ಶಿಕ್ಷಕರ ವರ್ಗಾವಣೆ ಸಮಸ್ಯೆ ನಿವಾರಿಸಲು ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ನ.೨೯- ಶಿಕ್ಷಕ ವರ್ಗಾವಣೆ ಪ್ರಕ್ರಿಯೆಯಲ್ಲಿ ತೊಂದರೆಗಳು ಉಂಟಾಗುವ ಸಮಸ್ಯೆಗಳನ್ನು ಕೂಡಲೇ ನಿವಾರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾದ್ಯಕ್ಷ ಚಂದ್ರಶೇಖರ್ ರೆಡ್ಡಿ ಮಾತನಾಡಿ,
ಸೋಮವಾರದಿಂದ ಕೌನ್ಸಿಲಿಂಗ್ ನಡೆಯಲಿದ್ದು ಆದರೆ ತಾಲೂಕಿನಲ್ಲಿ ಶೇ.೨೫ ಕ್ಕಿಂತ ಕಡಿಮೆ ಇದ್ದರೆ ಮಾತ್ರ ಕೌನ್ಸಿಲಿಂಗ್ ನಡೆಯುತ್ತದೆ ಇಲ್ಲವಾದರೆ ನಡೆಯುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದು,ಈ ವಿಷಯದ ಕುರಿತು ಸುಮಾರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಒಬ್ಬ ಶಿಕ್ಷಕ ಕಳೆದ ೧೨ ವರ್ಷದಿಂದ ಒಂದೇ ಶಾಲೆಯಲ್ಲಿ ಬೋಧನೆ ಮಾಡುತಿದ್ದರೆ ಆದರೆ ಅವರಿಗೆ ಯಾವುದೇ ವರ್ಗಾವಣೆ ಮಾಡುತ್ತಿಲ್ಲ ಇಂದು ವರ್ಗಾವಣೆ ಕೌನ್ಸಿಲಿಂಗ್ ಇದ್ದರು ಯಾವುದೇ ಪ್ರಯೋಜನವಾಗಿಲ್ಲ ಅದರಿಂದ ಈ ಸಮಸ್ಯೆ ಬಗೆಹರಿಯುವ ವರೆಗೆ ಹೋರಾಟ ನಿಲ್ಲುವುದಿಲ್ಲವೆಂದರು.
ಈ ಸಂದರ್ಭದಲ್ಲಿ ಹನುಮಂತರೆಡ್ಡಿ,ರಾಘವೇಂದ್ರ,ಗಂಗಪ್ಪ,ವೀರುಪಕ್ಷಪ್ಪ ಗೌಡ,ಬಿ.ಗಂಗಾಧರ್,ಕೃಷ್ಣ ಜಿ,ಅಮರಯ್ಯ ಸೇರಿದಂತೆ ಇನ್ನಿತರ ಶಿಕ್ಷಕರಿದ್ದರು.