ಶಿಕ್ಷಕರ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ವನಜಾಕ್ಷಮ್ಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.06: ತಾಲೂಕಿನ ಹರಗಿನದೋಣಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ವನಜಾಕ್ಷಮ್ಮ ನಿನ್ನೆ ದಿನ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜ್ಯ ಮಟ್ಟದ ಉತ್ತಮ‌ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.
ಇವರು ಮೂಲತಃ ಹರಪನಹಳ್ಳಿಯ ಬಾಲಕಿಯರ ಸರ್ಕಾರಿ ಪ್ರೌಡ ಶಾಲೆಯಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ್ ಅವರ ಪತ್ನಿ ಎಂ.ಸರೋಜ ಅವರ ವಿದ್ಯಾರ್ಥಿನಿಯಾಗಿದ್ದರು. ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವನಜಾಕ್ಷಮ್ಮ ಅವರಿಗೆ ಬಸವರಾಜ್  ಮತ್ತು ಸರೋಜಮ್ಮ ಅವರು ಶ್ಲಾಘಿಸಿದ್ದಾರೆ.