ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿ : ಫುರಖಾನ್

ಬೀದರ್,ಸೆ.6:ಮಕ್ಕಳ ಭವಿಷ್ಯ ರೂಪಿಸುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಸೈಯದ್ ಫುರಖಾನ್ ಹೇಳಿದರು.

ಬೀದರ್ ತಾಲೂಕಿನ ಯಾಕತಪೂರ್ ಗ್ರಾಮದ ಲೀಟ್ಲ್ ಫ್ಲಾವರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕ ವೃತಿ ಅತ್ಯಂತ ಜವಾಬ್ದಾರಿ ವೃತಿಯಾಗಿದ್ದು, ಸಮಾಜ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಫೀಯೋದ್ದೀನ್ ರೋಷನ್ ಆಗಮಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಸ್ಥೆ ಅಧ್ಯಕ್ಷ ಸೈಯದ್ ಅಹ್ಮದ್ ಮುದ್ದೆ ವಹಿಸಿದರು. ಶಾಲೆಯ ಶಿಕ್ಷಕರಾದ ಶರಣಪ್ಪಾ ಜಾಲೆ, ಚಾಂದ್ ಪಾಷಾ ಮತ್ತೀತ್ತರರು ಉಪಸ್ಥಿತರಿದ್ದರು.