ಶಿಕ್ಷಕರ ಮೊಬೈಲ್‍ಗೆ ಸಂದೇಶ ನೀಡುವ ಆಪ್‍ಗೆ ಚಾಲನೆ

ಕೆ.ಆರ್.ಪೇಟೆ:ಮಾ:25: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ವಿಭಿನ್ನ ಹಾಗೂ ವಿನೂತ ನವಾದ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ತಿಳಿಸಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ತಾಲ್ಲೂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಪ್ರಾಥಮಿಕ ಶಾಲಾ ಶಿಕ್ಷಕರ ಮೂಲವೇತನ, ದಿನಭತ್ಯೆ, ಕಟಾವುಗಳು ಮುಂತಾದುವುಗಳನ್ನು ಶಿಕ್ಷಕರ ಮೊಬೈಲ್‍ಗೆ ಸಂದೇಶ ನೀಡುವ ಆಪ್‍ಗೆ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜು ಚಾಲನೆ ನೀಡಿ ಮಾತನಾಡಿದರು.
2020-2025 ನೇ ಸಾಲಿಗೆ ಶಿಕ್ಷಕರಿಂದ ಚುನಾಯಿತರಾದ ತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಪದಾಧಿಕಾರಿಗಳು ಕಛೇರಿಯ ಸಿಬ್ಬಂಧಿಗಳ ಸಹಕಾರದಿಂದ ಕಳೆದ ತಿಂಗಳಿನಲ್ಲಿ ತೆರಿಗೆಗೆ ಒಳಪಡುವ ಶಿಕ್ಷಕರಿಗಾಗಿ ಉಚಿತವಾಗಿ ನಮೂನೆ 16 ನ್ನು ಸಿದ್ದಪಡಿಸಿ ಕೊಟ್ಟಿದ್ದರು ಇದು ನೂರಾರು ಶಿಕ್ಷಕರಿಗೆ ಅನುಕೂಲವಾಗಿತ್ತು. ಈಗ ತಾಲ್ಲೂಕಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಶಿಕ್ಷಕರ ಮೊಬೈಲಿಗೆ ತಮ್ಮ ವೇತನದ ಸಂಪೂರ್ಣ ಮಾಹಿತಿಯನ್ನು ನೀಡುವಂಥಹ ಆಪ್‍ಅನ್ನು ತಮ್ಮ ಸ್ವಂತ ಖರ್ಚಿನಿಂದ ಸಿದ್ದಪಡಿಸಿ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 775 ಶಿಕ್ಷಕರುಗಳಿಗೆ ಏಕಕಾಲದಲ್ಲಿ ವೇತನದ ಸಂಪೂರ್ಣ ಮಾಹಿತಿಯನ್ನು ರೆವಾನಿಸುವ ಉತ್ತಮವಾದ ಕೆಲಸವನ್ನು ಮಾಡುತ್ತಿರುವುದು ನೂರಾರು ಶಿಕ್ಷಕರುಗಳಿಗೆ ಅನುಕೂಲಕರವಾಗಲಿದೆ.
ಮುಂದಿನ ದಿನಗಳಲ್ಲಿ ಶಿಕ್ಷಕರ ಭವನದಲ್ಲಿ ಸುಸಜ್ಜಿತವಾದ ಗ್ರಂಥಾಲಯವನ್ನು ಸ್ಥಾಪಿಸಲು ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಈ ಬಗ್ಗೆ ಶಿಕ್ಷಕರ ಸಂಘಟನೆಗಳು ಕಾಯೋನ್ಮುಖರಾಗಬೇಕು. ಶಿಕ್ಷಕರಿಗೆ ಆಳವಾದ ಜ್ಞಾನವನ್ನು ಒದಗಿಸುವುದು ಪುಸ್ತಕಗಳೆ ಹೊರತು ಬೇರೆ ಯಾವುದೂ ಇಲ್ಲ. ಗ್ರಂತಾಲಯಕ್ಕೆ ಪುಸ್ತಕಗಳನ್ನು ನೀಡಲು ಸಚಿವ ನಾರಾಯಣಗೌಡರು ಸೂಚನೆ ನೀಡಿದ್ದಾರೆ.
ಶಿಕ್ಷಕರ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಗಳನ್ನು ನೀಡಲು ಕ್ರಮವಹಿಸಬೇಕು. ನಮ್ಮ ಶಿಕ್ಷಕರಲ್ಲಿ ಅನೇಕ ಮಂದಿ ಸಂಪನ್ಮೂಲ ವ್ಯಕ್ತಿಗಳಿದ್ದು ನುರಿತ ಶಿಕ್ಷಕರುಗಳಿಂದ, ಉಪನ್ಯಾಸಕರುಗಳಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಬೇಕು ಆ ಮೂಲಕ ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಎಸ್.ಧರ್ಮಪ್ಪ, ಕಾರ್ಯದರ್ಶಿ ಸಿ.ಟಿ.ಲಕ್ಷ್ಮಣಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯಾದ್ಯಕ್ಷ ಪದ್ಮೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರಾಜ್ಯ ಪ್ರ.ಶಾ.ಶಿ ಸಂಘದ ಸಹಕಾರ್ಯದರ್ಶಿ ಸಂಧ್ಯಾರಾಣಿ, ಶಿಕ್ಷಣ ಸಂಯೋಜಕರುಗಳಾದ ವೇಣುಗೋಪಾಲ್, ಸೋಮಶೇಖರ್, ಸುರೇಶ್, ಜ್ಞಾನೇಶ್, ಪದಾಧಿಕಾರಿಗಳಾದ ಜಿ.ಎಸ್. ಮಂಜು, ಇಂದ್ರಾಣಿ, ಪವಿತ್ರ, ವಾಣಿ, ಜೆ.ಜಯರಾಮು, ಚಿಕ್ಕಸ್ವಾಮಿ, ಕೃಷ್ಣನಾಯಕ್, ಸಿಂಧಘಟ್ಟನಾಗೇಶ್, ಪಿ.ಬಿ.ನಾಗರಾಜು, ಬಿ.ಆರ್.ಪಿ. ಅಶೋಕ್, ಸಿ.ಆರ್.ಪಿ ಯೋಗೇಶ್, ಲೋಕೇಶ್, ಧರ್ಮರಾಜ್, ಆರ್.ಕೆ.ಮಹೇಶ್ ಸೇರಿದಂತೆ ಹಲವರು ಹಾಜರಿದ್ದರು.