ಶಿಕ್ಷಕರ ವೃತ್ತಿ ಪವಿತ್ರ ಸ್ಥಾನ, ಬೆಲೆ ಕಟ್ಟಲಾಗದು – ಶಾಸಕ ಬಾದರ್ಲಿ

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ೧೩೬ ನೇ ಜನ್ಮದಿನೋತ್ಸವ
ಸಿಂಧನೂರು.ಸೆ.೨೬ ಸಮಾಜದಲ್ಲಿ ಅತಿ ಜವಾಬ್ದಾರಿ ಯುತ ಸ್ಥಾನ ಎಂದರೆ ಅದು ಶಿಕ್ಷಕರದು ಅದು ಪವಿತ್ರ ಸ್ಥಾನ, ಬೆಲೆ ಕಟ್ಟಲಾಗದು ಶಾಲೆಯಲ್ಲಿನ ಪ್ರತಿ ಮಕ್ಕಳನ್ನು ನಿಮ್ಮ ಮಕ್ಕಳಂತೆ ಕಾಣಿ ಎಂದು ಶಿಕ್ಷಕರಿಗೆ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸತ್ಯಗಾರ್ಡನ್‌ನಲ್ಲಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರ ೧೩೬ ನೇ ಜನ್ಮದಿನೋತ್ಸವದ ಭಾಗವಾಗಿ ೨೦೨೩ -೨೪ ನೇ ಸಾಲಿನ ಸಿಂಧನೂರು ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಗಾರದಲ್ಲಿ ಉದ್ಘಾಟನೆ ನೇರವೆರಿಸಿ ಮಾತನಾಡಿದ ಶಾಸಕರು ಸಮಾಜದಲ್ಲಿನ ಎಲ್ಲಾ ಬದಲಾವಣೆಗಳಿಗೆ, ಅಭಿವೃದ್ಧಿಗೆ ಕಾರಣಿಕರ್ತರು ಎಂದರೆ ಶಿಕ್ಷಕರು. ಅತಂಹ ಶಿಕ್ಷಕರಿಗೆ ತರಬೇತಿ ನೀಡುವಂತಹ ಅವಶ್ಯಕತೆ ಇದೇನಾ ? ಎಂದು ಶಾಸಕರು ಪ್ರಶ್ನಿಸಿದರು. ಶಿಕ್ಷಕರ ಕ್ರಾಂತಿಯನ್ನು ಹೆಚ್ಚುವ ಕೆಲಸ ನಿಮ್ಮಿಂದಾಗಬೇಕು. ತಾಲೂಕಿನಲ್ಲಿನ ಶಾಲೆಗಳಿಗೆ ೧೬ ಕೋಟಿ ಹಣ ವನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಿಸಲಿಡಲಾಗಿದೆ. ಗುಲ್ಬರ್ಗಾ ವಿಭಾಗದಲ್ಲಿ ೯೬೦೦ ಶಿಕ್ಷಕರು ಈಗಾಗಲೇ ವರ್ಗಾವಣೆ ಆಗಿದ್ದಾರೆ. ಅದನ್ನು ಸರಿದೂಗಿಸಲು ಕೆಕೆಆರ್‌ಡಿಬಿ ಅನುದಾನಡಿಯಲ್ಲಿ ಅತಿಥಿ ಶಿಕ್ಷಕರನ್ನು ನೇಮಕಗೊಳಿಸಿ ಮಕ್ಕಳಿಗೆ ಕಲಿಕೆಯ ಕೊರತೆಯಾಗದಂತೆ ನೋಡಿಕೊಳ್ಳುತ್ತೆವೆಂದರು.
ಬಿಇಒ ಸೋಮಶೇಖರಗೌಡ ಪ್ರಾಸ್ತಾವಿಕ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಇಡೀ ಪ್ರಪಂಚಕ್ಕೆ ವಿಶ್ವ ವಿದ್ಯಾಲಯಗಳ ಕೊಡುಗೆ ನಮ್ಮ ದೇಶದ್ದಾಗಿದೆ. ಇಂದಿನ ತಂತ್ರಜ್ಞಾನ ವನ್ನು ಈ ಮೊದಲೇ ಪೂರ್ವಿಕರು ಬಳಸಿದ್ದಾರೆ. ಆದರೆ, ಅದನ್ನು ದಾಖಲೆಗಳಲ್ಲಿ ಸಂಗ್ರಹಿಸಲಾಗಿಲ್ಲ. ಯಾವುದೇ ದೇಶದ ಅಭಿವೃದ್ಧಿಯನ್ನು ಅಲ್ಲಿನ ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಗಮನಿಸಿ ಅಳೆಯಲಾಗುತ್ತದೆಂದರು ಮತ್ತು ತತ್ವಜ್ಞಾನಿ, ಮಹಾ ಮೇಧಾವಿ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮ ದಿನವನ್ನು ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುವ ವೃತ್ತಿ ಅಂದರೆ ಅದು ಶಿಕ್ಷಕರ ವೃತ್ತಿ ಅದಕ್ಕಾಗಿ ತಮ್ಮ ಜನ್ಮ ದಿನವನ್ನು ‘ಶಿಕ್ಷಕರ ದಿನಾಚರಣೆ’ಯಾಗಿ ಆಚರಣೆ ಮಾಡುವಂತೆ ಕರೆ ನೀಡಿದರು. ಆ ಭಾಗವಾಗಿ ಇಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೆವೆಂದರು.’ ತಾಲೂಕಿನಲ್ಲಿ ದಾಖಲೆ ಯಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅತ್ಯುತ್ತಮ ಫಲಿತಾಂಶ ಕೊಡುಗೆ ನೀಡುತ್ತೆವೆಂದು’ ತಾಲೂಕಿನ ಎಲ್ಲಾ ಶಿಕ್ಷಕರು ಪ್ರತಿಜ್ಞೆ ಮಾಡಿ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಎಂ.ದೊಡ್ಡ ಬಸವರಾಜ, ಬಿ.ಇ.ಒ ಸೋಮಶೇಖರಗೌಡ, ಚಂದ್ರಶೇಖರ ಹಿರೇಮಠ, ಸಾಬಣ್ಣ ವಗ್ಗರ್, ಬಸಲಿಂಗಪ್ಪ, ಮಲ್ಲಪ್ಪ ಕೆ , ಪಿ.ಲತಾಂಜಲಿ, ಕಳಕಪ್ಪ ಗಡಾದ, ವಿಠಲ್, ಅಮರಯ್ಯ ಪತ್ರಿಮಠ, ವಿರೇಶ ಅಗ್ನಿ, ರವೀಂದ್ರಗೌಡ, ಮೈನ್ ಪಾಷಾ, ಲಿಂಗನಗೌಡ, ಸಂಗಯ್ಯ ಸ್ವಾಮಿ, ಬಸವರಾಜ ಅಂಗಡಿ, ಮಂಜುನಾಥ, ಮಲ್ಲನಗೌಡ, ಭರತ ಕುಮಾರ, ಬಾಲಕೃಷ್ಣ, ಜಗದೀಶ, ಬಸವರಾಜ, ಚಂದ್ರಶೇಖರ ಕಗ್ಗೊಡ, ನಾಗರಾಜ ಹೇರೂರು, ಪರಸಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತಾಲೂಕ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾದ ಹಾಗೂ ವಯೋ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.