ಶಿಕ್ಷಕರ ಬೋಧನೆಯಿಂದ ಸಮಾಜ ಪರಿವರ್ತನೆ:ಪಾಟೀಲ

ತಾಳಿಕೋಟೆ:ಸೆ.9: ವಿದ್ಯಾರ್ಥಿ ಶಿಕ್ಷಕರ ಮಧ್ಯ ಅನ್ಯೋನ್ಯವಾದ ಬಾಂಧವ್ಯ ಪ್ರಾಚೀನ ಕಾಲದಿಂದಲೂ ಬಂದಿದೆ ವಿದ್ಯಾರ್ಥಿಗಳು ಶಿಕ್ಷಕರನ್ನು ಆತ್ಮೀಯವಾಗಿ ಒಪ್ಪಿಕೊಳ್ಳುವ ಸಂದರ್ಭಗಳು ತರಗತಿಯಲ್ಲಿ ಮಾತ್ರ ಸಾಧ್ಯ ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾತು ಅನುಕರಣೀಯವಾಗಿದೆ ವಿಧ್ಯಾರ್ಥಿಯ ಭವಿಷ್ಯದ ಬದಲಾವಣೆಗೆ ಅಣಿಗೊಳಿಸುವ ಸಿದ್ಧತೆಯ ಕಾರ್ಯ ಶಿಕ್ಷಕರಲ್ಲಿ ಮಾತ್ರ ಕಾಣಲು ಸಾಧ್ಯವೆಂದು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಪಾಟೀಲ ಅವರು ಹೇಳಿದರು.
ಶುಕ್ರವಾರರಂದು ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ವಿಧ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚಿಗೆ ಲಕ್ಷಕೊಡಬೇಕು ಶಿಕ್ಷಕರಿಂದ ಕಲಿತು ಶಿಕ್ಷಕರಾಗಿ ಹೊರ ಹೊಮ್ಮುವ ನೀವುಗಳು ವಿಧ್ಯಾರ್ಥಿಗಳ ಭವಿಷ್ಯದ ಭುನಾದಿಯಾಗಬೇಕೆಂದು ತಿಳಿ ಹೇಳಿದ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನವರ ಕೊಡುಗೆ ಮತ್ತು ಅವರ ಆದರ್ಶ ಎಲ್ಲ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು.
ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಕಾಶಿನಾಥ ಮುರಾಳ ಅವರು ಮಾತನಾಡಿ ಅಧ್ಯಯನ ಶೀಲತೆ ಸಮಯಪಾಲನೆ ಶಿಸ್ತು ಇವುಗಳು ಮನುಷ್ಯನ ಮನಸ್ಸನ್ನು ಪರಿವರ್ತಿಸಿ ಭವಿಷ್ಯದ ನಾಯಕರನ್ನಾಗಿ ರೂಪಿಸುತ್ತದೆ ಕಲಿಯುತ್ತಾ ಕಲಿಸುವ ಶಿಕ್ಷಕರು ವರ್ಗ ಇಂದಿನ ಯುಗದಲ್ಲಿ ಅತ್ಯಂತ ಅವಶ್ಯಕವಾಗಿದೆ ಆ ದಿಶೆಯಲ್ಲಿ ವಿಧ್ಯಾರ್ಥಿಗಳ ಪ್ರಯತ್ನ ನಿರಂತರವಾಗಿ ಸಾಗಲಿ ಶಿಕ್ಷಕರ ಬೋಧನೆ ಸಮಾಜ ಪರಿವರ್ತನೆಗೆ ಪೂರಕವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್.ಎಂ. ಬಂಟನೂರ ಅವರು ಮಾತನಾಡಿ ತಾಳ್ಮೆ ಸಹನೆ ಜೊತೆಗೆ ನಿರಂತರ ಅಧ್ಯಯನದ ಪ್ರವೃತ್ತಿಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ವಿದ್ಯೆ ಎಂಬುದು ಯಾರ ಸತ್ವ ಅಲ್ಲ ಅದನ್ನು ಸಂಪಾದಿಸುವ ಗುರಿಯತ್ತ ವಿದ್ಯಾರ್ಥಿಯ ಜೀವನ ಸಾಗಬೇಕು ಕಲಿಯುವ ಅವಧಿಯಲ್ಲಿ ಕಷ್ಟಪಟ್ಟಾಗ ಮಾತ್ರ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಯಾರೂ ಕದಿಯಲಾರದ ಸಂಪತ್ತು ಎಂದರೆ ಅದುವೇ ಶಿಕ್ಷಣ ಮತ್ತು ವಿಧ್ಯೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಖಾಸ್ಗತೇಶ್ವರ ಶಿಕ್ಷಣ ವಿದ್ಯಾಲಯದ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಮಲ್ಲಮ್ಮ ಮತ್ತು ಯಲ್ಲಮ್ಮ ಸಂಗಡಿಗರು ಪ್ರಾರ್ಥಿಸಿದರು. ಭಾಗ್ಯ ಹಿಕ್ಕಲಗುತ್ತಿ ನಿರೂಪಿಸಿದರು. ಅಶ್ವಿನಿ ಆಶಾಳ ಸ್ವಾಗತಿಸಿದರು. ಸುಮಾ ಬಂಟನೂರ ವಂದಿಸಿದರು.