ಶಿಕ್ಷಕರ ಬೇಡಿಕೆ ಈಡೇರಿಕೆಗೆ ಮನವಿ


ಸಂಜೆವಾಣಿ ವಾರ್ತೆ    
ಕುಕನೂರು, ಆ.20:  ಕುಕನೂರಿನಲ್ಲಿ  6 ರಿಂದ 8 ನೇ ತರಗತಿ ಬೋಧಿಸುವ ಶಿಕ್ಷಕರಿಗಾಗಿ ನಡೆಯುವ ಸಮಾಲೋಚನೆಗೆ ಪಿ.ಎಸ್.ಟಿ ಶಿಕ್ಷಕರನ್ನು ಬಿಡುಗಡೆಗೊಳಿಸಿ ಸಮಾಲೋಚನೆಗೆ ಹಾಜರಾಗುವಂತೆ ಮಾಡಿ ಅವರಿಗೆ ಸಮಾಲೋಚನೆ ನಡೆಸುತ್ತಿರುವುದ ಕ್ಕ ಶಿಕ್ಷಕರ ವಿರೋಧ ವೀದೆ. ಹಾಗೂ ಪಿ.ಎಸ್.ಟಿ ಶಿಕ್ಷಕರಿಗೆ 1 ರಿಂದ 5 ಬೋಧನೆ ಗೆ ಅರ್ಹರು ಎಂದು ಇಲಾಖೆ ಪರಿಗಣಿಸಿರುವುದು, ವರ್ಗಾವಣೆಯಲ್ಲಿಯೂ ತಾರತಮ್ಯ ಮಾಡಿರುವುದು ಇಲಾಖೆಯೇ ಹಾಗಾಗಿ ನಮಗೆ ಕೇವಲ 1 ರಿಂದ 5 ಮಾತ್ರ ಸಮಾಲೋಚನೆಗೆ ಹಾಗೂ ತರಬೇತಿಗೆ ಪರಿಗಣಿಸಿ 6 ರಿಂದ 8 ತರಬೇತಿಗೆ ಪರಿಗಣಿಸಬೇಡಿ, 1 ರಿಂದ 5 ಹಿಂಬಡ್ತಿಯನ್ನು ರದ್ದುಗೊಳಿಸಿ ಸಿ&ಆರ್ ತಿದ್ದುಪಡಿ ಮಾಡಿ ನ್ಯಾಯ ದೊರೆಯುವವರೆಗೂ ಮುಂದಿನ ದಿನಗಳಲ್ಲಿ ತರಬೇತಿಗೆ, ಸಮಾಲೋಚನೆಗೆ ಆಹ್ವಾನಿಸಬೇಡಿ ಎಂದು ಸಮಾಲೋಚನೆ ನೀಡಲು ಹಾಗೂ ವೀಕ್ಷಿಸಲು ಆಗಮಿಸಿದ ಇಲಾಖೆಯ ಅಧಿಕಾರಿಗಳಿಗೆ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಮಹೇಶ ಸಬರದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಮಾರುತೇಶ ತಳವಾರ ಹಾಗೂ ತರಬೇತಿಗೆ ಆಗಮಿಸಿದ ಪಿ.ಎಸ್.ಟಿ ಶಿಕ್ಷಕರು ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.