ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ: ಅಭಿನವಶ್ರೀ

ಬಸವಕಲ್ಯಾಣ,ಜೂ.24-ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯ, ಯುವ ಪೀಳಿಗೆಯನ್ನು ಸುಸಂಸ್ಕøತರನ್ನಾಗಿ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಗವಿಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಯಾತ್ರಾ ನಿವಾಸದಲ್ಲಿ ಆಯೋಜಿಸಿದ ವಯೋನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಜ್ಞಾನ ಮತ್ತು ಅನುಭವವನ್ನು ನಿವೃತ್ತಿಯ ನಂತರವೂ ಸಮಾಜಕ್ಕೆ ನೀಡಿ ಸಮಾಜದ ಋಣ ತೀರಿಸಬೇಕು. ಶಿಕ್ಷಣ ಜೊತೆಗೆ ಸಂಸ್ಕಾರ ಬಹಳ ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾವಿತ್ರಿಬಾಯಿ ಪುಲೆ ಶಿಕ್ಷಣ ಸಂಘದ ಅಧ್ಯಕ್ಷೆ ಶ್ರೀದೇವಿ ಚಿರಡೆ ಅವರು ಮಾತನಾಡುತ್ತ, ಜ್ಞಾನ ಮತ್ತು ಕೌಶಲ್ಯ ಒಂದೇ. ವಿದ್ಯಾರ್ಥಿಗಳಲ್ಲಿ ಉತ್ತಮ ಶಿಕ್ಷಣ ಜೊತೆಗೆ ಶಿಸ್ತು ಓದುವ ಹವ್ಯಾಸವನ್ನು ಮೂಡಿಸುವಲ್ಲಿ ಇಂದುಮತಿ ಪಿ.ಸಿಗೇದಾರ ಅವರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಅತಿಥಿಯಾಗಿ ಉಪಸ್ಥಿತರಿದ್ದ ನಾಗಪ್ಪ ನಿಣ್ಣೆ ಶಿಕ್ಷಕರು ಮಾತನಾಡುತ್ತ, ಮಕ್ಕಳಲ್ಲಿ ಸಂಸ್ಕಾರಗಳನ್ನು ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿ ಉಜ್ವಲ ಭವಿಷ್ಯ ಕಂಡುಕೊಂಡು ಸಮಾಜದಲ್ಲಿ ಮಕ್ಕಳಿಗೆ ಉನ್ನತ ಹುದ್ದೆಗೆ ಪ್ರೇರಣೆಯೇ ಶಿಕ್ಷಕರು ಹಿಗಾಗಿ ಶಿಕ್ಷಕರ ಸೇವೆ ಅಮೂಲ್ಯವಾದದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಇಂದುಮತಿ ಪಿ.ಸಿಗೇದಾರ ಅವರು ಮಾತನಾಡುತ್ತ, ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ವಿದಾಯ ಸಹಜ ವರ್ಗಾವಣೆ ಇರಬಹುದು ನಿವೃತ್ತಿ ಇರಬಹುದು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಉನ್ನತ ತರಗತಿ ಕಲಿಸಲು ಹೋಗುವ ಸಮಯ ಇರಬಹುದು ಈ ಎಲ್ಲಾ ಕ್ಷಣಗಳು ನಮ್ಮ ಜೀವನದಲ್ಲಿ ಮರೆಯದೆ ನೆನಪು ಉಳಿಯುತ್ತವೆ ಎಂದು ಭಾವುಕರಾಗಿ ನುಡಿದರು. ಕ.ಸ.ಪ.ಘಟಕ ಅಧ್ಯಕ್ಷರಾದ ನಾಗಮ್ಮ ಭೂರೆ, ಶಿವರಾಜ್ ಸ್ವಾಮಿ ಹುಲಸೂರು, ನಿವೃತ್ತ ಶಿಕ್ಷಕ ದೇವೇಂದ್ರ ದೇವಕರ್, ಜಯಶ್ರೀ ಪಾಟೀಲ್, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ 12ನೇಯ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ಸಾಹಿತ್ಯ ಚೇತನ ಪ್ರಶಸ್ತಿಗೆ ಭಾಜನರಾದ ಅಭಿನವ ಶ್ರೀಗಳವರಿಗೆ ಅಭಿನಂದನಾ ಪೂರ್ವಕ ಸನ್ಮಾನ ಮಾಡಲಾಯಿತು.ವಿಶೇಷವಾಗಿ ವಯೋ ನಿವೃತ್ತಿ ಹೊಂದಿರುವ ಇಂದುಮತಿ ಸೀಗೆದಾರ್ ಅವರಿಗೆ ಅವರ ಶಿಕ್ಷಕರ ಸ್ನೇಹಿತರ ವತಿಯಿಂದ ವಿಶೇಷ ಸನ್ಮಾನ ಜರುಗಿದವು,ಲತಾ ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು,ಈರಯ್ಯಾ ಸ್ವಾಮಿ ನಿರೂಪಿಸಿದರು.ಈ ಕಾರ್ಯಕ್ರಮದಲ್ಲಿ ರಾಕೇಶ ಪುರವಂತ,ಪ್ರಮೋದ, ಜಯಶ್ರೀ ಪಾಟೀಲ್, ರಾಮಲಿಂಗ ಯಂಗಾ ಉದಗೀರ, ಜೈಶಂಕರ ಘಾಳೆ,ಊಮಾದೇವಿ, ಶಾಂತವೀರ ಪೂಜಾರಿ,ಶಾಂತಕುಮಾರ ಬಿರಾದಾರ,ವೆಂಕಟ ಕುಮಾರ,ವೀರಶೇಟ್ಟಿ ಎಂ. ಪಾಟೀಲ್,ಡಾ.ಬಸವರಾಜ ಸ್ವಾಮಿ,ಶಾಂತವೀರ ಕಾಪಾಡೆ,ಲೊಕೇಶ ಮಠಪತಿ, ಶರಣಯ್ಯ ಮಠಪತಿ ಇನ್ನಿತರರು ಉಪಸ್ಥಿತರಿದ್ದರು.