ಶಿಕ್ಷಕರ ವರ್ಗಾಣೆಗೆ ವಿರೋಧ: ಪ್ರತಿಭಟನೆ


ಬ್ಯಾಡಗಿ,ಜೂ.24: ತಾಲೂಕಿನ ಕುಮ್ಮೂರು ಗ್ರಾಮದ ಫಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರೊಬ್ಬರ ವರ್ಗಾವಣೆಯನ್ನು ವಿರೋಧಿಸಿ ಎಸ್’ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಶಾಲೆಗೆ ಬೀಗ ಜಡಿದು ಪ್ರತಿಭಟನೆಯನ್ನು ನಡೆಸಿದ ಘಟನೆ ಶುಕ್ರವಾರ ಜರುಗಿದ್ದು, ಪ್ರತಿಭಟನೆ ಶನಿವಾರಕ್ಕೂ ಮುಂದುವರೆದಿದೆ
ಕಳೆದ 15ವರ್ಷಗಳಿಂದ ಗ್ರಾಮದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಜೀವ ದಾದುಗೋಳ ಎನ್ನುವರನ್ನು ಶಿಕ್ಷಣ ಇಲಾಖೆಯ ನಿಯಮಾವಳಿ ಪ್ರಕಾರ ಹೆಚ್ಚುವರಿ ಶಿಕ್ಷಕರ ಪರಿಗಣನೆ ಮೂಲಕ ವರ್ಗಾವಣೆಯನ್ನು ಮಾಡಲಾಗಿದೆ. ಆದರೆ, ಈ ವರ್ಗಾವಣೆಯಿಂದ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಯೇ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಇದನ್ನು ಅರಿತು ವರ್ಗಾವಣೆಯನ್ನು ವಿರೋಧಿಸಿರುವ ಎಸ್’ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಶುಕ್ರವಾರ ಬೆಳಿಗ್ಗೆ ಶಾಲೆಗೆ ಬೀಗ ಜಡಿದು ಅವರ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶಾಲೆಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ
ಈ ಸಂದರ್ಭದಲ್ಲಿ ಎಸ್’ಡಿಎಂಸಿ ಉಪಾಧ್ಯಕ್ಷ ನಾಗಪ್ಪ ಅಸುಂಡಿ ಮಾತನಾಡಿ, ಶಾಲೆಯಲ್ಲಿ ಕಳೆದ 15 ವರ್ಷಗಳ ಹಿಂದೆ 60ವಿದ್ಯಾರ್ಥಿಗಳು ಇದ್ದಾಗಿನಿಂದಲೂ ಸೇವೆ ಸಲ್ಲಿಸುತ್ತಿರುವ ಚಿತ್ರಕಲಾ ಶಿಕ್ಷಕ ಸಂಜೀವ ದಾದುಗೋಳ ಅವರನ್ನು ಈಗ ಏಕಾಏಕಿ ಹೆಚ್ಚುವರಿ ಶಿಕ್ಷಕರ ಪಟ್ಟಿಯ ಮೂಲಕ ಕೌನ್ಸೆಲಿಂಗ್’ನಲ್ಲಿ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಶಾಲೆಯಲ್ಲಿ 140 ವಿದ್ಯಾರ್ಥಿಗಳು ದಾಖಲಾಗಿದ್ದು, ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದಾಗ ಇರದ ವರ್ಗಾವಣೆ ಈಗ ಯಾಕೆ ಬೇಕು ಎಂದು ತಿಳಿಸಿದರಲ್ಲದೇ, ಯಾವುದೇ ಕಾರಣಕ್ಕೂ ಅವರ ವರ್ಗಾವಣೆಯನ್ನು ಒಪ್ಪುವುದಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಅವರ ವರ್ಗಾವಣೆ ರದ್ದು ಮಾಡಬೇಕು ಎಂದು ಆಗ್ರಹಿಸಿದರು
ಅಧಿಕಾರಿಗಳು ಭೇಟಿ:
ಗ್ರಾಮದ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ರಾಜ್ಯದಲ್ಲಿ 150ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರಕಲಾ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರ್ತಿಸಿ ರಾಜ್ಯ ಸರ್ಕಾರವೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳಿಸಿದೆ. ಇದು ಕೇವಲ ಒಂದೇ ಶಾಲೆಯ ಸಮಸ್ಯೆಯಲ್ಲ. ಇದಕ್ಕೆ ಸರ್ಕಾರವೇ ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಆಯುಕ್ತರ ಗಮನಕ್ಕೆ ತರುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು. ಅಧಿಕಾರಿಗಳ ಮಾತನ್ನು ಒಪ್ಪದ ಗ್ರಾಮಸ್ಥರು ವರ್ಗಾವಣೆಯ ಆದೇಶ ರದ್ದುಗೊಳಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನೀಲಕಂಠಪ್ಪ ಫಾಸಿ, ಸುಭಾಸ ಮಣ್ಣಪ್ಪನವರ, ಮಹೇಶಗೌಡ ಪಾಟೀಲ, ವೀರಭದ್ರಗೌಡ ಪಾಟೀಲ, ಹರೀಶ ಬಾರಂಗಿ, ರವಿ ಬ್ಯಾಡಗಿ, ಹನುಮಂತ ಬನ್ನಿಹಟ್ಟಿ, ಅಶೋಕ ಹಿರೇಹಳ್ಳಿ, ನಾಗಪ್ಪ ಬೆಣಗೇರಿ, ಚನಬಸಪ್ಪ ದಾಸರ, ಮಾರುತಿ ಕಾಳಪ್ಪನವರ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಗಿನೆಲೆ ಪೆÇಲೀಸರು ಮುಂಜಾಗೃತಾ ಕ್ರಮ ವಹಿಸಿದ್ದಾರೆ.