ರಿ ಅವರುಗಳ ಬಳಿ ಮಾತಾಡಿ ನಮ್ಮ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ವಿನಂತಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಸರಕಾರ ನಿಮ್ಮ ಪರವಾಗಿ ಇದೆ ಹಾಗೂ ಸಕಾಲದಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ನಾನು ಕೂಡ ಮಾತನಾಡುವ ಭರವಸೆ ನೀಡಿದರು.
ಈ ಒಂದು ಸಂದರ್ಭದಲ್ಲಿ ಶಿಕ್ಷಕರ ಸಂಘದ ಕಾರ್ಯದರ್ಶಿ ಸುಪ್ರೀತ್, ಗೌರವ ಅಧ್ಯಕ್ಷ ಶಿವಾಗೆನಿ ನಾಯಕ, ಉಪಾಧ್ಯಕ್ಷ ಕುಮಾರ,ಪಾಟೀಲ್ ಡಿ ಸಿ, ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.